ಕುಮಟಾ: ಹಿಂದು ಹುಲಿ ಎಂದೇ ಪ್ರಖ್ಯಾತರಾಗಿರುವ ಗೋ ರಕ್ಷಕ, ಯುವ ಮುಖಂಡ ಸೂರಜ್‌ನಾಯ್ಕ ಸೋನಿ ಬಿಜೆಪಿ ಭಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಇಂದು ಅವರು ಅವರ ಸ್ವಗ್ರಹದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಬಹಿರಂಗಪಡಿಸಿದರು.

ಪಕ್ಷದಲ್ಲಿ ಹಲವು ವರ್ಷಗಳಿಂದ ನಿಷ್ಟೆಯಿಂದ ಸೇವೆ ಸಲ್ಲಿಸಿದ್ದಕ್ಕೆ ಕಣ್ಣಿರಿಡುವಂತಾಗದೆ. ಎಂದು ಬೇಸರ ವ್ಯಕ್ತಪಡಿಸಿದ ಅವರು ನಾಳೆ ರ‍್ಯಾಲಿ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎಂದರು.

RELATED ARTICLES  ಪರೇಶ ಮೇಸ್ತ ಸಾವು ಪ್ರಕರಣ: ಮುಂಡಗೋಡ ಬಂದ್‌.

ಮಾದ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಅಸಂಖ್ಯ ಅಭಿಮಾನಿಗಳು ಹಾಗೂ ಹಿಂದೂ ಕಾರ‍್ಯಕರ್ತರು ಬೆಂಗಾವಲಿಗೆ ನಿಂತಿರುವುದು ಮನೋಸ್ತೈರ್ಯ ಹೆಚ್ಚಿಸಿದೆ. ಮೂಲ ತತ್ವ ಸಿದ್ದಾಂತದೊಂದಿಗೆ ಈ ಬಾರಿ ಚುನಾವಣಾ ಕಣಕ್ಕಿಳಿಯಬೇಕಾಗಿದೆ. ಸರ್ವೆಯಲ್ಲಿ ಮೊದಲ ಸ್ಥಾನ ಹೊಂದಿದ್ದರೂ ಟಿಕೇಟ್ ವಲಸೆ ಬಂದ ಮೋದಿ ಬಾವುಟ ಕಿತ್ತವರಿಗೆ ನೀಡಿರುವುದು ಅಸಂಖ್ಯ ಅಭಿಮಾನಿಗಳ ನೋವಿಗೆ ಕಾರಣವಾಗಿದೆ ಎಂದರು. ಪಕ್ಷ ಭರವಸೆಯನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹಾಗಾಗಿ ಸ್ವತಂತ್ರವಾಗಿ ನಾನು ಸ್ಪರ್ದಿಸುವ ನಿರ್ದಾರ ಮಾಡಿದ್ದೇನೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES  Searching for the 'angel' who held me on Westminster Bridge

ಸೂರಜ್ ನಾಯ್ಕ ಹೋರಾಟಗಾರರಾಗಿ ಗುರುತಿಸಿಕೊಂಡ ಕಾರಣದಿಂದಾಗಿ ಅವರಿಗೆ ಅಪಾರ ಜನ ಬೆಂಬಲವೂ ಲಭ್ಯವಾಗಲಿದೆ ಎಂದು ಅವರ ಅಭಿಮಾನಿಗಳು ಸತ್ವಾಧಾರ ನ್ಯೂಸ್ ಗೆ ತಿಳಿಸಿದರು.