ಕುಮಟಾ: ಬಹುದಿನದಿಂದ ಕಗ್ಗಂಟಾಗಿದ್ದ ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಘೋಷಣೆ ಇಂದು ನಡೆದಿದೆ. ಉತ್ತರಕನ್ನಡದ ಪ್ರಮುಖ ಕ್ಷೇತ್ರ ಎನಿಸಿಕೊಂಡಿದ್ದ ಕುಮಟಾ ಹೊನ್ನಾವರ ಕ್ಷೇತ್ರ ಅನೇಕ ಜನ ಆಕಾಂಕ್ಷಿಗಳಿಂದ ಬಿಗಿಯಾದ ವಾತಾವರಣದಲ್ಲಿ ಇತ್ತು. ಪ್ರಮುಖ ಆಕಾಂಕ್ಷಿಗಳನ್ನು ಸಮತೋಲನ ಗೊಳಿಸಲು ಹೈಕಮಾಂಡ್ ಹರ ಸಾಹಸ ಪಟ್ಟಿದೆಯೆಂದು ಊಹಿಸಲಾಗಿದೆ. ಕೊನೆಗೂ ಅಧಿಕೃತವಾಗಿ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದ್ದು ಮಾಜಿ ಶಾಸಕ ಹಾಗೂ ಜೆಡಿಎಸ್ ತೊರೆದು ಬಿಜೆಪಿ‌ ಸೇರಿರುವ ದಿನಕರ ಶೆಟ್ಟಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ರಾಜಕೀಯದಲ್ಲಿ ಅನೇಕ ವರ್ಷಗಳಿಂದ ಗುರ್ತಿಸಿಕೊಂಡಿರುವ ದಿನಕರ ಶೆಟ್ಟಿ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅನೇಕರ ನಡುವೆ ನನ್ನನ್ನು ಗುರ್ತಿಸಿ ತನಗೆ ಅಧಿಕೃತ ಟಿಕೆಟ್ ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸುವ ದಿನಕರ ಶೆಟ್ಟಿಯವರು. ಸತ್ವಾಧಾರ ನ್ಯೂಸ್ ಗೆ ಪ್ರತಿಕ್ರಿಯಿಸಿ ಪಕ್ಷದ ಮುಖಂಡರಿಗೆ ಧನ್ಯವಾದ ಸಮರ್ಪಿಸಿದರು.

ದಿನಕರ‌ಶೆಟ್ಟಿಯವರ ಸಾಧನೆ ಹಾಗೂ ಕಾರ್ಯಗಳ ಕುರಿತಾಗಿ ವಾಟ್ಸಪ್ ನಲ್ಲಿ ಅವರ ಅಭಿಮಾನಿಗಳು ವಿವರಗಳನ್ನು ಹಂಚುತ್ತಿದ್ದು ಅವರನ್ನು ಬೆಂಬಲಿಸುವ ಭಾವನೆ ವ್ಯಕ್ತಪಡಿಸುತ್ತಿದ್ದಾರೆ.

ದಿನಕರ ಶಟ್ಟಿಯವರ ಸಾಧನೆಯ ಕುರಿತಾಗಿ ಹಂಚಲಾದ ವಾಟ್ಸಪ್ ಸಂದೇಶ ಇಲ್ಲಿದೆ.

2008 ರಿಂದ 2013 ರ ಅವಧಿಯಲ್ಲಿ ಮಾಜಿ ಶಾಸಕರಾದ ದಿನಕರ್ ಶೆಟ್ಟಿಯವರು ನೀಡಿದ ಕೊಡುಗೆಗಳು

* ಹೊಸಾಕುಳಿ ಪಂಚಾಯತ್ ವ್ಯಾಪ್ತಿಯ ಸಂತೆ ಗುಳಿ ಮೇಲಿನ ಬೋಳಿಕಟ್ಟಾ ಸೊಸೈಟಿ ಹತ್ತಿರ ಕಾಂಕ್ರಿಟ್ ರಸ್ತೆ ನಿರ್ಮಾಣ.

* ಬಾಳೆಗದ್ದೆ ಗೌಡರಕೇರಿ ರಸ್ತೆ ಸುಧಾರಣೆ.

* ಮುಡಾರೆ ರಸ್ತೆ ಸುಧಾರಣೆ.

* ಸಂತೆಗುಳಿ ಬಾಸ್ಕೆರಿ ಶಾಲೆ ಮುಖಾಂತರ ಎನ್.ಎಚ್.206 ಕ್ಕೆ ಸೇರುವ ರಸ್ತೆ ಸುಧಾರಣೆ.

