ಅಶೋಕಾವನದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಅಷ್ಟಬಂಧ-ಪುನಃಪ್ರತಿಷ್ಟಾ-ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂಪನ್ನ.
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಪುನಃ ಪ್ರತಿಷ್ಠಾ ಕಾರ್ಯ ನೆರವೇರಿಸಿದರು. ಆ ಕುರಿತಂತೆ ವೈದಿಕ ಕಾರ್ಯಗಳು ಸಂಪನ್ನಗೊಂಡವು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿ ನೀಡಿದ ಶ್ರೀ ಸಂಸ್ಥಾನದವರಿಗೆ ಸಮೀತಿಯವರು ಫಲ ಸಮರ್ಪಣೆ ಮಾಡಿದರು. ನಂತರ ಪ್ರಾಸ್ಥಾವಿಕ ಮಾತನಾಡಿದ ಸಮೀತಿಯ ಅಧ್ಯಕ್ಷ ಆರ್ ಎಸ್ ಹೆಗಡೆ ಹರಿಗೆ ದೇವಾಲಯದ ನಿರ್ಮಾಣದಲ್ಲಿ ಸಹಕರಿಸಿದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು. ಯಾವುದೇ ಸಾಲ ಮಾಡದೇ ಶಿಷ್ಯರ ಸಹಕಾರದಿಂದ ಈ ದೇವಾಲಯ ನಿರ್ಮಾಣಗೊಂಡಿದೆ ಮುಂದಿನ ದಿನಗಳಲ್ಲಿ ವಿದ್ಯಾಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ ಅದಕ್ಕೆ ಎಲ್ಲ ಶಿಷ್ಯರ ಸಹಕಾರ ಬೇಕು ಎಂದರು.
ಮಠದ ಕಾರ್ಯದಲ್ಲಿ ಸೇವೆಗೈದ ಹಾಗೂ ಸಾಧಕರನ್ನು ಗೌರವಿಸಲಾಯಿತು.
ಮಲ್ಲಿಕಾರ್ಜುನನೆಂಬ ಮರದ ಕೊಂಬೆ ಈ ಜಗ ಆ ಮರದ ಒಂದು ಚಿಗುರು ಮಠ. ಮಲ್ಲಿಕಾರ್ಜುನನೆಂದರೆ ಶಂಕರರ ಮೂರ್ತಿರೂಪ ಮಲ್ಲಿಕಾರ್ಜುನ, ಮಾತನಾಡುವ ಮಲ್ಲಿಕಾರ್ಜುನ ಶಂಕರರು. ಮಲ್ಲಿಕಾರ್ಜುನ ಎಂದರೆ ಮಲ್ಲಿಗೆಯಂತೆ ಬಿಳುಪು,ನಮ್ಮ ಬದುಕನ್ನು ಮಲ್ಲಿಗೆಯಂತೆ ಮಾಡಲಿ ಎಂದರು.
ಮಾತು ಸಾಮ್ರಾಜ್ಯವಾದರೆ ಅಲ್ಲಿ ಮಾತು ಮಾತ್ರ .ಇಲ್ಲಿ ಕೃತಿಯೇ ಮುಖ್ಯ. ಇಂದಿನ ಕೆಲಸಕ್ಕೆ ಜೀವ ಸಾರ್ಥಕ ಎಂಬ ಶಬ್ಧವೂ ಕಡಿಮೆ , ಶಂಕರಾಚಾರ್ಯರ ಮಠ ಸ್ಥಾಪನೆ ನಂತೆ ಮಠದ ಚರಿತ್ರೆಯಲ್ಲಿ ಇದೇ ದೊಡ್ಡ ಕಾರ್ಯ.
