ಶಿರಸಿ: ಈ ಬಾರಿ ಗೆಲ್ಲುವತ್ತ ಎಲ್ಲಾ ರೀತಿಯಲ್ಲಿ ತಯಾರಿನಡೆಸಿರುವ ಜೆಡಿಎಸ್ ಇಲ್ಲಿನ ದೇವನಿಲಯದಲ್ಲಿ ಶಿರಸಿ ನಗರದ ಕಾರ್ಯಕರ್ತರಿಗೆ ಚುನಾವಣಾ ಪ್ರಚಾರದ ಕುರಿತು ತಿಳುವಳಿಕೆಯ ವಿಶೇಷ ಸಭೆ ನಡೆಸಲಾಯಿತು.

ಜೆಡಿಎಸ್ ಅಭ್ಯರ್ಥಿ ಡಾ.ಶಶಿಭೂಷಣ ಹೆಗಡೆ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ನಗರ ಘಟಕದ ಸಭೆಯಲ್ಲಿ ಸುಮಾರು ೮೦೦ ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಚುನಾವಣಾ ಪ್ರಚಾರ, ಕುಮಾರಸ್ವಾಮಿ ಸರ್ಕಾರದ ಸಾಧನೆ ಗಳ ಕುರಿತು ಮಾಹಿತಿ ನೀಡಿ ಅದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಿಕೊಡಲು ತಿಳಿಸಲಾಯಿತು.

RELATED ARTICLES  ಹೆದ್ದಾರಿಯಲ್ಲಿ ಕಾಣಿಸಿಕೊಂಡ ಹುಲಿ : ಭಯಗೊಂಡ ಜನತೆ.

IMG 20180422 WA0005
ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಮನೆಯ ಪ್ರತಿ ಜನರನ್ನು ಮುಖತಹ ಭೇಟಿ‌ಮಾಡಿ ಪಕ್ಷದ ಅಭ್ಯರ್ಥಿ ಹಾಗೂ ಪಕ್ಷದ ಪ್ರಣಾಳಿಕೆಯನ್ನು ಜನರಿಗೆ ಮನವರಿಕೆಯಾಗುವ ರೀತಿಯಲ್ಲಿ ಪ್ರಚಾರ ನಡೆಸುವ ಗುರಿ ನೀಡಲಾಯಿತು. ಶಿರಸಿ‌ ನಗರದ ಅಭಿವೃದ್ಧಿ ಗೆ ಬೇಕಾದ ಎಲ್ಲಾ ಕ್ರಮಗಳನ್ನು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.

RELATED ARTICLES  ಕುಮಟಾ, ಅಂಕೋಲಾದಲ್ಲಿ ನಾಳೆ ಲಭ್ಯವಿರುವ ಕೊರೋನಾ ಲಸಿಕಾ ಮಾಹಿತಿ