ಕುಮಟಾ: ತಾಲೂಕಿನ ಕೋಟೆಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಲಿಕಾ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಶನಿವಾರ ನಡೆಯಿತು.
1998ರ ಸಾಲಿನಿಂದ ಈ ವರ್ಷದವರೆಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಿವೃತ್ತ ಶಿಕ್ಷಕ ಗೋಪಾಲ ಶಿವ ಭಟ್ಟ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ತಲಾ 10 ರಂತೆ ನೋಟ್‍ಬುಕ್ ವಿತರಿಸುತ್ತಾ ಬಂದಿದ್ದು, ಅಲ್ಲದೇ 4 ಮತ್ತು 5 ನೇ ತರಗತಿ ವಿದ್ಯಾರ್ಥಿಗಳಿಗೆ ಕಂಪಾಸ್ ಹಾಗೂ 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಪಾಟಿ ನೀಡುತ್ತಾ ಬಂದಿದ್ದು, ಈ ವರ್ಷವು ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಯನ್ನು ವಿತರಿಸಿದರು.. ಈ ಸಂದರ್ಭದಲ್ಲಿ ವಾಲಗಳ್ಳಿ ಗ್ರಾಮ ಪಂಚಾಯತ ಸದಸ್ಯ ಪ್ರಕಾಶ ಶಾನಭಾಗ, ಸಿ.ಆರ್.ಪಿ ಅನಂತ ಹೆಗಡೆ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ರೇಣುಕಾ ಹೆಗಡೆ ಸ್ವಾಗತಿಸಿದರು. ಸಹ ಶಿಕ್ಷಕಿ ಜಯಾ ನಾಯಕ ವಂದಿಸಿದರು.

RELATED ARTICLES  ಬೀಚ್ ಗೆ ಪ್ರವಾಸಕ್ಕೆ ಬರುವವರಿಗೆ ಬಿಗ್ ಶಾಕ್...!