ಸೌಂದರ್ಯದ ದೃಷ್ಟಿಯಿಂದ ಮನುಷ್ಯನಿಗೂ ತಲೆ ಕೂದಲು ಅತಿ ಮುಖ್ಯ. ಆದರೆ ಪ್ರತಿಯೊಬ್ಬರಿಗೂ ಕೂದಲಿನ ಸಮಸ್ಯೆಯದ್ದೇ ಚಿಂತೆ. ಇದಕ್ಕಾಗಿ ಚಿಕಿತ್ಸೆಯ ಮತ್ತು ಮನೆಮದ್ದಿನ ಮೊರೆ ಹೋಗುವುದು ಸಾಮಾನ್ಯ. ಇಂತಹ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಇಲ್ಲಿದೆ ಕೆಲವೊಂದು ಸಲಹೆಗಳು.
* ಕೂದಲಿನ ಬುಡಕ್ಕೆ ಮೊಸರನ್ನು ಲೇಪಿಸಿ. ಸುಮಾರು ಅರ್ಧ ಗಂಟೆಯ ಬಳಿಕ ತೊಳೆದುಕೊಳ್ಳಿ. ಇದು ನೈಸರ್ಗಿಕ ಕಂಡೀಷನರ್ ರೀತಿಯಲ್ಲಿ ಕಾರ್ಯನಿರ್ವಹಿಸಿ ಕೂದಲನ್ನು ಪೋಷಿಸುತ್ತದೆ.
* ಕೇಶ ಸೌಂದರ್ಯಯನ್ನು ಹೆಚ್ಚಿಸುವಲ್ಲಿ ಮೊಟ್ಟೆಯ ಪಾತ್ರ ಪ್ರಮುಖವಾದದ್ದು. ಶುದ್ಧ ಹಾಲಿನಲ್ಲಿ ಮೊಟ್ಟೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಇದನ್ನು ಶ್ಯಾಂಪು ರೀತಿಯಲ್ಲಿ ಕೇಶರಾಶಿಗೆ ಲೇಪಿಸಿಕೊಳ್ಳಿ. ಒಂದು ಗಂಟೆಯ ಬಳಿಕ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುವುದಲ್ಲದೆ ಹೊಳೆಪಿನಿಂದ ಕೂಡಿರುತ್ತದೆ.
* ಹಣ್ಣಾಗಿರುವ ಬಾಳೆಹಣ್ಣನ್ನು ಎರಡು ಚಮಚ ನಿಂಬೆ ರಸದೊಂದಿಗೆ ಮಿಶ್ರಣ ಮಾಡ