* ಹೊಸಾಕುಳಿ ಉಮಾಮಹೆಶ್ವರಿ ದೇವಸ್ಥಾನದ ರಸ್ತೆ ಮರುಡಾಂಬರಿಕರಣ.

* ನಾಡುಮಾಸ್ಕೇರಿ ಗಂಗಾವಳಿಯಿಂದ ಸಮುದ್ರದವರೆಗೆ 1 ಲಕ್ಷ ಮೊತ್ತದಲ್ಲಿ ರಸ್ತೆಗೆ ಸೋಲಿಂಗ್ ಮೆಟಲಿಂಗ್ ನಿರ್ಮಾಣ.

* ಕುಮಟಾ ದಲ್ಲಿ ಹೊಸ ಬಸ್ಸ್ ನಿಲ್ದಾಣದ ಶಂಕುಸ್ಥಾಪನೆ.

* ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೆ ಗುಳಿಯಲ್ಲಿ ರಂಗ ಮಂದಿರ ನಿರ್ಮಾಣ.

* ಜಲಾನಯನ ಇಲಾಖೆಯಿಂದ ಅಂತರ್ಜಲದ ಮಟ್ಟ ಹೆಚ್ಚಿಸಲು ಇಂಗು ಗುಂಡಿಗಳನ್ನು ತೋಡಿಸಿದ್ದರು.

* ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ಪೂರೈಕೆ.

* ಕುಮಟಾ – ಹೊನ್ನಾವರದ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದ್ದರು.

* ಮೀನುಗಾರಿಕೆ ಮತ್ಸಶ್ರಯ ಯೋಜನೆ ಯಡಿಯಲ್ಲಿ ಇವರ 5 ವರ್ಷದ ಆಡಳಿತಾವಧಿಯಲ್ಲಿ 1500 ಕ್ಕೂ ಅಧಿಕ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದರು.

RELATED ARTICLES  ನಿರಾಶ್ರಿತ ಕನ್ನಡಿಗರ ಶಾಶ್ವತ ಪುನರ್ವಸತಿ: ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು’

* ಹನೇಹಳ್ಳಿ ಪಂಚಾಯತ್ ದ ಚಕ್ರಖಂಡೇಶ್ವರ ರಸ್ತೆ ಸುಧಾರಣೆ

* ಹನೇಹಳ್ಳಿ ಪಂಚಾಯತ್ ದ ಬೀರ ದೇವಸ್ಥಾನದ ರಸ್ತೆ ಗೆ ಸಿಮೆಂಟ್ ಕಾಂಕ್ರಿಟ್ ಹಾಕಿಸಿದ್ದು.

* ಹನೇಹಳ್ಳಿ ಪಂಚಾಯತ್ ದ ಹೊಸ್ಕೇರಿ ಗೌಡರ ಕೇರಿಗೆ ಸಿಮೆಂಟ್ ರಸ್ತೆ ನಿರ್ಮಾಣ.

* ಹಿರೇಗುತ್ತಿ ಸೋನಾರ ಕೇರಿಯ ರಸ್ತೆ ಅಗಲಿಕರಣ.

* ಹಿರೇಗುತ್ತಿ ಕಲ್ಲಿಗದ್ದೆಯಿಂದ ಭೂಮಿಗದ್ದೆಗೆ ಹೋಗುವ ಕಾಲುವೆ ದುರಸ್ತಿ.

* ಎನ್.ಎಚ್. 17 ರಿಂದ ಕೋಳಿ ಮಂಜುಗುಣಿ ರಸ್ತೆ ನಿರ್ಮಾಣ.

* ಕುಮಟಾ ದ ಮಳವಳ್ಳಿ, ಕೈರೋಡಿ ಗ್ರಾಮೀಣ ಪ್ರದೇಶಕ್ಕೆ ವಿದ್ಯತ್ ಪೂರೈಕೆ.

* ಇತರೆ ಹಿಂದೂಳಿದ ವರ್ಗದವರ ಸ್ತ್ರೀ ಶಕ್ತಿ , ಸ್ವ ಸಹಾಯ ಗುಂಪುಗಳಿಗೆ ಡಿ!! ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮದಿಂದ ಸಾಲ ಸೌಲಭ್ಯ.

* ಗೋಕರ್ಣದ ಕೋಟಿತೀರ್ಥ ಸ್ವಚ್ಛಗೊಳಿಸಿ ಅದರ ಸುತ್ತ ಮುತ್ತ ರಸ್ತೆ ನಿರ್ಮಾಣ.

* ಪುರಸಭೆಗೆ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ.

