ಬೆಂಗಳೂರು: ಸರಕಾರಿ ನೌಕರರಿಗೆ 6ನೇ ವೇತನ ಆಯೋಗಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬಹುದಿನಗಳಿಂದ ಕಾಯುತ್ತಿದ್ದ 6ನೇ ವೇತನ ಆಯೋಗಕ್ಕೆ ಅನುಮೋದನೆ ಸಿಕ್ಕಂತಾಗಿದೆ. ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಇದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ 6ನೇ ವೇತನ ಆಯೋಗ ಶಿಫಾರಸ್ಸಿಗೆ ಚುನಾವಣಾ ಆಯೋಗಕ್ಕೆ ಕೇಳಿಕೊಂಡಿತ್ತು.

RELATED ARTICLES  ಉತ್ತರ ಕನ್ನಡದ ಪ್ರಮುಖ ಸುದ್ದಿಗಳು

ಈ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ಪ್ರಕಟಿಸಿದ್ದು, ವೇತನ ಆಯೋಗದ ಶಿಫಾರಸ್ಸನ್ನು ಅಂಗೀಕರಿಸಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿದೆ. ಚುನಾವಣಾ ಪ್ರಕ್ರಿಯೆ ಕುರಿತಂತೆ ಮಾತನಾಡಿದ ಚುನಾವಣಾ ಆಯುಕ್ತ ಸಂಜೀವ್ ಕುಮಾರ್, ಚುನಾವಣಾ ಆಯೋಗಕ್ಕೆ ಬಂದ ದೂರುಗಳ ಬಗ್ಗೆ 48 ಗಂಟೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

RELATED ARTICLES  ಭಾರತದಲ್ಲಿ 5.62 ಲಕ್ಷ ಜನರ ಫೇಸ್‌ಬುಕ್‌ ಖಾತೆಗಳ ಮೂಲಕ ಮಾಡಿದ ಮಾಹಿತಿ ಕಳವು.