ಪುದೀನ ವಿಶಿಷ್ಟ ಕಂಪು ಮತ್ತು ರುಚಿಗೆ ಹೆಸರಾದ ಮೂಲಿಕೆಪುದೀನ ಪೌಷ್ಟಿಕ ಸೊಪ್ಪು. ಇದರಲ್ಲಿ ಶರೀರದ ಬೆಳವಣಿಗೆ ಮತ್ತು ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಪ್ರೋಟೀನ್, ಶರ್ಕರಪಿಷ್ಟ, ಕೊಬ್ಬು, ಖನಿಜ ಪದಾರ್ಥ, ನಾರುಪದಾರ್ಥ, ಸುಣ್ಣ, ಜೀವಸತ್ವಗಳು ಹಾಗೂ ಕ್ಯಾಲೊರಿಗಳು ಅಧಿಕ ಪ್ರಮಾಣದಲ್ಲಿರುತ್ತವೆ.

  • ಪದೇ ಪದೆ ಕಾಡುವ ಶ್ವಾಸಕೋಶದ ಸೋಂಕಿಗೆ 1 ಚಮಚ ಪುದೀನ ರಸಕ್ಕೆ 1 ಚಮಚ ಕ್ಯಾರೆಟ್ ರಸ ಹಾಗೂ 1ಚಮಚ ಜೇನುತುಪ್ಪ ಸೇರಿಸಿ ಖಾಲಿ ಹೊಟ್ಟೆಗೆ ಸೇವಿಸಿದರೆ ಶ್ವಾಸಕೋಶವು ಸೋಂಕು ರಹಿತವಾಗಿ ಬಲವಾಗುತ್ತದೆ .
  • 1ಚಮಚ ಪುದೀನ ರಸಕ್ಕೆ 1/2 ಚಮಚ ನಿಂಬೆ ರಸ ಮತ್ತು 1 ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ಪಿತ್ತ ಹೆಚ್ಚಾದಾಗ ಕಾಡುವ ವಾಂತಿ, ತಲೆನೋವು ಕಡಿಮೆಯಾಗುತ್ತದೆ.
  • ಪುದೀನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಆ ಪುಡಿಯಿಂದ ಹಲ್ಲುಗಳನ್ನು ಉಜ್ಜಿದರೆ ಬಾಯಿ ವಾಸನೆ ಬರುವುದಿಲ್ಲ ಮತ್ತು ವಸಡುಗಳು ದೃಢವಾಗುತ್ತದೆ.
  • ಪುದೀನ ಕಷಾಯವನ್ನು ಸೇವಿಸಿದರೆ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಕಡಿಮೆಯಾಗುತ್ತದೆ
  • ಕಣ್ಣಿನ ಸುತ್ತ ಕಪ್ಪ್ಪು ಕಟ್ಟಿದ್ದರೆ ಪುದೀನ ಎಲೆಗಳನ್ನು ಪೇಸ್ಟ್ ಮಾಡಿ ನಿಯಮಿತವಾಗಿ ಕಣ್ಣಿನ ಸುತ್ತಲೂ ಲೇಪಿಸಿ.
  • ತಲೆಸಿಡಿತ, ಸಂಧಿವಾತ ಮುಂತಾದವುಗಳಲ್ಲಿ ಎಲೆಗಳನ್ನು ನುಣ್ಣಗೆ ಅರೆದು ಪಟ್ಟು ಹಾಕಿದರೆ ಉಪಶಮನ ಸಿಗುತ್ತದೆ.
  • ಇದು ಕರುಳಿನಲ್ಲಿ ಒಗರನ್ನುಂಟು ಮಾಡುತ್ತದೆ. ಬಿಕ್ಕಳಿಕೆಗೆ ಇದನ್ನು ಸೇವಿಸುವುದು ಲಾಭದಾಯಕ.
  • ಎಲೆಗಳಲ್ಲಿ ಕ್ರಿಮಿನಾಶಕ ಗುಣಗಳಿವೆ. ಊಟದ ನಂತರ ಇದರ ಎಲೆಗಳನ್ನು ಅಗಿದು ತಿನ್ನುವುದರಿಂದ ಹುಳುಕು ಹಲ್ಲುಗಳ ತೊಂದರೆಬಾರದು.
  • ಇದು ಜಂತುನಾಶಕವೂ ಹೌದು. ಎಲೆಗಳಲ್ಲಿ ಮೂತ್ರೋತ್ಪಾದಕ ಗುಣಗಳಿವೆ
  • ಸಂಗೀತಗಾರರು ಮತ್ತು ಭಾಷನಕಾರರು ತಮ್ಮ ಧ್ವನಿ ಹಾಗೂ ಗಂಟಲು ಚೆನ್ನಾಗಿರಲು ಇದರ ಎಲೆಗಳನ್ನು ತಿನ್ನುವುದು ಲಾಭದಾಯಕ.
  • ಇದರ ಕಷಾಯಕ್ಕೆ ಒಂದು ಚಿಟಿಕೆ ಅಡುಗೆ ಉಪ್ಪು ಬೆರೆಸಿ ಮುಕ್ಕಳಿಸಿದರೂ ಸಾಕು, ಸಾಮಾನ್ಯ ನೆಗಡಿ, ಕೆಮ್ಮು ನಿವಾರಣೆಯಾಗುತ್ತದೆ.
  • ಮೊಡವೆಗಳು ಮಾಯವಾಗಿ ಮುಖಕಾಂತಿ ಹೆಚ್ಚಲು ಇದರ ಎಲೆಗಳ ರಸ ಮತ್ತು ಅರಿಶಿಣಗಳನ್ನು ಬೆರೆಸಿ ಹಚ್ಚಬೇಕು.
RELATED ARTICLES  ಮೇ 23 ರಂದು ಕಾರವಾರದಲ್ಲಿ ಕ್ಯಾಂಪಸ್ ಇಂಟರವ್ಯೂ! ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣ ಅವಕಾಶ