ಕುಮಟಾ :ಬಿಜೆಪಿಯ ಕುಮಟಾ ವಿಧಾನ ಸಭಾ ಅಭ್ಯರ್ಥಿಯಾಗಿ ದಿನಕರ ಶೆಟ್ಟಿಯಾಗಿ ಪಕ್ಷದ ನೇಮಕದ ನಿರ್ಧಾರವನ್ನು ಸ್ವಾಗತಿಸಿರುವ ಪಕ್ಷದ ನಾಯಕಿ ಜಿಲ್ಲಾ ಪಂಚಾಯತದ ಮಾಜಿ ಸದಸ್ಯೆ ನ್ಯಾಯವಾದಿ ಶ್ರೀಮತಿ ಸುಧಾ ಬಿ ಗೌಡ ಅವರು ಕುಮಟಾದ ಬಿಜೆಪಿಯ ಅವಿರತ ಗೆಲುವಿಗೆ ಶ್ರಮಿಸುವ ಭರವಸೆಯನ್ನು ನೀಡಿದ್ದಾರೆ.

RELATED ARTICLES  ಮಕ್ಕಳ ಬೆಳವಣಿಗೆಗೆ ಹಾಲು ಅವಶ್ಯಕ-ಶ್ಯಾಮಲಾ ನಾಯಕ

ಎರಡು ಬಾರಿಗೆ ಜಿಲ್ಲಾ ಪಂಚಾಯದ ಸದಸ್ಯೆಯಾಗಿ ಜಿಲ್ಲೆಗೆ ಚಿರಪರಿಚಿತ ಆಗಿರುವ ಇವರು ತಾಲೂಕಿನಲ್ಲಿ ತಳಮಟ್ಟದಿಂದ ಜನಸಂಪರ್ಕವನ್ನು ಹೊಂದಿದವರಾಗಿದ್ದಾರೆ. ಕುಮಟಾ ತಾಲೂಕಿನ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ಶ್ರೀರಕ್ಷಾ ಮಹಿಳಾ ಬ್ಯಾಂಕ್ ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ವಿಶೇಷ

RELATED ARTICLES  ಹಂದಿ ಅಡ್ಡ ಬಂದ ಪರಿಣಾಮ : ಸಹಕಾರಿ ಧುರೀಣ ಟಿ.ಪಿ ಹೆಗಡೆ ಹುಣಸೆಮಕ್ಕಿ ಸಾವು.

ಬಹಳ ಹಿಂದೆಯೇ ಮಹಿಳಾ ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಿ ಮಹಿಳಾ ಪರವಾದ ಗಟ್ಟಿಧ್ವನಿಯಾಗಿದ್ದಾರೆ.
ಜಿಲ್ಲಾ ಪಂಚಾಯತದ ಸದಸ್ಯರಾಗಿದ್ದವೇಳೆಯಲ್ಲಿ ಅವರು ಜನತೆಗೆ ಉತ್ತಮವಾಗಿ ಸ್ಪಂದಿಸಿ ಹೆಸರು ಗಳಿಸಿರುವ ಇವರ ಬೆಂಬಲವು ದಿನಕರ ಶೆಟ್ಟಿಯವರಿಗೆ ಇನ್ನೂ ಹೆಚ್ಚಿನ ಬಲವನ್ನು ತಂದುಕೊಟ್ಟಿದೆ.