ಕುಮಟಾ : ಸಾವಿರಾರು ಹಿಂದೂ ಕಾರ್ಯಕರ್ತರ ಸಮ್ಮುಖದಲ್ಲಿ ಹಿಂದೂ ಹುಲಿ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿರುವ ಸೂರಜ್ ನಾಯ್ಕ್ ಸೋನಿ ಅವರು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದರು.

ಬಿ.ಜೆ.ಪಿ ಟಿಕೇಟ್ ವಂಚಿತ ಸೋನಿ ಅವರು ಇಂದು ಬಂಡಾಯವಾಗಿ ಚುನಾವಣೆ ಸ್ಪರ್ಧಿಸುತಿದ್ದು ಇಂದು ಸಾವಿರಾರು ಕಾರ್ಯಕರ್ತರು ಅವರಿಗೆ ಬೆಂಬಲ ಸೂಚಿಸಿದರು.

RELATED ARTICLES  ನಿಯಂತ್ರಣ ತಪ್ಪಿ ರೈಲ್ವೆಯಡಿ ಸಿಲುಕಿ ಮೃತಪಟ್ಟ ಕೊಂಕಣ ರೈಲ್ವೆ ಟ್ರ್ಯಾಕ್ ಮ್ಯಾನ್: ಕುಮಟಾ ಬರ್ಗಿಯ ಸೂರ್ಯಶೇಖರ ಸಾವು.

IMG 20180424 WA0012

ಕುಮಟಾ ನಗರದ ಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಹೊರಟ ಮೆರವಣಿಗೆ ನಗರದಾದ್ಯಂತ ಹಿಂದೂ ಪರ ಘೋಷಣೆ ಕೂಗುತ್ತಾ ಸಂಚರಿಸಿ ಉಪ ನೊಂದಾವಣಾ ಅಧಿಕಾರಿಯವರಿಗೆ ನಾಮಪತ್ರ ಸಲ್ಲಿಸಿದರು.

RELATED ARTICLES  ಕುಮಟಾ ಪುರಸಭೆ ಮಾಜಿ ಅಧ್ಯಕ್ಷ ರೋಹಿದಾಸ ನಾಯ್ಕ ಇನ್ನಿಲ್ಲ.

ಕೇಸರಿ ಶಲ್ಯ ತೊಟ್ಟ ಅಭಿಮಾನಿಗಳು ಶಲ್ಯ ಬೀಸಿ ಸೋನಿಯವರಿಗೆ ಬೆಂಬಲ ಸೂಚಿಸಿದರು. ಈಗ ಚುನಾವಣಾ ಕದನ ಬಿರುಸಾಗಿದ್ದು ಮತದಾರ ಯಾರಿಗೆ ಒಲಿಯುತ್ತಾನೆ ಎಂಬುದನ್ನು ಕಾದು ನೋಡಬೇಕಾಗಿದೆ.