* ಅಧಿಕಾರ ಅವಧಿಯಲ್ಲಿ ಕ್ಷೇತ್ರದ 31 ಗ್ರಾಮ ಪಂಚಾಯತಿಗಳಿಗೆ ಹೋಗಿ ಗ್ರಾಮ ವಾಸ್ತವ್ಯಕ್ಕೆ ಹೋಗಿ ಅಲ್ಲಿನ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು

* ಕುಮಟಾ ದ ಅತ್ಯಂತ ಹಿಂದುಳಿದ ಪ್ರದೇಶವಾದ ಮೇಧನಿ ಹಾಗೂ ಖಂಡಗಾರ ಹೊನ್ನಾವರದ ತೋಳಸಾಣಿ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಿ ಕೊಟ್ಟಿದ್ದಾರೆ.

* ಮುಗ್ವಾ ಹುಲಿಯಪ್ಪನ ಕಟ್ಟೆ ರಸ್ತೆ 10 ಲಕ್ಷ ಮೊತ್ತದಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ರಸ್ತೆ ಮರು ಡಾಂಬರಿಕರಣ.

* ಬಾಡ ಪಂಚಾಯತ್ ವ್ಯಾಪ್ತಿಯ ಗಜನಿಕೇರಿಗೆ 1.50 ಲಕ್ಷ ಮೊತ್ತದ ರಸ್ತೆ ನಿರ್ಮಾಣ.

* ಹುಬ್ಬಣ್ಣಗೇರಿ ಗೌಡರಕೇರಿ ರಸ್ತೆ ಸುಧಾರಣೆ.

* ಬಾಡ ಪಂಚಾಯತ್ ವ್ಯಾಪ್ತಿಯಲ್ಲಿ ಮಾದರಿ ರಸ್ತೆ ಇಂಟರ್ ಲಾಕ್ ಅಳವಡಿಸಿ ರಸ್ತೆ ನಿರ್ಮಾಣ.

* ಬಾಡದ ಹರಿಜನಕೇರಿಗೆ ರಸ್ತೆ ನಿರ್ಮಾಣ.

* ಬಾಡ ಪಂಚಾಯತ್ ವ್ಯಾಪ್ತಿಯ ಹುಬ್ಬಣಗೇರಿ ಮುಸ್ಲಿಂ ಕೇರಿಗೆ ರಸ್ತೆ ಸುಧಾರಣೆ.

* ಬಾಡದ ಗುಡೇ ಅಂಗಡಿ ಮಾಸ್ತಿ ಕಟ್ಟೆ ರಸ್ತೆ 1 ಲಕ್ಷ ರೂ ಮೊತ್ತದಲ್ಲಿ ದುರಸ್ತಿ.

* ನಾಡುಮಾಸ್ಕೆರಿ ತಾರೆಯಿಂದ ಗಂಗೊಳ್ಳಿ ಆಶ್ರಯ ಪ್ಲಾಟ್ ನಲ್ಲಿ 1 ಲಕ್ಷ ಮೊತ್ತದ ಗಟಾರ ನಿರ್ಮಾಣ

RELATED ARTICLES  ಉತ್ತರ ಕನ್ನಡ ಜಿಲ್ಲೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರ ಸದನದಲ್ಲಿ ರೂಪಾಲಿ ನಾಯ್ಕ ಪ್ರಶ್ನೆ ಗೆ ಅವಕಾಶ ನೀಡದ ಕಾಗೇರಿ- ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಖಂಡನೆ

* ನಾಡು ಮಾಸ್ಕೆರಿ ಗಂಗಾ ಮಾತಾ ಸಮುದಾಯ ಭವನ ನಿರ್ಮಾಣ.

* ಹೊಸಾಕುಳಿ ಪಂಚಾಯತ್ ವ್ಯಾಪ್ತಿಯಲ್ಲಿ ಗಜನಿಕೇರಿಗೆ 3 ಲಕ್ಷ ಮೊತ್ತದ ಕಾಲು ಸಂಕ ನಿರ್ಮಾಣ.

* ಇವರ ಅವಧಿಯಲ್ಲಿ ಕುಮಟಾ ಕ್ಕೆ 70 ರಿಂದ 80 ಬಸ್ಸ್ ಗಳನ್ನು ತರಿಸಿದ್ದರು.

* ಕಾರವಾರ ಮತ್ತು ಬೆಂಗಳೂರು ಎಕ್ಸ್ ಪ್ರೆಸ್ ರೈಲನ್ನು ಕುಮಟಾ ಮತ್ತು ಹೊನ್ನಾವರದಲ್ಲಿ ನಿಲ್ಲುವಂತೆ ಮಾಡಿದ್ದು.

