ಬೆಂಗಳೂರು: ಏನಪ್ಪ ಇದು. ಚಂದ್ರನ ಮೇಲು ಟವರ್ ಫಿಕ್ಸ್ ಮಾಡ್ತರಾ. ಅಂತ ಹುಬ್ಬೇರಿಸುವ ಸರದಿ ನಿಮ್ಮದು ಹಾಗಾದರೆ ಈ ಸುದ್ದಿ ಓದಿದಮೇಲೆ ನೀವು ಶಾಕ್ ಆಗುತ್ತೀರ.!
ಮೊಬೈಲ್ ನೆಟವರ್ಕ್ ಕಂಪನಿಗಳು ಚಂದ್ರನ ಮೇಲೂ ನೆಟವರ್ಕ್ ಟವರ್ ನಿರ್ಮಾಣಕ್ಕೆ ಪ್ಲಾನ್ ಮಾಡಿವೆ. ಜರ್ಮನಿ ಮೂಲದ ವೋಡಾಫೋನ್ ಮತ್ತು ನೋಕಿಯಾ ಕಂಪನಿಗಳು ಸಹಭಾಗಿತ್ವದಲ್ಲಿ 4ಜಿ ನೆಟವರ್ಕ್ ಸ್ಥಾಪನೆಗೆ ಮುಂದಾಗಿವೆ. ಪಿಟಿ ಸೈಂಟಿಸ್ಟ್ಸ್ ನೆರವಿನೊಂದಿಗೆ 2019ರ ವೇಳೆಗೆ ಚಂದ್ರನ ಮೇಲೆ 4ಜಿ ನೆಟ್ ವರ್ಕ್ ಸ್ಥಾಪನೆ ಆಗಲಿದೆ. NASA ಗಗನಯಾತ್ರಿಗಳು ಚಂದ್ರಯಾನ ಪೂರೈಸಿದ ಐವತ್ತು ವರ್ಷಗಳು ಗತಿಸಿರುವುದರ ನೆನಪಿಗಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಸಿಇಓ ರಾಬರ್ಟ್ ಬ್ಹೋಮ್ ಪ್ರಕಟಿಸಿದ್ದಾರೆ.
2019ರ ಬಳಿಕ ಚಂದ್ರನೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದ ಭಾರತೀಯ ಪರಂಪರೆ ಹಾಗೂ ಚಂದಾಮಾಮನ ಕಥೆಗಳು ಸಹ ಭಿನ್ನರೂಪ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಠಿ ಆಗಲಿದೆ.
ಇದೇನಾದರು ಸಕ್ಸ್ ಆದರೆ ನಿಮ್ಮ ಮೊಬೈಲ್ ನಲ್ಲಿಯೇ ಚಂದಮಾಮ ಹೇಗಿದ್ದಾನೆ ಅಂತ ತೋರಿಸ ಬಹುದು ಆದ್ರೆ ಕೆಲ ಸಮಯಬೇಕಾಗುತ್ತೆ ಅಷ್ಟೆ.