ಶಿರಸಿ : ಶಿರಸಿ ಸಿದ್ಧಾಪುರ ಕ್ಷೇಯ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಇಂದು ನಾಮಪತ್ರ ಸಲ್ಲಿಸಿದರು. ಅಪಾರ ಅಭಿಮನಿಗಳು ಭೀಮಣ್ಣ ನಾಯ್ಕ ಅವರಿಗೆ ಬೆಂಬಲ ಸೂಚಿಸಿದರು.
ಜನಸ್ಥೋಮವೇ ಸೇರಿದ್ದು ಕಾಂಗ್ರೆಸ್ ಪ್ರಭಲವಾಗಿ ಗೋವರಿಸುವಂತೆ ಇತ್ತೆಂದು ವರದಿಯಾಗಿದೆ.
ಭೀಮಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಬಿಜೆಪಿ ಹಾಗೂ ಜೆಡಿಎಸ್ನ ಒತ್ತಡವನ್ನು ಹೆಚ್ಚಿಸಿದೆ. ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜೆಡಿಎಸ್ ಅಭ್ಯರ್ಥಿ ಶಶಿಭೂಶಣ ಹೆಗಡೆ ಅವರು ವರ್ಷದ ಮೊದಲೇ ಪ್ರಚಾರ ಆರಂಭಿಸಿದರೂ ಅದರ ಪ್ರಯೋಜನ ಈಗ ಯಾವ ಮಟ್ಟಿಗೆ ದೊರೆಯುತ್ತದೆ ಎಂಬುದು ಪ್ರಶ್ನೆಯಾಗಿದೆ. ಕ್ಷೇತ್ರದಲ್ಲಿ ಇನ್ನು ಮುಂದೆ ನಡೆಯುವ ‘ವರ್ಕೌಟ್’ನಿಂದ ಚಿತ್ರಣ ಬದಲಾಗುತ್ತಾ ಸಾಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ.