ಕಾರವಾರದಲ್ಲಿ ರಾಜಕಾರಣ ದಿನಾ ದಿನಾ ಕಾವೇರಿಸಿ ಕೊಳ್ಳುತ್ತಿದ್ದರೆ,ಪಹರೆ ವೇದಿಕೆ ಮಾತ್ರ ಅಪ್ಪಟವಾಗಿ ಸಮಾಜಮುಖಿ ಧೋರಣೆ ಇಟ್ಟುಕೊಂಡು ತನ್ನ ನಿರ್ಮಲ ಕಾರವಾರದ ಕನಸಿಗೆ ದಾಪುಗಾಲನ್ನು ಇಡುತ್ತಿದೆ.ಸುಮಾರು ಮೂರುವರೆ ವರ್ಷಗಳಿಂದ ಪ್ರತಿ ಶನಿವಾರ ಕಾರವಾರದಲ್ಲಿ ಸ್ವಚ್ಛತೆ ನಡೆಸುತ್ತಿರುವ ಪಹರೆ ವೇದಿಕೆ ಎಲ್ಲಿಯೂ ತನ್ನ ಕೆಲಸ ನಿಲ್ಲಿಸಲಿಲ್ಲ.ಒಂದೆರಡು ವಾರ ಸ್ವಚ್ಚತೆ ನಡೆಸಿ ಬಿಡಲಿಲ್ಲ. ಈ ಸ್ವಚ್ಛತೆಗೆ ಈಗ ಮೂರುವರೆ ವರ್ಷಗಳ ಅನುಭವ. ಇನ್ನೆರಡು ವಾರಗಳಲ್ಲಿ 175 ನೇ ವಾರವನ್ನು ಪೂರೈಸಲಿರುವ ಪಹರೆ ವೇದಿಕೆ,175 ನೇ ವಾರವನ್ನು ” ತಿಳಮಾತಿ ” ಬೀಚನ್ನು ಸ್ವಚ್ಛಗೊಳಿಸುವದರ ಮೂಲಕ ಆಚರಿಸಲಿದೆ.
ತೀಳಮಾತಿ ಬೀಚ ಕನ್ನಡ ಕರಾವಳಿಯ ಸುಂದರ ಬೀಚ.ಇದು ಕಪ್ಪು ಮರಳನ್ನು ಹೊಂದಿದೆ.ಸ್ವಚ್ಛತೆಯ ಕುರಿತು ಪ್ರಜ್ಞೆ ಬೆಳೆಸಲು ಕಾರ್ಯಕ್ರಮವನ್ನು ಈ ಬೀಚನಲ್ಲೇ ಆಯ್ದು ಕೊಳ್ಳಲಾಗಿದೆ.ಅಪಾರ ಸಂಖ್ಯೆಯ ಸ್ವಚ್ಛತಾ ಕಾರ್ಯಕರ್ತರು ಭಾಗವಹಿಸುವ ನೀರಿಕ್ಷೆಯಿದೆ.
150 ನೇ ವಾರದ ಸಂಭ್ರಮಾಚರಣೆಯನ್ನು ಯಾಣದಲ್ಲಿ ಸ್ವಚ್ಛತೆ ಮಾಡುವದರ ಮೂಲಕ ನಡೆಸಿ ಅಲ್ಲಿ ವಿಭೂತಿ ನದಿಗೆ ಪೂಜೆ ಗೈದು,ನದಿಮೂಲ, ಜಲಮೂಲಗಳನ್ನು ಹಾಳುಗೆಡಹಬಾರದು ಎಂಬ ಸಂದೇಶ ಪಹರೆ ನೀಡಿತ್ತು.
ಈ ವಾರ ಸ್ವಚ್ಛತೆಯನ್ನು ಕಾರವಾರ ನಗರಸಭೆಯ ಉದ್ಯಾನವನದಲ್ಲಿ ನಡೆಸಿದ ಪಹರೆ,ಉದ್ಯಾನವನಕ್ಕೆ ಒಂದು ಕಳೆ ತಂದು ಕೊಟ್ಟಿದೆ. ಈ ವಾರದ ಸ್ವಚ್ಛತೆಯನ್ನು ನಮಿತಾ ಫೆಮಿ ಪಿಟನೆಸ್ ಮಾಲಕಿ ಶ್ರೀಮತಿ ನಮಿತಾ ಸಾರಂಗ ಮತ್ತು ಕರಾವಳಿ ಇನ್ಸಿಟ್ಯುಟ ಆಪ್ ಹೋಟೆಲ್ ಮೆನೇಜಮೆಂಟ ಕಾಲೇಜಿನ ಮುಖ್ಯಸ್ಥ ರಾದ ಶ್ರೀಯುತ ಆನಂದು ತಾಮ್ಸೆ ಉದ್ಗಾಟಿಸಿದರು.
ಮುಂದಿನ ವಾರ ಅದೇ ಉದ್ಯಾನವನದಲ್ಲಿ ಮುಂದುವರೆದ ಸ್ವಚ್ಛತೆ ಇಟ್ಟು ಕೊಳ್ಳಲಾಗಿದೆ.
ವರದಿ: ಜಯದೇವ ಬಳಗಂಡಿ , ಕುಮಟಾ