ಸಿದ್ದಾಪುರ:ತಾಲೂಕಿನ ಜಾತ್ಯತೀತ ಜನತಾದಳದ ಕಾರ್ಯಾಲಯದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರು, ನಾಮದಾರಿ ಸಮಾಜದ ಪ್ರಮುಖರಾದ ದಿವಸ್ಪತಿ ನಾಯ್ಕ ಸಿದ್ದಾಪುರ ತಾಲುಕ ಬಿಜೆಪಿ ಕಾರ್ಯದರ್ಶಿ ಅವರು, ಬಿಜೆಪಿ ಯನ್ನು ತೊರೆದು,  ಸೊರಬದ ಶಾಸಕರಾದ ಮಧು ಬಂಗಾರಪ್ಪ  ಹಾಗೂ   ಡಾ.ಶಶಿಭೂಷಣ ಹೆಗಡೆಯವರ   ನಾಯಕತ್ವವನ್ನು ಒಪ್ಪಿ, ಜಾತ್ಯತೀತ ಜನತಾದಳವನ್ನು ಸೇರಿದರು.

RELATED ARTICLES  ಕಾನೂನು ಮತ್ತು ಸರಕಾರದ ನಡವಳಿಕೆಗೆ ವ್ಯತಿರಿಕ್ತವಾಗಿ ನೋಟಿಸ್ ; ಅತಿಕ್ರಮಣದಾರರನ್ನ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರೀಯೆಗೆ ಖಂಡನೆ- ರವೀಂದ್ರ ನಾಯ್ಕ.

ರಾಜ್ಯ ಹಿಂದುಳಿದ ವಿಭಾಗದ ಉಪಾಧ್ಯಕ್ಷರಾದ ತಿಮ್ಮಪ್ಪ ಮಡಿವಾಳ, ಹಾಗೂ ತಾಲೂಕಾ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತಾನಾಡಿದ ದಿವ್ಯಸ್ಪತಿ ನಾಯ್ಕ ಅವರು ನಾವೆಲ್ಲ ದಿವಂಗತ ಬಂಗಾರಪ್ಪ ಅವರ ಅನುಯಾಯಿಗಳು, ಈಗ ಅವರ ಮಗ ಸೊರಬದ ಶಾಸಕ ಮಧು ಬಂಗಾರಪ್ಪ ಅವರ ನಾಯಕತ್ವದಲ್ಲಿ ಜೆಡಿ ಎಸ್ ನಲ್ಲಿ ಕೆಲಸ ಮಾಡುತ್ತೆವೆ, ಯಾವದೆ ಜಾತಿ ಮತದ ಸಂಘಟನೆ ಮೇಲೆ ರಾಜಕೀಯ ಮಾಡದೆ ಪಕ್ಷದಲ್ಲಿ ಶ್ರಮಿಸಿ ಶಶಿಭೂಷಣ ಅವರ ಗೆಲ್ಲಿಸುತ್ತೆವೆ ಎಂದರು

RELATED ARTICLES  ಅಕ್ರಮಗಳನ್ನು ತಡೆಯಲು ಉತ್ತರ ಕನ್ನಡ ಜಿಲ್ಲಾಡಳಿತ ಮತ್ತಷ್ಟು ಕ್ರಮ: ಜಾರಿಯಾದ ಮಾದರಿ ನೀತಿ ಸಂಹಿತೆ.

ಅವರನ್ನು ಈ ಸಂದರ್ಭದಲ್ಲಿ ಜಿಲ್ಲಾ ರೈತಮೊರ್ಚದ ಜಿಲ್ಲಾ ಕಾರ್ಯದರ್ಶಿ ಯನ್ನಾಗಿ ಜಿಲ್ಲಾಧ್ಯಕ್ಷರ ಅನುಮೋದನೆ ಮೆರೆಗೆ ನೇಮಿಸಲಾಯಿತು.