ಕಾರವಾರ:ಕಾರವಾರ ಅಂಕೋಲಾ ಕ್ಷೇತ್ರ ಮಾತ್ರವಲ್ಲದೆ ಜಿಲ್ಲೆಯ ನಾನಾ ಭಾಗ ತನ್ನ ಸಮಾಜ ಸೇವೆ, ಹೋರಾಟದ ಮೂಲಕವೇ ಪ್ರಸಿದ್ದಿ ಹೊಂದಿದ ಮಾಧವ ನಾಯಕ ಈ ಭಾರಿ ಕಾರವಾರ ಅಂಕೋಲಾ ಕ್ಷೇತ್ರದಿಂದ ಶರದ್ ಪವಾರ್ ನೇತೃತ್ವದ ಎನ್.ಸಿ.ಪಿ ಪಕ್ಷದ ಮೂಲಕ ಕಣಕ್ಕೆ ಇಳಿಯುವ ಸಿದ್ದತೆ ಮಾಡಿಕೊಂಡಿದ್ದಾರೆ ಎಂಬ ವರದಿ ಲಭ್ಯವಾಗಿದೆ.
ಈಗಾಗಲೇ ಮುಂಬೈಗೆ ತೆರಳಿ ಎನ್ ಸಿಪಿ ಪಕ್ಷದ ನಾಯಕರ ಜೊತೆ ಮಾತನಾಡಿ ಟಿಕೇಟ್ ಖಚಿತ ಪಡಿಸಿಕೊಂಡು ಹುಬ್ಬಳ್ಳಿಯಲ್ಲಿ ಪಕ್ಷದ ಮುಖಂಡರಿಂದ ಬಿಫಾರಂ ತಂದಿರುವ ಮಾಧವ ನಾಯಕ ಕಾರವಾರ ಅಂಕೋಲಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಸಿದ್ದತೆ ಮಾಡಿಕೊಂಡಿದ್ದಾರೆ.
ಈ ಭಾರಿ ಚುನಾವಣೆಗೆ ಸ್ಪರ್ಧಿಸಲು ಇಂಗಿತ ತೋರಿಸಿ ಸಾರ್ವಜಬಿಕ ಸಮ್ಮುಖದಲ್ಲೇ ಸಭೆ ನಡೆಸಿದಾಗ ಬಹುತೇಕ ಜನರು ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷದ ಟಿಕೇಟ್ ನಿರೀಕ್ಷೆಯಲ್ಲಿ ಮಾಧವ ನಾಯಕರಿದ್ದು ಎರಡು ಪಕ್ಷದಿಂದ ಬೇರೆ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿದ್ದರಿಂದ ಎನ್ ಸಿಪಿ ಪಕ್ಷದ ಮೂಲಕ ಚುನಾವಣಾ ಕಣಕ್ಕೆ ಇಳಿಯಲು ಸಿದ್ದತೆ ಮಾಡಿಕೊಂಡಿದ್ದಾರೆ.
ಮಾಧವ ನಾಯಕ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಇರುವ ಕೋಮಾರಪಂಥ ಸಮುದಾಯದವರಾಗಿದ್ದು ಸಮುದಾಯದ ಹಲವರು ಮಾಧವ ನಾಯಕರಿಗೆ ಬೆಂಬಲಿಸುವ ಸಾಧ್ಯತೆ ಇದೆ. ಇದಲ್ಲದೇ ಜಾತ್ಯಾತೀತ ಮನೋಭಾವನೆಯ ಹಾಗೂ ಸದಾ ಎಲ್ಲಾ ಸಮುದಾಯದವರಿಗೂ ಸಹಾಯ ಮಾಡುವ ಮಾಧವ ನಾಯಕರಿಗೆ ಮೀನುಗಾರ, ಹಾಲಕ್ಕಿ, ಕೊಂಕಣ ಮರಾಠ, ಪಡ್ತಿ, ಗುನಗಿ, ಗುನಗಾ, ಬಂಡಾರಿ, ನಾಮದಾರಿ, ಮುಸ್ಲೀಂ ಕ್ರಿಶ್ಚಿಯನ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವ ಮಾತನ್ನ ನೀಡಿದ್ದು ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೇಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಇದ್ದು ಮುಂದಿನ ದಿನದಲ್ಲಿ ಮಾಧವ ನಾಯಕ ಈ ಮೂವರು ಅಭ್ಯರ್ಥಿಗಳಿಗೆ ಪ್ರಭಲ ಪೈಪೋಟಿ ನೀಡಲಿದ್ದು ಕಾರವಾರ ಅಂಕೋಲಾ ಜನರು ಈ ಭಾರಿ ಮೂವರು ಅಭ್ಯರ್ಥಿಗಳು ಬೇಡವೆಂದು ತನ್ನನ್ನ ಆಯ್ಕೆ ಮಾಡಲಿದ್ದಾರೆಂದು ಮಾಧವ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.