ಕುಮಟಾ: ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಡ್ತಿ
ಹೊಂದಿದ ಆರ್.ಟಿ.ಹೆಗಡೆ ಮತ್ತು ರಾಷ್ಟ್ರ ಮಟ್ಟದ ವೇಯ್ಟ್
ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅತ್ಯುನ್ನತ ಸಾಧನೆ ತೋರಿದ ಸಿಂಡಿಕೇಟ್
ಬ್ಯಾಂಕ್ ಪ್ರಬಂಧಕ ಪುಷ್ಪರಾಜ ಹೆಗಡೆ ಅವರನ್ನು ಇಲ್ಲಿಯ
ರೋಟರಿ ಕ್ಲಬ್ ವತಿಯಿಂದ ಅವರ ಸಾಧನೆ ಸ್ಮರಿಸಿ ಗೌರವ
ಸಮರ್ಪಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್.ಟಿ.ಹೆಗಡೆ
ಸಮೃದ್ಧ ನಾಡು ಕಟ್ಟ ಬೇಕಾದರೆ ಸಮೃದ್ಧ ಅರಣ್ಯ
ಸಂರಕ್ಷಿಸಬೇಕಾದ ಅನಿರ್ವಾಯತೆಯನ್ನು ಎಲ್ಲರೂ
ಮನಗಂಡು ಪರಿಸರ ಸಮತೋಲನದಲ್ಲಿ
ತೊಡಗಿಸಿಕೊಳ್ಳುಂತಾಗಬೇಕೆಂದು ಅಭಿಪ್ರಾಯಪಟ್ಟರು.
ಸನ್ಮಾನಿತ ಪುಷ್ಪರಾಜ ಹೆಗಡೆ ಮಾತನಾಡುತ್ತಾ, ಒಲಿಪಿಂಕ್
ಕ್ರೀಡೆಯಲ್ಲಿ ಭಾರತದ ಕಳಪೆ ಸಾಧನೆಗೆ
ಕ್ರೀಡಾಪಟುಗಳ ತಪ್ಪು ಆಯ್ಕೆ, ಅಸಮರ್ಥ ತರಬೇತಿ,
ಕಳಪೆ ಸಾಮಗ್ರಿಯಿಂದ ಹಿಡಿದು ಕ್ರೀಡಾ ಕ್ಷೇತ್ರಕ್ಕೆ
ದೊರಕದ ಮಹತ್ವವೇ ಕಾರಣವಾಗಿದೆಯೆಂದು ತನ್ನ
ಕ್ರೀಡಾಜೀವನದ ನೋವು ನಲಿವುಗಳನ್ನು ವಿಶ್ಲೇಷಿಸಿದರು.
ತಾವು ನಾಡಿಗಾಗಿ ಗೆದ್ದು ತಂದ ಪದಕಗಳನ್ನು
ಪ್ರದರ್ಶಿಸಿದರು. ಹಿರಿಯ ರೊಟೇರಿಯನ್ ಜಿ.ಎಸ್.ಕಾಮತ
ಅಭಿನಂದನಾ ಪರ ಮಾತನಾಡಿದರು.
ರೋಟರಿ ವರ್ಷದ ಕೊನೆಯ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋಟರಿ ಅಧ್ಯಕ್ಷ
ಜಿ.ಜೆ.ನಾಯ್ಕ ಸೇವಾಧ್ಯೇಯವೊಂದರಿಂದಲೇ ಸಾರ್ವಜನಿಕರಿಗೆ
ನೆರವಾಗುವಲ್ಲಿ ರೋಟರಿ ಕ್ಲಬ್‍ನ ಸಂತೃಪ್ತಿ ಅಡಗಿದೆ ಎಂದರು.
ಕಾರ್ಯದರ್ಶಿ ಎನ್.ಆರ್.ಗಜು, ಮುಂದಿನ ದಿನಗಳಲ್ಲಿ ಯೋಜಿತ
ಗುರಿ ತಲುಪಿ ರೋಟರಿ ಇನ್ನೂ ಜನಸಾಮಾನ್ಯರಿಗೆ
ನೆರವಾಗುವುದೆಂದರಲ್ಲದೇ, ರೋಟರಿ ಚಟುವಟಿಕೆಗಳ ಮಾಸಿಕ
ವರದಿ ಪ್ರಸ್ತುತಪಡಿಸಿದರು. ಶ್ರೀಕಾಂತ ಭಟ್ಟ ಮತ್ತು ಅತುಲ್
ಕಾಮತ ಸನ್ಮಾನ ಪತ್ರ ಓದಿದರು. ಕುಮಾರಿ ಶ್ರೇಯಾ ರಾವ್
ನಿರೂಪಿಸಿದರು. ಕುಮಾರಿ ಸಂಪ್ರೀತಾ ಭಟ್ಟ ಪ್ರಾರ್ಥಿಸಿದರು.
ರೋಟೇರಿಯನ್ ಅಕ್ಬರ್ ಮುಲ್ಲಾ ಅಧ್ಯಕ್ಷರಿಗೆ ಕಂಠಪಟ್ಟಿ
ಧಾರಣೆ ಮಾಡಿದರೆ, ಜಿನರಾಜ್ ಧ್ಯೇಯವಾಕ್ಯ ವಾಚಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಹಾಯಕ ಜಿಲ್ಲಾ ಗರ್ವನರ್
ಜಯಶ್ರೀ ಕಾಮತ ಅವರು ಪ್ರೌಢಶಾಲಾ ಪ್ರಯೋಗ ಶಾಲೆಗೆ
ಉಪಯುಕ್ತ ವಿಜ್ಞಾನ ಕಿಟ್ ಅನ್ನು ಸಾಂಕೇತಿಕವಾಗಿ ಗಿಬ್
ಬಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕ
ಎಂ.ಆರ್.ಉಪಾಧ್ಯಾಯ ಅವರಿಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್‍ಗೆ
ಸ್ಟೀಲ್ ಕಪಾಟನ್ನು ದೇಣಿಗೆಯಾಗಿ ಖಜಾಂಜಿ ವಸಂತ ಶಾನಭಾಗ
ಅವರಿಗೆ ಕೀ ನೀಡುವುದರ ಮೂಲಕ ವಿತರಿಸಿದರು.
ವರ್ಷದುದ್ದಕ್ಕೂ ನೆರವಿನ ಹಸ್ತಚಾಚಿದ ಎಜಿ ಜಯಶ್ರೀ ಕಾಮತ
ಅವರನ್ನು ರೋಟರಿ ಪರಿವಾರದ ಸದಸ್ಯರು ಸನ್ಮಾನಿಸಿದರು.
ಗುರುದಾಸ ಗಾಯ್ತೊಂಡೆ, ಡಾ.ಡಿ.ಡಿ.ನಾಯಕ, ಸುನಂದಾ ಪೈ
ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಏನ್ಸ್ ಅಧ್ಯಕ್ಷೆ ಸುಮಾ
ನಾಯ್ಕ, ಕಾರ್ಯದರ್ಶಿ ವಿಜಯಲಕ್ಷ್ಮೀ ನಾಯ್ಕ, ಖಜಾಂಚಿ ವೀಣಾ
ಶಾನಭಾಗ ಉಪಸ್ಥಿತರಿದ್ದರು.