ಹುಲಿ ಹುಲ್ಲೆಗೆ ಹಾಲೂಡಿದ ಸ್ಥಳ ಈ ಅಶೋಕೆ. ಜಿಂಕೆ ಮರಿಗೆ ಪ್ರತ್ಯಕ್ಷ ವೈರಿ ಹುಲಿಯೂ ಜಿಂಕೆಗೆ ಹಾಲೂಡಿದ ಪುಣ್ಯ ಭೂಮಿ. ಇಂತಹ ಜಾಗದಲ್ಲಿ ಶಂಕರರು ಮಠ ನಿರ್ಮಾಣ ಮಾಡಿದರು. ಮಲ್ಲಿಕಾರ್ಜುನ ಪ್ರಕಾರ ಸನ್ನನಾದ ಎಂದರೆ ನಡೆವುದೆಲ್ಲ ಚಮತ್ಕಾರ.
ಇಂದಿನ ಕಾರ್ಯಕ್ಕೆ ಪ್ರಕೃತಿಯೇ ಪ್ರತಿಕ್ರಿಯೆ ನೀಡಿದೆ. ಮಳೆಯ ಹೂ ಮಳೆ ಭೂಮಿ ತಲುಪಿತು. ಅದು ದೈವ ಪ್ರಸನ್ನನಾದ ಸಂಕೇತ ,ತಂಪಾದ ಗಾಳಿ ಪೂರ್ಣಾನುಗ್ರಹದ ಸಂಕೇತವಾಗಿ ಬಂದಿವೆ.
ಮೂಲ ಮರೆತ ಮನುಷ್ಯನಿಗೆ ನೆಲೆ ಇಲ್ಲ. ಹಿರಿಯ ಗುರುಗಳು ಮೂಲ ಮಠದ ಬಗ್ಗೆ ಹೇಳಿದ ವಾಕ್ಯ ಮೊದಲು ಹೃದಯದಲ್ಲಿ ನೆಲೆ ನಿಂತಿತು. ವಾಕ್ಯ ಪ್ರತಿಷ್ಠೆ ಆಗ ಆಗಿತ್ತು ಈಗ ಈ ಪ್ರತಿಷ್ಠೆಯಾಗಿದೆ. ಹಿರಿಯ ಗುರುಗಳು ಈ ಕಡೆಗೆ ಪಾದ ಇಟ್ಟಿದ್ದರು ಇಂದು ಅದು ಸಂಪನ್ನವಾಯಿತು.
ಒಂದು ಕಾಲದಲ್ಲಿ ಶ್ರೇಷ್ಟ ಬ್ರಾಹ್ಮಣರ ಅಗ್ರಹಾರವಾಗಿದ್ದ
ಅಶೋಕೆಗೆ ತಗುಲಿದ್ದ ಗ್ರಹಣ ಕಳೆದಿದೆ. ಈಗ ಮತ್ತೆ ಅಶೋಕೆಗೆ ಕಳೆ ಬಂದಿದೆ. ಕೇಳಿದಷ್ಟು ಭೂಮಿ ಕೊಟ್ಟ ದೈವರಾತ ಶರ್ಮರ ಕೊಡುಗೆ ಅಪಾರ. ದೇವರ ಜಾಗವನ್ನು ದೇವರೇ ಕಾಯುತ್ತಿದ್ದ ಎಂಬುದಕ್ಕೆ ಇದೇ ಸಾಕ್ಷಿ.
ನಮಗೆ ಬೇಕಾದಷ್ಟು ಮನೆಗಳಿದೆ .ಶಿಷ್ಯರಿಗೆ ಮಠ ಎಂದು ಹೇಳಿಕೊಳ್ಳುವ ಹೆಗ್ಗಳಿಕೆಗೆ ಈ ಮಠದ ನಿರ್ಮಾಣ. ಗುರುಗಳಿಗಾಗಿ ಅಲ್ಲ ಶಿಷ್ಯರಿಗಾಗಿ ಮಠ. ಮಲ್ಲಿಕಾರ್ಜುನ ದೇವಾಲಯ ಮಠದ ಮೂಲ.
ಗೋಕರ್ಣ ಎಂಬುದು ಅದ್ಭುತ ಸ್ಥಳ ,ಮಠಕ್ಕೆ ೩ ಕಂಗಳನ್ನು ನೀಡಿದ ಸ್ಥಳ ಇದು. ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಶ್ರೇಯಸ್ಸಾಗಲಿ. ಎಂದು ಹರಸಿದರು.