ಕಾರವಾರ:ಎರಡು ದಿನಗಳ ರಾಜ್ಯಮಟ್ಟದ ಸಾಹಿತ್ಯ ಕಮ್ಮಟ ಕಥಾಯಾನ ಸಾಹಿತ್ಯಕ ಕಾರ್ಯಾಗಾರ ಕೈಗಾ ಅಣುವಿದ್ಯುತ್ ನಿಗಮ ಸಾಮಾಜಿಕ ಜವಾಬ್ದಾರಿ ಘಟಕ ವತಿಯಿಂದ ಕೈಗಾ ವಸತಿ ಸಂಕೀರ್ಣದಲ್ಲಿ ಜೂನ್ 9-10 ರಂದು ನಡೆಸಲು ಯೋಜಿಸಲಾಗಿದೆ.

ಆಸಕ್ತ ಉದಯೋನ್ಮುಖ ಬರಹಗಾರರು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದ್ದು ಆಯ್ಕೆ ಪ್ರಕ್ರಿಯೆ ಮಾನದಂಡವಾಗಿ ಆಸಕ್ತ ಶಿಬಿರಾರ್ಥಿಗಳು ತಮ್ಮ ಇತ್ತಿಚೀನ ಪ್ರಕಟಿತ ಅಥವಾ ಹಸ್ತಪ್ರತಿ ರೂಪದಲ್ಲಿರುವ ಕಥೆ, ಲೇಖನ, ವೈಜ್ಞಾನಿಕ ಬರಹ ಯಾವುದಾದರೂ ಒಂದನ್ನು 750 ಶಬ್ದ ಮಿತಿಯಲ್ಲಿ [email protected] ಗೆ ಮೇ 10 ರ ಒಳಗಾಗಿ ಸಲ್ಲಿಸಲು ಕೋರಲಾಗಿದೆ.

RELATED ARTICLES  ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಮತ್ತು ಸೇವಾ ಘಟಕವನ್ನು ಸ್ಥಾಪಿಸಲು ಅರ್ಜಿ ಆಹ್ವಾನ.

ಈ ಬರಹಗಳನ್ನು ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಾಗಿಯೂ ಗಣಿಸಲಾಗುತ್ತಿದ್ದು ಆಯ್ದ ಮೂರು ಉತ್ತಮ ಬರಹಗಳಿಗೆ ರಾಜ್ಯಮಟ್ಟದ ಪುರಸ್ಕಾರ ನೀಡಲಿದೆ. ಸಮಗ್ರ ಸಾಹಿತ್ಯಿಕ ಬರವಣಿಗೆಯ ತಾಂತ್ರಿಕತೆಯ ಕುರಿತು, ಕಥಾಯಾನ- ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತ್ಯಿಕ ಕಮ್ಮಟ ಡಾ.ಬಿ. ಆರ್. ಲಕ್ಷ್ಮಣರಾವ್, ರೋಹಿತ ಚಕ್ರತೀರ್ಥ, ಡಾ.ಕೆ.ಎನ್. ಗಣೇಶಯ್ಯ, ಪತ್ರಕರ್ತ ಗಂಗಾಧರ ಹಿರೇಗುತ್ತಿ, ಡಾ. ನಿರಂಜನ ವಾನಳ್ಳಿ, ಉದಯಶಂಕರ ಪುರಾಣಿಕ, ಸಂತೋಷಕುಮಾರ ಮೆಹೆಂದಳೆ, ಬಿ.ಎನ್.ವಾಸರೆ, ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂತೋಷಕುಮಾರ ಮೆಹೆಂದಳೆ-9480842680 ಸಂಪರ್ಕಿಸಲು ಕೋರಲಾಗಿದೆ.

RELATED ARTICLES  ಸ್ಪಂದನ ಸಂಸ್ಥೆಯಿಂದ ಎಸ್.ಡಿ.ಎ ಮತ್ತು ಎಫ್.ಡಿ.ಎ. ಪರೀಕ್ಷಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಗತಿ