ಗೋಕರ್ಣ: ಇಲ್ಲಿನ ಮುಖ್ಯ ರಸ್ತೆಯ ಅಗಲೀಕರಣ ಹಾಗೂ ಸುಧಾರಣೆ ಅಡಿಯಲ್ಲಿ ಮುಖ್ಯರಸ್ತೆ ಡಾಂಬರಿಕರಣ ಕೈಗೊಂಡಿದ್ದು, ಅದರಂತೆ ರಸ್ತೆಯ ಬದಿ ಪಾದಚಾರಿಗಳಿಗೆ ಪುಟಬಾತ್ ನಿರ್ಮಾಣ ಮಾಡುತ್ತಿದ್ದು ,ಇಲ್ಲಿನ ಬಿ.ಎಸ್.ಎನ್. ಎಲ್ ಕಛೇರಿಯಿಂದ ಮಾರತಿ ಕಟ್ಟೆಯವರೆಗೆ ನಿರ್ಮಿಸಲು ಉದ್ದೇಶಿಸಿದ್ದು. ಇಕ್ಕಾಟದ ಸ್ಥಳದ ಬದಲು ವಿಶಾಲವಾದ ಸ್ಥಳದಲ್ಲಿ ನಿರ್ಮಿಸುತ್ತಿದ್ದಾರೆ, ಇದರಿಂದ ವಾಹನಗಳ ನಿಲುಗಡೆಗೆ ಅನುಕೂಲ ಹೊರತು ಪಾದಚಾರಿಗಳಿಗೆ ಸಂಚರಿಸಲು ಅಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೆ ನಿರ್ಮಾಣ ಹಂತದಲ್ಲಿರುವ ಜಾಗದಲ್ಲಿ ವಾಹನ ಗಳ ನಿಲುಗಡೆ ಪ್ರಾರಂಭವಾಗಿದೆ.

RELATED ARTICLES  ಭೂಮಿಕಾ ಭಟ್ಟ ರಾಜ್ಯಕ್ಕೆ ಪ್ರಥಮ.

ಹತ್ತಿರದ ವಸತಿ ಗೃಹಗಳಿಗೆ ಬಂದ ಪ್ರವಾಸಿ ವಾಹನಗಳು ಸಹ ಇಲ್ಲಿ ನಿಲುಗಡೆಗೊಳಿಸುತ್ತಾರೆ. ತೀರಾ ಇಕ್ಕಾಟ್ಟಾದ ಗಂಜೀಗದ್ದೆ ಮಾರ್ಗದಲ್ಲಿ ಪಾದಚಾರಿಗಳಿಗೆ ಪುಟಬಾತ್ ನಿರ್ಮಿಸಿದರೆ ಇಲ್ಲಿನ ಜನರ ಸಂಚಾರಕ್ಕೆ ಅನುಕೂಲವಾಗುತ್ತಿತ್ತು ಎಂಬ ಮಾತು ಕೇಳಿ ಬರುತ್ತುದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನೀಯರ್ ವರನ್ನು ವಿಚಾರಿಸಿದಾಗ ನಮ್ಮ ಇಲಾಖೆ ಜಾಗ ಖಾಲಿ ಇದ್ದ ಕಡೆ ನಾವು ನಿರ್ಮಿಸಿದ್ದೇವೆ. ಉಳಿದ ಕಡೆ ನಿರ್ಮಿಸಲು ನಮ್ಮ ಇಲಾಖಾ ಜಾಗ ಒತ್ತುವರಿ ತೆರವುಗೊಳಿಸ ಬೇಕಾಗಿದ್ದು, ಇದಕ್ಕೆ ಸುಧೀರ್ಘ ಕಾಲವಕಾಶ ಬೇಕಾಗುತ್ತದೆ , ಆ ಕಾರಣದಿಂದ ಇಲಾಖೆ ಜಾಗ ಖುಲ್ಲಾ ಇದ್ದಲ್ಲಿ ಮೂದಲು ನಿರ್ಮಿಸುತ್ತೇವೆ ಎಂದು ತಿಳಿಸಿದ್ದಾರೆ.

RELATED ARTICLES  ಜಯಶ್ರೀ ಎಂಟರ್ಪ್ರೈಸಸ್ - ಬಿಲ್ಡಿಂಗ್ ಮಟೀರಿಯಲ್ಸ್ ಮಳಿಗೆ ಉದ್ಘಾಟನೆ

ಈ ಮೂದಲು ಸಹ ರಸ್ತೆ ಸುಧಾರಣೆಗೆ ಪ್ರಾರಂಭಿಸಿದಾಗ ಮುಖ್ಯ ಕಡಲತೀರದಿಂದ ಪ್ರಾರಂಭಿಸಬೇಕು ಎಂದು ಸಾರ್ವಜನಿಕರು , ಜಪ್ರತಿನಿಧಿಗಳು ಪ್ರತಿಭಟಿಸಿದ್ದರು. ನಂತರ ಎರಡನೆ ಹಂತದಲ್ಲಿ ಅಲ್ಲಿ ಪ್ರಾರಂಭಿಸಲಾಗುವುದು ಎಂಬ ಇಲಾಖೆ ಅಧಿಕಾರಿಗಳ ಭರವಸೆಯ ನಂತರ ಕಾಮಗಾರಿಗೆ ಚಾಲನೆ ದೊರೆತಿತ್ತು.