ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ (ಕೆಆರ್’ಸಿಎಲ್) ನಲ್ಲಿ ಎಲೆಕ್ಟ್ರಿಕಲ್ ಮತ್ತು ಸಿಂಗಲ್ ಹಾಗೂ ಟೆಲಿಕಾಂ ವಿಭಾಗಗಳ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 65
ಹುದ್ದೆಗಳ ವಿವರ
ಎಲೆಕ್ಟ್ರಿಷಿಯನ್ – 3 / ಎಲೆಕ್ಟ್ರಿಕಲ್ – 38 ಹುದ್ದೆಗಳು
ಎಲೆಕ್ಟ್ರಿಕಲ್ ಸಿಂಗಲ್ ಅಂಡ್ ಟೆಲಿಕಾಂ ಮೆಂಟನರ್ (ಇಎಸ್’ಟಿಎಂ) – 3 – 27 ಹುದ್ದೆಗಳು
ವಿದ್ಯಾರ್ಹತೆ : ಮೆಟ್ರಿಕ್ಯೂಲೆಷನ್ ಅಥವಾ ಎಸ್.ಎಸ್.ಎಲ್.ಸಿ ಜೊತೆಗೆ ಹುದ್ದೆಗೆ ಸಂಬಂಧಿಸಿ ವಿಷಯದಲ್ಲಿ ಐಟಿಐ ಕೋರ್ಸ್ ಮಾಡಿರಬೇಕು.
ವಯೋಮಿತಿ : ಸಾಮಾನ್ಯ ವರ್ಗದವರಿಗೆ ಕನಿಷ್ಠ 18, ಗರಿಷ್ಠ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು, ಪ.ಜಾ, ಪ.ಪಂ ದವರಿಗೆ 5 ವರ್ಷ, ಹಿಂದುಳಿದ ವರ್ಗದವರಿಗೆ 3 ವರ್ಷ ನಿಗದಿಗೊಳಿಸಿದ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಎಕ್ಸ್ ಸರ್ವೀಸ್ ಮ್ಯಾನ್, ಮಹಿಳೆ, ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದವರಿಗೆ 250 ರೂ, ಉಳಿದ ಎಲ್ಲರಿಗೂ 500 ರೂ ನಿಗದಿಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2018
ಹೆಚ್ಚಿನ ಮಾಹಿತಿಗಾಗಿ ಮತ್ತಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.konkanrailway.com ಗೆ ಭೇಟಿ ನೀಡಿ.