ಕುಮಟಾ: ಕರಾವಳಿ ತೀರದ ಶಾಂತ ಪ್ರದೇಶ ಕುಮಟಾ, ಕುಮಟಾ ಪ್ರದೇಶಕ್ಕೆ ತನ್ನದೇ ಆದ ಇತಿಹಾಸ ಹಾಗೂ ತನ್ನದೇ ಆದ ವಿಶಿಷ್ಟತೆ ಇದೆ. ಆ ಎಲ್ಲ ವಿಶಿಷ್ಟತೆಗಳನ್ನು ತನ್ನೊಡಲಲ್ಲಿ ಹೊತ್ತಿರುವ ಕುಮಟಾದ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡಿರುವುದೇ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನ . ಈ ಉದ್ಯಾನವನ ಶಾಸಕರ ಮುತುವರ್ಜಿಯಿಂದ ಈಗ ಹೊಸ ರೂಪ ಪಡೆಯುತ್ತಿರುವ ಬಗ್ಗೆ ಮೆಚ್ಚುಗೆಗಳು ಈಗ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಅಲ್ಲಿ ನಿರ್ಮಾಣವಾಗುತ್ತಿರುವ ಆಟಿಕೆ ವಸ್ತುಗಳು ಹಾಗೂ ವಿಶ್ರಾಂತಿ ತಾಣಗಳು.

ನೈಸರ್ಗಿಕವಾಗಿ ಉತ್ತಮ ಪರಿಸರ ಹಾಗೂ ಜನತೆಗೆ ವಿಹಾರ ತಾಣವಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನ ತನ್ನದೇ ಆದ ವೈಭವವನ್ನು ಹೊಂದಿ, ತದ ನಂತರದ ಕಾಲಘಟ್ಟದಲ್ಲಿ ತನ್ನ ಸ್ವರೂಪವನ್ನು ಕಳೆದುಕೊಳ್ಳ ಪ್ರಾರಂಭಿಸಿತ್ತು.

RELATED ARTICLES  `ಬೀಯು ಹ್ಯಾಂಡಸಮ್ ಇಂಡಿಯಾ ಸೀಸನ್-೨೦೨೦’ ಸ್ಪರ್ಧೆಯಲ್ಲಿ ಕುಮಟಾದ ಸಚಿನ್ ನಾಯ್ಕ ಪ್ರಥಮ ರನ್ನರ್ ಅಪ್

ಮಕ್ಕಳ ತೂಗು ಉಯ್ಯಾಲೆಗಳು,ಜಾರು ಬಂಡಿಗಳು , ವಿಹಾರ ತಾಣಗಳು ಶಿಥಿಲಾವಸ್ಥೆಯನ್ನು ತಲುಪುತ್ತಿದ್ದವು. ಅದನ್ನು ಮನಗಂಡ ಶಾಸಕಿ‌ ಶಾರದಾ ಶೆಟ್ಟಿ ಹೊಸ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಹಾಗೂ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುಮಟಾ ತಾಲ್ಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದ ಯೋಜನೆಯಡಿ ಅಂದಾಜು ಮೂವತ್ತು ಲಕ್ಷ ಅನುದಾನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನದ ಉನ್ನತೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು .ಈಗ ಅದು ಫಲ ನೀಡುತ್ತಿದೆ ಎನ್ನಿತ್ತಾರೆ ಜನರು.

ಈಗ ಆ ಕಾಮಗಾರಿ ಪ್ರಗತಿಯಲ್ಲಿದ್ದು ಹೊಸ ಹೊಸ ಆಟಿಕೆ ವಸ್ತುಗಳು ಜಾರು ಬಂಡಿಗಳು ಉದ್ಯಾನವನದಲ್ಲಿ ಜೋಡಿಸಲಾಗುತ್ತಿದೆ .ರಜೆ ಬಂತೆಂದರೆ ಸಾಕು ಅಥವಾ ಸಾಯಂಕಾಲದ ಸಮಯದಲ್ಲಿ ಕುಮಟಾದ ಪಾರ್ಕ್ ನಲ್ಲಿ ಸಂತಸದಿಂದ ಸುತ್ತಾಡುವ ಜನರಿಗೆ ಹಾಗೂ ಆಟವಾಡುವ ಮಕ್ಕಳಿಗೆ ಇದು ತುಂಬಾನೇ ಅನುಕೂಲವಾಗಲಿದೆ .

RELATED ARTICLES  ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಕುಮಟಾದಲ್ಲಿ 'ಕರಾಳ ದಿವಸ್'

IMG 20180422 WA0018

ಆಟವಾಡುವ ಮಕ್ಕಳಿಗೆ ಹಾಗೂ ಸಾಯಂಕಾಲ ಉದ್ಯಾನವನದಲ್ಲಿ ಕಾಲ ಕಳೆಯುವ ಜನರಿಗೆ ಇದು ಸಂತಸವನ್ನು ಉಂಟು ಮಾಡಿದೆಯಂತೆ .ಹೀಗಾಗಿಯೇ ಶಾರದಾ ಶೆಟ್ಟಿಯವರಿಗೆ ಅಲ್ಲಿ ಜನ ಅಭಿನಂದಿಸುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಶಾಸಕರ ಕಾರ್ಯ ಅವಿಸ್ಮರಣೀಯ ಎಂಬುದು ಜನತೆಯ ಮಾತು .

ಅದೇನೇ ಇರಲಿ ಕುಮಟಾ ಪಾರ್ಕ್ ನಲ್ಲಿ ಆಗುತ್ತಿರುವ ಬದಲಾವಣೆ ಜನತೆಯಲ್ಲಿ ಹರ್ಷ ತಂದಿದೆ .ಸಂಜೆಯ ಸಮಯವನ್ನು ಖುಷಿಯಾಗಿ ಕಳೆಯುವ ಜನರಿಗೆ ಇದು ಹೊಸ ಆಯಾಮ ನೀಡಲಿದೆ.