ಕುಮಟಾ: ಬಿಜೆಪಿ ಟಿಕೆಟ್ ಅನ್ನು ದಿನಕರ ಶೆಟ್ಟಿಯವರು ಪಡೆದುಕೊಂಡಿದ್ದಾರೆ ಆದರೆ ಇದು ಬಂಡಾಯದ ಬಿಸಿಗೆ ತುತ್ತಾಗಿದೆ. ಕುಮಟಾದಲ್ಲಿ ಬಿಜೆಪಿಯ ಪ್ರಭಲ ಟಿಕೆಟ್ ಆಕಾಂಕ್ಷಿ ಹಾಗೂ ಸಾಮಾಜಿಕ ‌ಹೋರಾಟಗಾರ ಸೂರಜ್ ನಾಯ್ಕ ಸೋನಿ ಬಂಡಾಯದ ಕಹಳೆ ಮೊಳಗಿಸಿದ್ದಾರೆ.

ಇಂದು ಅವರ ಮನೆಯಲ್ಲಿ‌ ಸಾವಿರಾರು ಜನ ಕಾರ್ಯಕರ್ತರ ಸಮ್ಮುಖದಲ್ಲಿ ಅವರು ಸೋಮವಾರ ನಾಮಪತ್ರ ಸಲ್ಲಿಸಿ ಮುಂದಿನ‌ನಡೆ ತಿಳಿಸುವುದಾಗಿ ಘೋಷಿಸಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷ ಹೊಳಾಗಿ ಬಿಜೆಪಿ ಮತ್ತು ಯಡಯೂರಪ್ಪ ನೇತ್ರತ್ವದ ಕೆಜೆಪಿ ಬೇರೆ ಆದಾಗ ಬಿಜೆಪಿಗೆ ಸರಿಯಾದ ಅಭ್ಯರ್ಥಿಯೇ ಸಿಗದೇ ಇರುವ ಸಂದರ್ಬದಲ್ಲಿ ಪಕ್ಷ ಸೂರಜ ಸೋನಿಯವರಿಗೆ ಟಿಕೆಟ್ ನೀಡಿತ್ತು ಅಂತ ಕಷ್ಟಕರ ಸಂದರ್ಭದಲ್ಲಿಯೂ ಸೂರಜ ಸೋನಿಯವರು 28 ಸಾವರಕ್ಕೂ ಹೆಚ್ಚು ಮತ ಪಡೆದಿದ್ದರು ಆದರೆ ಈ ಬಾರಿ ಅವರಿಗೆ ಅನ್ಯಾಯ ಮಾಡಲಾಗಿದೆ‌ಎಂಬ ಮಾತು ಅವರ ಅಭಿಮಾನಿಗಳಿಂದ‌ ಕೇಳಿ ಬಂದಿದೆ.

RELATED ARTICLES  ಕೆಂಡ ಹಾದ ಸಚಿವ ಶಿವರಾಮ ಹೆಬ್ಬಾರ್

ತನ್ನ ಸೋಲಿನ ನಂತರ ಐದು ವರ್ಷಗಳಕಾಲ ಹಗಲಿರುಳಿಲ್ಲದೆ ಪಕ್ಷದ ಪ್ರಾಮಾಣಿಕ ಸೇವೆ ಮಾಡಿದ್ದ ಸೋನಿ, ಸಮಾಜದಲ್ಲಿ ಹಿಂದುಗಳಿಗೆ ಆಗುವ ಅನ್ಯಾಯದ ವಿರುದ್ದ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ,ಗೋ ರಕ್ಷಕರಾಗಿ ಅಕ್ರಮ ಗೋ ಸಾಗಾಟವನ್ನ ತಡೆಯುವ ಹೋರಾಟದಲ್ಲಿ ಜೈಲು ಪಾಲಾಗಿದ್ದಾರೆ, ಅವರಿಗೆ ಈ ಬಾರಿ ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸಿಕ್ಕೆ ಸಿಗುತ್ತದೆ ಎಂದು ಅಭಿಮಾನಿಗಳು ನಂಬಿದ್ದರು ಆದರೆ ಅಭಿಮಾನಿಗಳಿಗೆ ತೀರಾ ನಿರಾಸೆ ಆಗಿದೆ.

RELATED ARTICLES  ಸ್ವಹಿತಾಸಕ್ತಿಗಾಗಿ ಚತುಷ್ಪಥ ನಕ್ಷೆ ಬದಲಿಸಲು ಯತ್ನ.

ಈ ಬಾರಿಯ ಚುನಾವಣೆಯಲ್ಲಿ ಸೂರಜ ಸೋನಿಯವರನ್ನ ಪಕ್ಷೇತರವಾಗಿ ಬಿಜೆಪಿಗೆ ಬಂಡಾಯವಾಗಿ ನಿಲ್ಲಿಸಿ ಗೆಲ್ಲಸುತ್ತೇವೆ ಎಂದು ಸೂರಜ ಸೋನಿ ಅಭಿಮಾನಿಗಳು ಸೂರಜ ನಾಯ್ಕ ಸೋನಿಯವರ ಮನೆಯಲ್ಲಿ ಹೇಳುತ್ತಿದ್ದುದು ಸಾಮಾನ್ಯವಾಗಿತ್ತು.

ಈಗ ಸೂರಜ್ ನಾಯ್ಕ ಸೋನಿಯವರ ಈ ನಡೆ ಕುತೂಹಲ ಕೆರಳಿಸಿದ್ದು ಮುಂದೇನಾಗಲಿದೆ ಎಂದು ಕಾದು ನೋಡಬೇಕಿದೆ.