* 5 ದಿನಗಳ ಕಾಲ ಕುಮಟಾ ಹಬ್ಬವನ್ನು ನಡೆಸಿದ್ದರು.ಇದು ಕಲೆ, ಸಾಹಿತ್ಯ , ಸಂಸ್ಕ್ರತಿಗಳ ಸಂಗಮವಾಗಿತ್ತು. ಇದನ್ನು ಯಾವುದೆ ಇಲಾಖೆಯ ನೆರವಿಲ್ಲದೆ ಸಾರ್ವಜನಿಕರ ಬೆಂಬಲದಿಂದ ನಡೆಸಿದ್ದರು.ಇದು ಕ್ಷೇತ್ರದ ಜನತೆಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು.

* ಹೊನ್ನಾವರದಲ್ಲಿ ನವಂಬರ್ 1 ರಂದು ಕನ್ನಡ ಹಬ್ಬವನ್ನು ಆಚರಿಸುತ್ತಾರೆ. ಈ ರಾಜ್ಯೋತ್ಸವ ಸಂಘಟನೆ ಗೆ ನೆರವಾಗಿ ನಿಂತಿದ್ದರು

* ವಿಧವಾ ಮಾಶಾಸನ. ಅಂಗವಿಕಲರ ಮಾಶಾಸನ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

* ಮೇಧಿನಿ ಗ್ರಾಮಕ್ಕೆ ಎಲ್ಲಾ ಅಧಿಕಾರಿಗಳೊಂದಿಗೆ ಹೋಗಿ ಮೆಡಿಕಲ್ ಶಿಬಿರ ನಡೆಸಿ ಜನರ ಸಮಸ್ಯೆ ಆಲಿಸಿದ್ದರು.

* ಬಸವ ವಸತಿ ಯೋಜನೆಯಡಿಯಲ್ಲಿ ಅತಿ ಹೆಚ್ಚಿನ ಮನೆಗಳನ್ನು ಜಾರಿಗೆ ತಂದು ಬಡವರಿಗೆ ಹಂಚಿದರು.

* ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ಶಿಕ್ಷಕರ ಮೇಲಿನ ಗೌರವ ದಿಂದ ಕ್ಷೇತ್ರದ ಎಲ್ಲಾ ಶಿಕ್ಷಕರಿಗೂ ಬ್ಯಾಗ್ ವಿತರಣೆ ಮಾಡಿದ್ದರು.

* ಬಾಸಾಳ್ಳಿ ಮುಕ್ರಿ ಕೇರಿಗೆ ಹೋಗುವ ರಸ್ತೆ ಸುಧಾರಣೆ.

* ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕಲವೆ ರಸ್ತೆ ನಿರ್ಮಾಣ.

* ಮುಗ್ವಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕವಲಕ್ಕಿ ಯಿಂದ ನಿವೃತ್ತಿಕೊಡ್ಲವರೆಗೆ ರಸ್ತೆ ಸುಧಾರಣೆ.

* ಹುಲಿಯಪ್ಪನ ಕಟ್ಟೆಯಿಂದ ಕೊಂಡಾರಕೇರಿ ರಸ್ತೆ ಸುಧಾರಣೆ.

* ಕವಲಕ್ಕಿಯಲ್ಲಿ ಒಂದು ಲಕ್ಷ ರೂ ಮೊತ್ತದಲ್ಲಿ ಜನತಾ ಪ್ಲಾಟ್ ಗಟಾರ ನಿರ್ಮಾಣ.

* ಮುಗ್ವಾ ತನ್ಮಡಗಿ ಹತ್ತಿರ 2 ಲಕ್ಷ ರೂ ಮೊತ್ತದ ತಡೆಗೋಡೆ ಮತ್ತು ಮೆಟ್ಟಿಲು ನಿರ್ಮಾಣ.

ಇದೀಗ ದಿನಕರ ಶೆಟ್ಟಿಯವರು ಬಿಜೆಪಿ ಟಿಕೆಟ್ ಪಡೆದಿದ್ದು . ಈಗಾಗಲೇ ಟಿಕೆಟ್ ಪಡೆದಿರುವ ಹಾಗೂ ಶಾಸಕರಾಗಿ ಜನಸೇವೆ ಮಾಡಿರುವ ಕಾಂಗ್ರೆಸ್ ನ ಶಾರದಾ ಮೋಹನ ಶೆಟ್ಟಿ ಹಾಗೂ ಜೆಡಿಎಸ್ ನ ಪ್ರಭಲ‌ ಸ್ಪರ್ಧಿ ಪ್ರದೀಪ ನಾಯಕ ಅವರಿಗೆ ಚುನಾವಣಾ ಕಣದಲ್ಲಿ ಪ್ರಭಲ ಸ್ಪರ್ಧಾಳು ಎನಿಸಿದ್ದಾರೆ.