ಕುಮಟಾ: ಗಜಪ್ರಸವದಂತೆ ಕಡೆಯ ಘಳಿಗೆಯ ವರೆಗೂ ಕುಮಟಾದ ಬಿಜೆಪಿಯ ಅಭ್ಯರ್ಥಿಯ ಘೋಷಣೆ ಆಗದಿರುವುದನ್ನು ನೋಡಿ ಈ ಬಾರಿ ಪಕ್ಷಕ್ಕೆ ಕ್ಷೇತ್ರದಲ್ಲಿ ಒಳಜಗಳದಿಂದಾಗಿ ತೀವ್ರ ಹಿನ್ನೆಡೆ ಆಗಲಿದೆ ಎಂದು ಎಲ್ಲರೂ ಭಾವಿಸಿದ್ದು ಬಹುತೇಕ ಸುಳ್ಳಾಗುವ ಲಕ್ಷಣಗಳು ಕಂಡುಬರುತ್ತಿದೆ.

ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಗಳ ದಂಡೇ ಇದ್ದರೂ ತಮಗೆ ಅವಕಾಶ ಸಿಗಲಿಲ್ಲ ಎಂದು ಎಲ್ಲರೂ ಬಂಡೇಳಬಹುದು ಎಂಬ ಭಾವನೆ ಸುಳ್ಳಾಗಿ ಇದು ಕರಗಿ ಬೆರಳೆಣಿಕೆಗೆ ಬರುತ್ತಿದೆ
ಬಹುತೇಕ ಒಂದೆರಡು ದಿನಗಳಲ್ಲಿ ಒಮ್ಮತ ಮೂಡುವ ಲಕ್ಷಣಗಳು ಗೋಚರಿಸುತ್ತಿದೆ.

RELATED ARTICLES  ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಮಂಜುನಾಥ ಎಂ.ನಾಯ್ಕ ಆಯ್ಕೆ

ಆಕಾಂಕ್ಷಿಗಳಾದ ನಾಗರಾಜ ನಾಯಕ, ಡಾ ಜಿ ಜಿ ಹೆಗಡೆ ಕುಮಾರ ಮಾರ್ಕಾಂಡೆ,ಸುಬ್ರಾಯ ವಾಳ್ಕೆ,ಎಂ.ಜಿ ಭಟ್ಟ,ವೆಂಕಟೇಶ ನಾಯಕ,ವೆಂಕಟ್ರಮಣ ಹೆಗಡೆ, ಶ್ರೀಕಲಾ‌ ಶಾಸ್ತ್ರಿ ಶ್ರೀಮತಿ ಸುಧಾಗೌಡ ಮೊದಲಾದವರು ಈಗಾಗಲೇ ಪಕ್ಷದ ನಿರ್ಣಯಕ್ಕೆ ಬದ್ಧತೆಯನ್ನು ಸೂಚಿಸಿ ಪ್ರಚಾರಕ್ಕೆ ಇಳಿಯುವ ಭರವಸೆಯನ್ನು ನೀಡಿರುವುದು ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

RELATED ARTICLES  ಅಡಿಕೆ ಮತ್ತು ಕಾಳುಮೆಣಸು ಸಾಗಿಸುತ್ತಿದ್ದ ಲಾರಿ ಪಲ್ಟಿ.

ಈಗಾಗಲೇ ದಿನಕರ ಶೆಟ್ಟಿಯವರು ಬಿಜೆಪಿಯ ಹಿರಿ ಕಿರಿಯ ಕಾರ್ಯಕರ್ತರನ್ನು ಸಂಪರ್ಕಿಸಿ ಅವರ ಬೆಂಬಲವನ್ನು ಪಡೆದುಕೊಳ್ಳಲು ಪ್ರಾರಂಭಿಸಿ ತಮ್ಮ ವಿನಯತೆ ಹಾಗೂ ಸ್ಪಂದನೆಯಿಂದ ಮೆಚ್ಚುಗೆ ಗಳಿಸುತ್ತಿದ್ದಾರೆ.