ಕುಮಟಾ: ಭಾರತೀಯ ಜನತಾ ಪಕ್ಷದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಘೋಷಿತ ಅಭ್ಯರ್ಥಿ ದಿನಕರ ಶೆಟ್ಟಿಯವರ ನಾಮಪತ್ರ ಸಲ್ಲಿಕೆಯ ಸಂಬಂಧಿ ಬಹಿರಂಗ ಸಭೆ ಕುಮಟಾದಲ್ಲಿ ನಡೆಯಿತು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಅನಂತಕುಮಾರ ಹೆಗಡೆ ಈ ಕ್ಷೇತ್ರಕ್ಕೆ ಹಿರಿಯರೆಲ್ಲರು ಸೇರಿ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎನ್ನಿಸಿದ್ದು ಇಂದು ಎಂದ ಅವರು, ದೇಶದ ಎಲ್ಲರೂ ಒಂದೇ ಕಡೆ ನಡೆದರೆ ದೇಶ ಪ್ರಗತಿಗೆ ಸಾಗುವುದು. ಕುಮಟಾದಲ್ಲಿ ಅನೇಕ ಆಕಾಂಕ್ಷಿಗಳಿದ್ದರು ಎಲ್ಲರೂ ಗೆಲ್ಲುವ ಅಭ್ಯರ್ಥಿಗಳೇ ಆಗಿದ್ದರೂ ಇಂದು ಪ್ರಭುದ್ದರಾಗಿದ್ದಾರೆ ಎಂದರು. ರಾವಣ ರಾಜ್ಯವಾಗುವುದನ್ನು ತಡೆಯಲು ಬಿಜೆಪಿ ಗೆಲ್ಲಿಸಬೇಕು. ಧರ್ಮ ಉಳಿಯಬೇಕು ಎಂದರೆ ಬಿಜೆಪಿ ಗೆಲ್ಲಬೇಕು ಎಂದರು.
ಕೇಂದ್ರದ ನಮ್ಮ ಸರಕಾರ ಜನಪರ ಯೋಜನೆ ತರುತ್ತಿದೆ. ಅದು ಜನರನ್ನು ತಲುಪಬೇಕೆಂದರೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಹಿಂದೆ ಜೆಡಿಎಸ್ ನಲ್ಲಿ ನಾನು ಇದ್ದಾಗ ಅದು ಹೇಗೆ ಹೇಗೋ ನಡೆಯುತ್ತಿತ್ತು ಆದರೆ ಬಿಜೆಪಿಯಲ್ಲಿ ಸಂಘಟನೆ ಇದೆ. ಆ ಸಂಘಟನೆಯನ್ನು ಗಮನಿಸಿ ನಾನು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ .ನಾನು ಮಾಡಿದ ಒಂದೇ ಕೋಟಿ ಕಾಮಗಾರಿಗೆ ಈಗ ಮೂರು ಕೋಟಿ ನೀಡುತ್ತಿರುವುದು ವಿಪರ್ಯಾಸ ಎಂದು ಅಣುಕಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿಯವರು ಮಾತನಾಡಿ ಸಾವಿನ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ. ಪರೇಶ ಮೇಸ್ತ ಹಾಗೂ ಕರ್ನಾಟಕದಲ್ಲಿ ನಡೆದ ಪ್ರಕರ್ಣಕ್ಕೆ ಸಿದ್ಧರಾಮಯ್ಯ ಉತ್ತರ ಕೊಡಲಾರರು ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಹರಿ ಹಾಯ್ದರು. ಕಾಂಗ್ರೆಸ್ ಜಾತಿ ಜಾತಿಗಳನ್ನು ಧರ್ಮ ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಎಲ್ಲ ಶಾಸಕರು ನಂಬರ್ ೧ ಆದರೆ ನಂಬರ್ ೨ ಯಾರು ಎಂದು ಅಣುಕಿಸಿದ ಅವರು ಪ್ರತೀ ಬೂತ್ ಮಟ್ಟದಲ್ಲಿ ಬಿಜೆಪಿಯ ಅಭ್ಯರ್ಥಿ ದಿನಕರ ಶೆಟ್ಟಿಯವರನ್ನು ಗೆಲ್ಲಿಸಬೇಕು ಎಂದು ವಿನಂತಿಸಿದರು.
ನಂತರದಲ್ಲಿ ಸಚಿವರಿಂದೊಡಗೂಡಿ ಎಲ್ಲ ಕಾರ್ಯಕರ್ತರು ಅಪಾರಸಂಖ್ಯೆಯಲ್ಲಿ ಸೇರಿದ ಜನರ ಜೊತೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಪ್ರಮೋದ ಹೆಗಡೆ ಯಲ್ಲಾಪುರ ಕೆ.ಜಿ ನಾಯ್ಕ ವಿನೋದ ಪ್ರಭು, ಸುಬ್ರಾಯ ವಾಳ್ಕೆ, ನಾಗರಾಜ ನಾಯಕ ತೊರ್ಕೆ, ಶ್ರೀ ವೆಂಕಟ್ರಮಣ ಹೆಗಡೆ,ಪ್ರೋ.ಎಂ.ಜಿ ಭಟ್ಟ, ವೆಂಕಟೇಶ ನಾಯಕ, ಎನ್ ಎಸ್ ಹೆಗಡೆ ಇನ್ನಿತರರು ಹಾಜರಿದ್ದರು.