ಕುಮಟಾ : ಕುಮಟಾ ಹೊನ್ನಾವರ ಮತದಾರ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಈ ಬೆಳಿಗ್ಗೆ ಪ್ರಪ್ರಥಮವಾಗಿ ಪಕ್ಷದ ಕಛೇರಿಗೆ ಆಗಮಿಸಿದ ಶ್ರೀಯುತ ದಿನಕರ ಶೆಟ್ಟಿಯವರನ್ನು ಕಾರ್ಯಕರ್ತರು ಪ್ರೀತಿಯಿಂದ ಅಭಿನಂದಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಿನಕರ ಶೆಟ್ಟಿಯವರು ತನಗೆ ಟಿಕೆಟ್ ಲಭಿಸುವಲ್ಲಿ ಸಹಕರಿಸಿದ ಪಕ್ಷದ ಎಲ್ಲ ಹಿರಿ ಕಿರಿಯ ಪದಾಧಿಕಾರಿಗಳಿಗೆ ಕೃತಜ್ಙತೆ ಸಲ್ಲಿಸಿದರು.ಇನ್ನುಳಿದ ಆಕಾಂಕ್ಷಿಗಳೆಲ್ಲರನ್ನೂ ಭೇಟಿಯಾಗಿ ಸಹಕಾರ ಕೋರುತ್ತಿರುವುದಾಗಿ ತಿಳಿಸಿ ಪಕ್ಷದ ನೀತಿ ನಿಯಮಾವಳಿಗೆ ಬದ್ಧನಿದ್ದು ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತಿ ಹಂತದಲ್ಲೂ ತಾನು ಹೋರಾಟಕ್ಕೆ ಸಿದ್ಧನಿರುವುದಾಗಿ ಘೋಷಿಸಿ ಸರ್ವರ ಸಹಕಾರ ಕೋರಿದರು.

RELATED ARTICLES  ಕೋಟಿತೀರ್ಥದಲ್ಲಿ ಹಾರಿ ವ್ಯಕ್ತಿ ಆತ್ಮಹತ್ಯೆ

ಚುನಾವಣಾ ಪ್ರಚಾರ ಕಾರ್ಯ ಚುರುಕುಗೊಳಿಸುವಂತೆ ಪಕ್ಷದ ಸೂಕ್ತ ಮಾರ್ಗದರ್ಶೀ ಸೂತ್ರಗಳ ವಿವರಣೆಯನ್ನು ಮಂಡಳಾಧ್ಯಕ್ಷ ಕುಮಾರ್ ಮಾರ್ಕಾಂಡೆ ವಿವರಿಸಿದರು.

ಸ್ವ ಇಚ್ಛೆಯಿಂದಲೇ ಸೇರಿದ ಅಪಾರ ಕಾರ್ಯಕರ್ತರು ತಮ್ಮ ಬೆಂಬಲ,ಸಂಪೂರ್ಣ ಸಹಕಾರ ವನ್ನು ದಿನಕರ ಶೆಟ್ಟಿಯವರಿಗೆ ನೀಡುವುದಾಗಿ ತಿಳಿಸಿ ಈ ಬಾರಿ ಭಾಜಪ ದ ಕಮಲವನ್ನು ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಅರಳಿಸಲು ಪಣತೊಡುವುದಾಗಿ ಜೈಕಾರ ಹಾಕಿ ಸಂಭೃಮಿಸಿದರು.

RELATED ARTICLES  ಆರು ಗ್ರಾಮಗಳಿಗೆ ಇನ್ನೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ: ಹೋರಾಟದ ಹಾದಿ ಹಿಡಿದ ಗ್ರಾಮಸ್ಥರು.

ಪಕ್ಷದ ಪ್ರಮುಖರಾದ ವಿನೋದ ಪ್ರಭು ರವರು ಪಕ್ಷದ ಹೈಕಮಾಂಡ್ ಆಯ್ಕೆಯನ್ನು ಗೌರವಿಸುವುದಾಗಿ ತಿಳಿಸಿ ದಿನಕರ ಶೆಟ್ಟಿಯವರ ಕುರಿತಾಗಿ ಮೆಚ್ಚುಗೆಯ ಮಾತನಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಪಕ್ಷದ ವೆಂಕಟೇಶ ನಾಯಕ , ಮದನ ನಾಯಕ , ಎಮ್.ಜಿ.ಭಟ್ಟ , ಅಶೋಕ ಪ್ರಭು , ನಾರಾಯಣ ಉಡದಂಗಿ , ವಿನಾಯಕ ಬಾಳೇರಿ , ವೆಂಕಟೇಶ ಎಂ. ನಾಯ್ಕ , ನ್ಯಾಯವಾದಿ ಹನುಮಂತ ನಾಯ್ಕ ,ತಿಮ್ಮಪ್ಪ ಮುಕ್ರಿ ಸೇರಿದಂತೆ ಹಲವಾರು ಅಭಿಮಾನಿಗಳು,ಕಾರ್ಯಕರ್ತರು ಹಾಜರಿದ್ದರು.

ವರದಿ: ಜಯದೇವ ಬಳಗಂಡಿ. ಕುಮಟಾ