ಹಳಿಯಾಳ:- ಹಳಿಯಾಳ ಬ್ಲಾಕ್ ಕಾಂಗ್ರೇಸ್ ಹಾಗೂ ಅಕ್ರಮ-ಸಕ್ರಮ ಸಮೀತಿ ಅಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಪರಮಾಪ್ತ ಸುಭಾಷ ಕೊರ್ವೆಕರ ಅವರ ಹಾಗೂ ಸಂಬಂಧಿಕರ ಮನೆ ಮೆಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.

ಬುಧವಾರ ಸಾಯಂಕಾಲ ಹಳಿಯಾಳ ಪಟ್ಟಣದ ಯಲ್ಲಾಪುರ ನಾಕಾ ಬಳಿ ಸಕ್ಕರೆ ಕಾರ್ಖಾನೆ ತೆರಳುವ ರಸ್ತೆ ಬಳಿ ಇರುವ ಸುಭಾಷ ಕೊರ್ವೆಕರ ನಿವಾಸ ಅವರ ಮಾವ ಗುತ್ತೀಗೆದಾರ ನಾರಾಯಣ ದೇಸೂರಕರ ಅವರ ಶೇಖನಕಟ್ಟಾ ಗ್ರಾಮದ ಮನೆ ಹಾಗೂ ಸುಭಾಷ ಅವರ ಸಹೋದರ ತಾಲೂಕಿನ ಸಂಕನಕೊಪ್ಪ ಗ್ರಾಮದಲ್ಲಿರುವ ದೇವೆಂದ್ರ ಮಹಾಬಳೇಶ್ವರ ಕೊರ್ವೆಕರ ಮನೆ ಸೇರಿ 3 ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಲಾಗಿದೆ. 5ರಿಂದ 6ಜನರಿದ್ದ ಐಟಿ ಅಧಿಕಾರಿಗಳ 3 ತಂಡ ಕೊರ್ವೆಕರ ಮನೆಗಳ ಮೇಲೆ ಹಠಾತ್ ದಾಳಿ ನಡೆಸಿ ಶಾಕ್ ನೀಡಿದೆ. ಸಾಯಂಕಾಲ 4 ಗಂಟೆಗೆ ಮನೆ ಪ್ರವೇಶಿಸಿದ ತಂಡವು ತಡರಾತ್ರಿಯವರೆಗೆ ಮನೆಯಲ್ಲಿರುವ ಎಲ್ಲ ಸಂಪೂರ್ಣ ದಾಖಲಾತಿಗಳನ್ನು ಪರಿಶೀಲಿಸಿದೆ.

RELATED ARTICLES  ಭಾರತದಲ್ಲಿ ಅಭಿನಂದನ್ ರಂತಹ ಸಾವಿರಾರು ವೀರರಿದ್ದಾರೆ ಅವರೆಲ್ಲರೂ ನಮಗೆ ಆದರ್ಶಪ್ರಾಯರು- ಉಮೇಶ ಮುಂಡಳ್ಳಿ

ಐಟಿ ದಾಳಿ ನಡೆದಿದ್ದು ನೀಜ ನಾವು ಯಾವ ತಪ್ಪು ಮಾಡಿಲ್ಲ ಅನ್ಯ, ಅಕ್ರಮ ಮಾರ್ಗಗಳಿಂದ ಹಣ ಸಂಪಾದಿಸಿಲ್ಲ ಹಾಗೂ ಅಕ್ರಮ ಆಸ್ತಿ ಗಳಿಸಿಲ್ಲ ಹೀಗಾಗಿ ದಾಳಿ ನಡೆಸಿದ ಅಧಿಕಾರಿಗಳಿಗೆ 3 ಮನೆಯಲ್ಲಿ ಏನು ದೊರೆತಿಲ್ಲ ಇರುವ ಕಾಗದ ಪತ್ರಗಳು, ದಾಖಲಾತಿಗಳು ಕಾನೂನು ರೀತಿ ಇದ್ದು ಕೆಲವು ಚೆಕ್ ವ್ಯವಹಾರಗಳು ಸರಿಯಾಗಿಲ್ಲದ ಕಾರಣ ಅವುಗಳನ್ನು ಸರಿ ಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಿ ಅಧಿಕಾರಿಗಳು ತೆರಳಿದ್ದಾರೆಂದು ಸ್ವತಃ ಸುಭಾಷ ಕೊರ್ವೆಕರ ಮಾಧ್ಯಮಕ್ಕೆ ತಿಳಿಸಿದ್ದು ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಒಳ್ಳೆಯದಾಯಿತು ಕೆಲವು ಮಾಹಿತಿಗಳು ನಮಗೂ ದೊರೆತು ನಾವು ಎಚ್ಚರಿಕೆ ವಹಿಸಿಕೊಳ್ಳಲು ಅನುವಾಯಿತು ಎಂದಿದ್ದಾರೆ.

RELATED ARTICLES  ಬೈಕ್ ಎಗರಿಸಿ ಮಾರುತ್ತಿದ್ದ ಚೋರರು ಅಂದರ್: ಕಳ್ಳರನ್ನು ಬಂಧಿಸಿದ ಪೋಲೀಸರು.