ಕುಮಟಾ: ರಾಜಕೀಯ ಚದುರಂಗ ಬಿಸಿ ಬಿಸಿಯಾಗಿ ಕಾವು ಪಡೆದುಕೊಳ್ಳುತ್ತಿದೆ.ಕುಮಟಾ,ಹೊನ್ನಾವರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪ ನಾಯಕ ಅವರ ಕುರಿತಾದ ಮೆಸೇಜ್ ಒಂದು ವಾಟ್ಸಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅದು ಪ್ರದೀಪ ನಾಯಕರ ಜೀವನ ಹಾಗೂ ಸಾಮಾಜಿಕ ಚಟುವಟಿಕೆ ಬಿಂಬಿಸುತ್ತಿದೆ.
ಸ್ವತಃ ಪ್ರದೀಪ ನಾಯಕರು ಸಹ ಈ ಮೆಸೇಜ್ ಅನ್ನು ತಮ್ಮ FB ಖಾತೆಯಲ್ಲಿ ಹಾಕಿಕೊಂಡಿದ್ದು ಜನತೆ ಕುತೂಹಲದಿಂದ ಇದನ್ನು ಓದುತ್ತಿದ್ದಾರೆ.
ಮೆಸೇಜ್ ನ ಯಥಾ ಪ್ರತಿ ಇಲ್ಲಿದೆ.
ಉಹ್ಹೂಂ… ಅವನು ಆವತ್ತೇ ಬದಲಾದವನಲ್ಲ..
ನಗು ಮುಖ ಮಾಸುತ್ತಿರರಿಲ್ಲ, ಎಂತಾ ಪರಿಸ್ಥಿತಿಯಲ್ಲೂ ತಾನು ಅನುಭವಿಸುತ್ತಿರುವ ನೋವನ್ನು ತೋಡಿಕೊಂಡವನಲ್ಲ, ತಾಯಿಯನ್ನು ಕಳೆದುಕೊಂಡ ತಬ್ಬಲಿತನದ ನೋವಿನ ಗುಟ್ಟನ್ನು ತೋರಿಸಿಕೊಂಡವನಲ್ಲ, ಇತರರ ಸಂತೋಷದಲ್ಲೇ ತನ್ನ ನೆಮ್ಮದಿಯನ್ನು ಕಾಣುತ್ತಿದ್ದ..ಅದೆಷ್ಟೋ ಸಹಪಾಠಿಗಳ ಫೀಸನ್ನು ಯಾವ ಪ್ರತಿಫಲ ಬಯಸದೇ ತುಂಬಿ ಪ್ರೋತ್ಸಾಹಿಸುತ್ತಿದ್ದ.
ಮನಸ್ಸು ಮಾಡಿದರೇ ಇಡೀ ಕಾಲೇಜಿಗೆ ಅನಭಿಷಕ್ತ ದೊರೆಯಾಗುತ್ತಿದ್ದ..ಇತರರನ್ನು ಗೆಲ್ಲಿಸಿದ, ಬೆಳೆಸಿದ..ಕಾಲಚಕ್ರದ ವಿಧಿಯಾಟಕ್ಕೆ ತಂದೆಯನ್ನು ಸಹ ಕಳೆದುಕೊಂಡರು..ತನ್ನ ಕುಟುಂಬದ ಜೊತೆ ಇತರರನ್ನು ಯಾವ ಉಪೇಕ್ಷೆಯೂ ಇಲ್ಲದೇ ಸಾಕಿ ಸಲುಹಿದ..ಅಕ್ಷರಶಃ ಒಬ್ಬಂಟಿಯಾಗಿ ಹೋರಾಡಿ ಹತ್ತು ಜನರ ಕುಟುಂಬಕ್ಕೆ ಕೆಲಸ ನೀಡುವ ಮಟ್ಟಿಗೆ ಬೆಳೆದು ನಿಂತ.
