ಶಿರಸಿ: ಶಂಕರರು ಭಗವಂತನ ಪ್ರೇರಣೆ ಪಡೆದು ಲೋಕಶಿಕ್ಷಣಕ್ಕೆ ಬಂದಿದ್ದರು. ವೇದಾಂತದ ಡಿಂಡಿಮವನ್ನು ಲೋಕಕ್ಕೆ ಸಾರಿದ್ದರು. ಅದನ್ನು ಕೇಳಿಸಿಕೊಳ್ಳುವ ಮನೋಸ್ಥಿತಿ ಹೊಂದಬೇಕು ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ತಿಳಿಸಿದರು.

ಅವರು ಶಿರಸಿ ಯೋಗಮಂದಿರದಲ್ಲಿ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಅಡಿಯಲ್ಲಿ ನಡೆದ ಶಂಕರ ಜಯಂತಿ ಸಮಾರೋಪದಲ್ಲಿ ಆಶೀರ್ವಚನ ನೀಡುತ್ತಾ ಶಂಕರ ಭಗವತ್ಪಾದರು ಭೌದ್ಧ ಧರ್ಮವನ್ನು ನಾಶ ಮಾಡಿದ್ದರು ಎಂಬುದು ಅಸಮಂಜಸವಾದುದು. ಬೌದ್ಧರ ಮೂಲತತ್ವ ಹಾಗೂ ಅದ್ವೈತರ ಮೂಲತತ್ವ ಎರಡೂ ಒಂದೇ ಆಗಿತ್ತು ಎಂದರು.

ಮನುಷ್ಯ ಎಲ್ಲ ಕರ್ಮವನ್ನು ಭಗವಂತನಿಗೆ ಅರ್ಪಿಸುವುದನ್ನು ಕಲಿತರೆ, ಆಸೆಗಳನ್ನು ದೂರ ಮಾಡಿದರೆ, ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯವಿದೆ. ಜ್ಞಾನಿಯಾದವನು ಆಸೆ ಆವರಿಸುವ ಮೊದಲೇ ಎಚ್ಚೆತ್ತುಕೊಳ್ಳುತ್ತಾನೆ. ಆದರೆ ಅಜ್ಞಾನಿ ಆದವನು ಅದನ್ನು ಸ್ವೀಕರಿಸಿ ನಂತರ ಅದರಿಂದ ತೊಂದರೆಗಳು ಬಂದಾಗ ಪಶ್ಚಾತಾಪ ಪಡುತ್ತಾನೆ. ಪರಮಾತ್ಮನ ಚಿಂತನೆ ಮಾಡಿ ಅದರಲ್ಲಿ ತನ್ಮಯತೆ ಹೊಂದಬೇಕು. ಇದರಲ್ಲಿ ತಲ್ಲಿನತೆ ಪಡೆದರೆ ಮನಸ್ಸಿನ ಉದ್ವೇಗ ಕರಗಿ ಹೋಗುತ್ತದೆ ಎಂದು ನುಡಿದರು.
ದಾವಣಗೆರೆಯ ಶ್ರೀಮತ್ ಸ್ವಾಮೀ ನಿತ್ಯಸ್ಥಾನಂದ ಜೀ ಮಹಾರಾಜ್‌ರು ಮಾತನಾಡಿ, ಬುದ್ಧನ ಹಾಗೂ ಶಂಕರಾಚಾರ್ಯರ ಕಾಲದಲ್ಲಿ ಅದ್ವೈತ ತತ್ವ ಭಾರತವನ್ನು ರಕ್ಷಿಸಿದೆ. ಶಂಕರರು ವೇದಾಂತ ತತ್ವವನ್ನು ಅನುಭೂತಿ ಪಡೆದು ಅಭಿವ್ಯಕ್ತಗೊಳಿಸಿದ್ದರು. ಅವರ ಸ್ತೋತ್ರಗಳನ್ನು ಭಕ್ತಿಭಾವ ಮೂಡಿಸಿದ್ದವು. ಎಲ್ಲ ದೇವತೆಗಳ ಬಗ್ಗೆ ಬರೆದಿದ್ದರು. ಅವರು ಮತಾಂಧರಾಗಿರಲಿಲ್ಲ ಎಂದರು.

RELATED ARTICLES  ಕುಮಟಾ ತಾಲೂಕಿನ ಹೆಗಡೆ ಭಾಗದಲ್ಲಿ ಪ್ರಚಾರ ನಡೆಸಿದ ಶ್ರೀಮತಿ ಶಾರದಾ ಶೆಟ್ಟಿ.

ಹುಬ್ಬಳ್ಳಿ ಆರ್ಷ ವಿದ್ಯಾಪೀಠದ ಶ್ರೀ ಶ್ರೀ ಚಿದ್ರೂಪಾನಂದ ಸರಸ್ವತೀ ಮಹಾಸ್ವಾಮೀಗಳವರು ಮಾತನಾಡಿ, ಭಗವದ್ಗೀತೆ ಮೋಕ್ಷ ಶಾಸ್ತ್ರವಾಗಿದೆ. ಅದು ಪುರಾಣ ಕಥೆಗಳ ಸಮೂಹ ಅಲ್ಲ ಎಂದರು.

RELATED ARTICLES  ಮತ್ತೆ ಸದ್ದುಮಾಡುತ್ತಿದೆ ಅಕ್ರಮ ಗೋ ಸಾಗಾಟ

ಇದೇ ಸಂದರ್ಭದಲ್ಲಿ ನೆಲೆಮಾಂವನ ವೇದ ವಿದ್ಯಾ ಸಂಸ್ಕಾರ ಹಾಗೂ ಸಂಶೋಧನಾ ಕೇಂದ್ರವೂ ನೀಡುವ ’ಆಚಾರ್ಯಶಂಕರಶ್ರೀ’ ಪ್ರಶಸ್ತಿಯನ್ನು ಧಾರವಾಡ ರಾಮದುರ್ಗದ ಪ್ರೊ.ವಿಶ್ವನಾಥ ಹಂಪಿಹೊಳಿ ಅವರಿಗೆ ಸ್ವರ್ಣವಲ್ಲೀ ಶ್ರೀಗಳವರು ಪ್ರದಾನ ಮಾಡಿದರು.