ಕುಮಟಾ: ಬ್ಲಾಕ್ ಕಾಂಗ್ರೆಸ್ ಕುಮಟಾ ವತಿಯಿಂದ ಕೋಡ್ಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ನಡೆಸಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾತನಾಡಿದರು.

ಕೊಡ್ಕಣಿ ಭಾಗದಲ್ಲಿ ನಾನು ಸರ್ಕಾರದಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದು, ಅದರಲ್ಲಿ ನಡುಗಡ್ಡೆ ಐಗಳಕೂರ್ವೆಗೆ ಸಂಪರ್ಕಿಸಲು ದೋಣಿ ಮೂಲಕವೇ ಸಾಗಬೇಕಿತ್ತು ಅದನ್ನು ಮನಗಂಡ ನಾನು ಸರ್ಕಾರದ ಮನವೊಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಪಟ್ಟು ಸೇತುವೆಯನ್ನು ಮಂಜೂರಿ ಮಾಡಿಸಿಕೊಟ್ಟಿರುತ್ತೇನೆ ಎಂದರು.

RELATED ARTICLES  ಶಿರಸಿಯ ಮಾರಿಗುಡಿಯಲ್ಲಿ ತಯಾರಿಸಲಾದ ಗಣಪ ಶಿರಸಿ ತಾಲೂಕಿಗೆ ಪ್ರಥಮ : ನಾಗರಾಜ ಗುನಗ ಅವರ ಕಲೆಗೆ ಸಂದ ಗೌರವ.

ಈ ಭಾಗದಲ್ಲಿ ಶಾಶ್ವತವಾಗಿ ಕುಡಿಯುವ ನೀರೀನ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದ್ದು ಈ ಭಾಗದ ಮತದಾರರು ನನಗೆ ಅತಿ ಹೆಚ್ಚು ಮತ ನೀಡಿ ನನ್ನನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಂಬಿದ್ದೇನೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ತಾರಾ ಗೌಡ, ಶ್ರೀಮತಿ ಸುರೇಖಾ ವಾರೆಕರ,ಘಟಕ ಅಧ್ಯಕ್ಷರಾದ ಶ್ರೀ ಮಂಜು ಪಿ ನಾಯ್ಕ,ಮೋಹನ್ ಪಟಗಾರ, ಹೊನ್ನಪ್ಪ ಪಟಗಾರ, ಸುರೇಶ ನಾಯ್ಕ,ಮಂಜು ರುಕ್ಕಪ್ಪ ನಾಯ್ಕ, ಜಯರಾಮ ನಾಯ್ಕ, ಮನೋಜ ನಾಯ್ಕ ಹಾಗೂ ಸುಮಿತ್ರಾ ನಾಯ್ಕ ಉಪಸ್ಥಿತರಿದ್ದರು.

RELATED ARTICLES  ಸಾರ್ವಜನಿಕರಿಂದ ಅಹವಾಲು ಸ್ವೀಕಾರ