ವಾಲಿಬಾಲ್, ಕ್ರಿಕೆಟ್, ಎಲ್ಲ ಆಟದಲ್ಲಿಯೂ ಆಸಕ್ತಿ, ಅರ್ಹತೆ ಇದ್ದು ಸರ್ವಾಂಗೀಣ ಆಟಗಾರನಾಗಿದ್ದು ವಿಧಿಯಾಟಕ್ಕೆ ಬಲಿಯಾಗಿ ಅಪಘಾತದಲ್ಲಿ ಕಾಲಿಗೆ ಗಾಯವಾಗಿ ಆಟದಿಂದ ದೂರವಿರುವ ಪ್ರಸಂಗ ಬಂದರೂ.. ಇವತ್ತಿಗೂ ಊರಲ್ಲಿ ಯುವ ಪೀಳಿಗೆಯ ಜೊತ ವಾಲಿಬಾಲ್ ಆಡುತ್ತ, ಕ್ರಿಕೆಟ್ ಆಡುತ್ತ ಯುವಕರಿಗೆ ಪ್ರೋತ್ಸಾಹಿಸುವುದರಲ್ಲೇ ತನ್ನ ಸಂತೋಷವನ್ನು ಕಾಣುತ್ತಿರುವನು, ಇದಕ್ಕೆ ಇನ್ನೊಂದು ಉದಾಹರಣೆ, ಇಂದಿಗೂ ಉತ್ತರ ಕನ್ನಡದ ಹಳ್ಳಿ ಹಳ್ಳಿಗಳಲ್ಲಿ ನಡೆಯುವ ಯಾವುದೇ ಪಂದ್ಯಾವಳಿಗೂ ಕರೆದಾಗ ಒಲ್ಲೆಯೆನ್ನದೇ ಭಾಗವಹಿಸಿ ಪ್ರೋತ್ಸಾಹಿಸಿ ಯುವ ಆಟಗಾರರಿಗೆ ಸ್ಪೂರ್ತಿ, ಹುಮ್ಮಸ್ಸು ತುಂಬುತ್ತಿರುವುದು, ಅನ್ಯಾಯದ ವಿರುದ್ಧ ಹೋರಾಡುವುದರಲ್ಲಿ ಯಾವತ್ತೂ ಮುಂದೆ, ನೋವಿನಲ್ಲಿರುವವರಿಗೆ, ಕರೆಯದೇ ಬಂದು ಸಹಾಯಮಾಡಿ ಸಂತೈಸುವುದರಲ್ಲಿ ಎತ್ತಿದ ಕೈ…ಬಡಜನರಿಗಾಗಿ ಸ್ನೇಹಕ್ಕೂ ಸೈ…ಬಡವರ ಹಿತಕ್ಕಾಗಿ ಸಮರಕ್ಕೂ ಸೈ…ಜಾತಿ, ಭೇದ, ಯಾವುದನ್ನು ಗಮನಿಸದ ಸರ್ವಜನಾಂಗದ ಅಪ್ರತಿಮ ನಾಯಕ.
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿ ಇಲ್ಲದಿರುವ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ ನೇರ, ನಡೆ,ನುಡಿ, ಆಪತ್ಧಾಂಭವ ಗುಣಗಳಿಂದಲೇ ಅತೀ ಹೆಚ್ಚು ದಾಖಲೆಯ ಮತದೊಂದಿಗೆ ಆರಿಸಿಬಂದು, ಮುಂದೊಂದು ದಿನ, ಜಿಲ್ಲೆಯ ಕ್ಷೇತ್ರಕ್ಕೆ ಸಮರ್ಥ ನಾಯಕನಾಗಿ ಆಡಳಿತ ನೀಡಲು ಶಕ್ತ ಎಂಬ ಸುಳಿವು ನೀಡಿದವರು.
ಇತರ ಪಕ್ಷದ ಅಭ್ಯರ್ಥಿಗಳು, ಘಟಾನುಘಟಿಗಳು,ಹಣ, ಜಾತೀಯತೆ, ಹಳೆಯ ಅಧಿಕಾರದ ಮದದಲ್ಲಿ ತಾವೇ ಗೆಲ್ಲುವ ಕುದುರೆ ಎಂದು ಕೆನೆಯುತ್ತಿರುವಾಗ, ಎಲ್ಲ ಜನಾಂಗದ ಯುವ ಕಾರ್ಯಕರ್ತರ ಪಡೆಯನ್ನು ತಳಮಟ್ಟದಿಂದ ಸಂಘಟಿಸಿ, ಎರಡನೇ ಬಾರಿಗೂ ಗೆದ್ದು, ಇಟ್ಟ ನಂಬಿಕೆ, ಕೊಟ್ಟ ಮಾತನ್ನು ಉಳಿಸಿಕೊಂಡ ಧೀಮಂತ ಯುವ ನಾಯಕ, ಸಹಜತೆ, ಸಹಬಾಳ್ವೆ, ಸರ್ವರ ಏಳಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಮೈಗೂಡಿಸಿಕೊಂಡು ಬಂದ ಅಮೂಲ್ಯ ರತ್ನ.. ಅವನು ಆವತ್ತೇ ಬದಲಾದವನಲ್ಲ..ಈಗ ಬದಲಾಗುವನೇ?.
ಇಲ್ಲ ಇನ್ನಷ್ಟು ಅಭಿವೃದ್ಧಿಗೆ ಹೋರಾಡುವವನೇ ಹೊರತು, ಗೆದ್ದು ಬಂದ ಮೇಲೆ ಬೆನ್ನು ತೋರಿಸಿದ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಹಿಂದಿನ ಜನ ಪ್ರತಿನಿಧಿಗಳಂತಲ್ಲ..ಅವನೆಂದರೆ ಅಭಿವೃದ್ಧಿಯ ಪರ ಹೋರಾಟಗಾರ…ಕೊಟ್ಟ ಮಾತಿಗೆ ಬದ್ಧ…ಗೆದ್ದು ಹಣ ಮಾಡುವ,ಜಾತಿ ರಾಜಕಾರಣ ಮಾಡುವ ಅವಕಾಶವಾದಿಗಳಿಗೆ ತದ್ವಿರುದ್ಧ..ಅಡಗಲಿ ವಂಶಪಾರಂಪರ ಆಳ್ವಿಕರ, ಧರ್ಮ ರಕ್ಷಣೆಯ ಮುಖವಾಡ ಧರಿಸಿದವರ ಸದ್ದು.
ಬರುತ್ತಿದ್ದಾನೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಯುವ ನಾಯಕ ಪದ್ದು….
ಬೆಳಗಲಿ ಭರವಸೆಯ ಹೊಸ ದೀಪ..ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರಕ್ಕೆ..ಈ ಬಾರಿ ಪ್ರದೀಪ