ಕುಮಟಾ: ಚುನಾವಣೆ ಸಮೀಪಿಸುತ್ತಿದೆ. ಪ್ರಚಾರದ ಭರಾಟೆಯೂ ಜೋರಾಗಿದೆ. ಅದೇ ಸಂದರ್ಭದಲ್ಲಿ ಪಕ್ಷ ಸೇರ್ಪಡೆಯ ಕಾರ್ಯವೂ ನಡೆಯುತ್ತಿದೆ.

ಇಂದು ಬ್ಲಾಕ್ ಕಾಂಗ್ರೆಸ್ ಕುಮಟಾ ಕಚೇರಿಯಲ್ಲಿ ಶ್ರೀ ರವಿಕುಮಾರ್ ಮೋಹನ್ ಶೆಟ್ಟಿಯವರ ಸಮ್ಮುಖದಲ್ಲಿ ನೆಹರು ನಗರ ಹಾಗೂ ವಿವೇಕ ನಗರದ ಯುವಕರು ಶ್ರೀ ಅಜೀತ್ ನಾಯ್ಕ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

RELATED ARTICLES  ಉತ್ತರಕನ್ನಡದಲ್ಲಿ ಇಂದು 613 ಜನರಿಗೆ ಕೊರೋನಾ ಪಾಸಿಟಿವ್ : ಎರಡು ಸಾವು.

ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಯುವ ಪಡೆಯೊಂದಿಗೆ ಈ ಭಾರಿಯ ಚುನಾವಣೆಯನ್ನು ಎದುರಿಸಲಾಗುವುದೆಂದು ರವಿಕುಮಾರ ಶೆಟ್ಟಿ ತಿಳಿಸಿದ್ದಾರೆ.

RELATED ARTICLES  ಸೇವಕತ್ವ ದೇವತ್ವಕ್ಕೆ ಹತ್ತಿರ: ರಾಘವೇಶ್ವರ ಶ್ರೀ

ಈ ಸಂದರ್ಭದಲ್ಲಿ ಯುವಕರು ಕಾಂಗ್ರೆಸ್ ನ ಅಭಿವೃದ್ಧಿಯ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ. ಶಾರದಾ ಶೆಟ್ಟಿಯವರ ಜನಪರ ಕಾಳಜಿ ಹಾಗೂ ಅವರ ಅಭಿವೃದ್ಧಿಯ ಕಾರ್ಯಗಳನ್ನು ಮೆಚ್ಚಿ ನಾವು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.