ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನ ಉಪನ್ಯಾಸಕರು, ರ್ಯಾಂಕ ವಿಜೇತರು, ಹಳೆ ಹಾಗೂ ಹಾಲಿ ವಿದ್ಯಾರ್ಥಿಗಳು ಒಡಗೂಡಿ ರಚಿಸಿದ “101 ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಜಿಕ್” ಎಂಬ ವಿದ್ಯುನ್ಮಾನ ಇ-ಪುಸ್ತಕವನ್ನು ಬಿಸ್ಲೆರಿ ಕಂಪನಿಯ ಎ.ಎಸ್.ಎಮ್‍ರಾದ ಶ್ರೀ ವಿಶಾಲ್ ಶೆಟ್ಟಿಯವರು ಬಿಡುಗಡೆಗೊಳಿಸಿದರು.

RELATED ARTICLES  ವ್ಯಕ್ತಿ ಸಾವು : ಮಲೇರಿಯಾ ಬಗ್ಗೆ ಶಂಕೆ.

101 ಲೇಖಕರು ರಚಿಸಿದ 101 ವಿಷಯಗಳನ್ನು ಈ ಪಿ.ಡಿ.ಎಫ್ ಪುಸ್ತಕ ಹೊಂದಿದ್ದು, ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳಿಗೆ ಪ್ರೋಗ್ರಾಮಿಂಗ್ ಲಾಜಿಕ್ ಅತಿ ಅವಶ್ಯಕವಾಗಿದ್ದು ಇದನ್ನು ಸರಳ ರೀತಿಯಲ್ಲಿ ಈ ಪುಸ್ತಕದಿಂದ ಕಲಿಯಬಹುದಾಗಿದೆ. ಮೊಬೈಲ್, ಟ್ಯಾಬ್ಲೇಟ್ಸ, ನೋಟಪ್ಯಾಡ್ ಗಳಲ್ಲಿ ಈ ಪುಸ್ತಕವನ್ನು ಉಚಿತವಾಗಿ ಓದುಬಹುದಾಗಿದೆ.

RELATED ARTICLES  ಸಾಹಿತಿ ಗಿರೀಶ್​ ಕಾರ್ನಾಡ್​ ಇನ್ನಿಲ್ಲ: ಸಾಹಿತ್ಯ ಲೋಕಕ್ಕೆ‌ ಮತ್ತೊಂದು ಆಘಾತ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ನಾಗೇಶ ಭಟ್, ಉಪ ಪ್ರಾಂಶುಪಾಲ ಶ್ರೀನಾಥ ಪೈ, ಉಪನ್ಯಾಸಕರಾದ ವಿಖ್ಯಾತ ಪ್ರಭು, ಕವಿತಾ ಮೊಗೇರ, ಗೌರೀಶ ಭಂಡಾರಿ, ಸಂಹಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.