ಕುಮಟಾ: ಹೋರಾಟಗಾರ ಹಾಗೂ ಹಿಂದೂ ವಾದಿಯಾಗಿಯೇ ಗುರುತಿಸಿಕೊಂಡ ಸೂರಜ್ ನಾಯ್ಕ ಬಿಜೆಪಿ ಟಿಕೆಟ್ ಕೈ ತಪ್ಪಿದ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ವಿಚಾರ ಎಲ್ಲರಿಗೂ ಗೊತ್ತು. ಆದರೆ ಅವರ ಬೆಂಬಲಕ್ಕೆ ಹಿಂದೂ ಕಾರ್ಯಕರ್ತರು ಸಾತ್ ನೀಡುತ್ತಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ.

ಹೌದು ಸೂರಜ್ ನಾಯ್ಕ ಸೋನಿಯವರ ಪರವಾಗಿ ಎಲ್ಲೆಡೆ ಸಾಮಾಜಿಕ ‌ಜಾಲತಾಣದಲ್ಲಿ ಮೆಸೇಜ್ ಹರಿದಾಡುತ್ತಿದ್ದು ಅವರ ಬೆಂಬಲಿಗರ ಮನಸ್ಥಿತಿ ತೋರುತ್ತಿದೆ. ಅವರೆಲ್ಲ ಸೂರಜ್ ನಾಯ್ಕ ಸೋನಿಯವರಿಗೆ ಬೆಂಬಲವಾಗಿದ್ದಾರೆ ಎಂಬುದೇ ಇದರ ಹಿಂದಿನ ಸತ್ಯ ಎಂಬುದು ಜನತೆಯ ಭಾವನೆ.

ಹೀಗಿದೆ ಆ ಸಂದೇಸ

ಅಂಕೋಲಾ_ಕಾರವಾರ_ಸಿರಸಿ_ಸಿದ್ದಾಪುರ_ಯಲ್ಲಾಪುರ_ಹಳಿಯಾಳ_ದಾಂಡೆಲಿ_ಜೋಯಿಡಾ_ಭಟ್ಕಳದ ಎಲ್ಲಾ_ಹಿಂದು_ಬಾಂಧವರಲ್ಲಿ_ಒಂದು_ವಿನಂತಿ.

ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಇಷ್ಟು ವರ್ಷ ಬಿಜೆಪಿ ಪಕ್ಷವನ್ನು ಬೆಳಸಿ, ಗೋ ರಕ್ಷಣೆಯ ವಿಷಯದಲ್ಲಿ ಷಢ್ಯಂತರಕ್ಕೆ ಒಳಗಾಗಿ ಜೈಲು ವನವಾಸ ಅನುಭವಿಸಿದ ,ಪರೇಶ ಮೇಸ್ತಾನ ಹತ್ಯೆ ವಿರುದ್ದ ಹೋರಟದಲ್ಲಿ ಕಲ್ಲೆಟಿನಿಂದ ಹಲ್ಲೆಗೂ ಒಳಗಾಗಿ ಹಿಂದುತ್ವದ ಪರವಾಗಿ ನಿಂತವ, ಕಳಪೆ ಕಾಮಗರಿ ಇನ್ನಿತರ ಕಾಂಗ್ರೆಸ್ ದುರಾಡಳಿತದ ವಿರುದ್ದ ಹೋರಾಟ ಮಾಡಿದ, ಮೋದಿ ಅಭಿಮಾನಿಯಾಗಿರುವ ಸೂರಜ_ಸೋನಿ ಯವರಿಗೆ ಟಿಕೆಟ್ ನೀಡದೆ ಮೂಲ ಬಿಜೆಪಿ ಕಾರ್ಯಕರ್ತರಿಗೆ ವಂಚಿಸಿ ನಿಜವಾದ ಹಿಂದುತ್ವಕ್ಕೆ ಮೋಸಮಾಡಿ ಇಗ ಮುಸ್ಲಿಂ ರನ್ನು ಒಲೈಕೆ ಮಾಡುವ ಭ್ರಷ್ಟ ರಾಜಕಾರಣಿ , ಮೋದಿ ಕಟೌಟನ್ನು ಕಿತ್ತೊಗೆದ, ಬೇರೆ ಪಕ್ಷದಿಂದ ಬಂದಂತ, ಅವಕಾಶವಾದಿ ಡೊಂಗಿ ಹಿಂದುತ್ವವಾದಿಗೆ ಟಿಕೆಟ್ ನೀಡಿದ್ದಾರೆ. ಇದು ಹಿಂದುಗಳ ಸ್ವಾಬಿಮಾನದ ಪ್ರಶ್ನೆ ನಿಜವಾದ ಹಿಂದುತ್ವದ ಹೋರಾಟಗಾರರಿಗೆ ಅನ್ಯಾಯವಾಗಬಾರದು. ಅವರಿಗೆ ಜಯ ಸಿಗಲೆಬೇಕು. ಡೊಂಗಿ ಹಿಂದುತ್ವವಾದಿಗಳಿಗೆ ಸೋಲಿನ ಸಂದೇಶ ಹೋಗಲೆ ಬೇಕು. ಹಿಂದುತ್ವಕ್ಕೆ ಮತ್ತು ನಿಜವಾದ ಹಿಂದು ಹೋರಾಟಗಾರರಿಗೆ ನಾವು ಮಾಡುವ ಚಿಕ್ಕ ಅಳಿಲು ಸೇವೆ. ದಯವಿಟ್ಟು ಕುಮಟಾ ಹೊನ್ನಾವರ ಭಾಗದಲ್ಲಿರುವ ನಿಮ್ಮ ನಿಮ್ಮ ಬಂದು ಬಾಂದವರಿಗೆ, ಗೆಳೆಯರಿಗೆ, ಸಮಾಜದವರಿಗೆ ದಯವಿಟ್ಟು ಪಕ್ಷೇತರ ಅಭ್ಯರ್ಥಿ ಸೂರಜ ಸೋನಿಯವರನ್ನು ಬೆಂಬಲಿಸಲು ಹೇಳಿ.
ನಮ್ಮ ಕ್ಷೇತ್ರ ಅಲ್ಲ ಅಂತ ಸುಮ್ಮನೆ ಕೂರದಿರಿ…ಶಾಸಕರಾಗುವ ಎಲ್ಲಾ ಅರ್ಹತೆಯಿದ್ದರೂ ಒಬ್ಬ ಪ್ರಾಮಾಣಿಕ ಹಿಂದು ಹೋರಾಟಗಾರರನ್ನು , ಇ ರೀತಿ ತುಳಿತಾರೆ ಅಂದರೆ ಮುಂದಿನ ದಿನಗಳಲ್ಲಿ ನಿಜವಾದ ಹಿಂದು ಹೋರಾಟಗಾರರನ್ನು ಕಳೆದುಕೊಳ್ಳಲು ಕಾರಣವಾಗಬಹುದು.

RELATED ARTICLES  ಜನ ಜಾಗ್ರತಿಗಾಗಿ ಕೈಗಾದಲ್ಲಿ ವಿಕಿರಣ ಸೋರಿಕೆಯ ಅಣಕು ‌ಕಾರ್ಯಾಚರಣೆ

ಈ ಸಂದೇಶ ಭಾರೀ ಸದ್ದು ಮಾಡುತ್ತಿದ್ದು ಇದು ಸೂರಜ್ ನಾಯ್ಕ ಜೊತೆಗೆ ಅಪಾರ ಬೆಂಬಲಿಗರಿರುವುದನ್ನು ಬಿತ್ತರಿಸಿದೆ ಎನ್ನಲಾಗಿದೆ.