ಲಂಡನ್: ಟಿವಿ ವೀಕ್ಷಿಸುತ್ತಿರುವಾಗ ನೀವು ನಿದ್ರೆಗೆ ಜಾರುವುದು, ನೆಲದಿಂದ ಒಂದು ಪತ್ರಿಕೆಯೊಂದನ್ನು ತೆಗೆದುಕೊಳ್ಳಲು ಬಾಗುತ್ತಿರುವಾಗ ನರಳುವುದು, ಜನರ ಹೆಸರನ್ನು ಆಗಾಗ ಮರೆತುಬಿಡುವುದು ಇತ್ಯಾದಿ ಲಕ್ಷಣಗಳು ನಿಮ್ಮಲ್ಲಿ ಕಂಡುಬರುತ್ತಿದ್ದರೆ ನಿಮಗೆ ವಯಸ್ಸಾಗುತ್ತಿದೆ ಎಂದೇ ಅರ್ಥ.

ಸಂಶೋಧನೆಯೊಂದರ ಪ್ರಕಾರ, ಶೈಲಿಯ ಬದಲಿಗೆ ಸೌಕರ್ಯವನ್ನು ಬಯಸುವುದು ಮತ್ತು ಆಧುನಿಕ ತಂತ್ರಜ್ಞಾನವನ್ನು ಕಲಿಯಲು ಕಷ್ಟವಾಗುವುದು ಕೂಡ ನಿಮಗೆ ವಯಸ್ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಫ್ಯೂಚರ್ ಯು ನಡೆಸಿರುವ ಸಂಶೋಧನೆ ಪ್ರಕಾರ, ದೇಹದ ಸಂದಿಗಳಲ್ಲಿನ ನೋವುಗಳು ಮತ್ತು ಕಾಲುಗಳಲ್ಲಿ ನರಬಿಗಿತ ನೀವು ವಯಸ್ಸಾಗುತ್ತಿದ್ದೀರಿ ಎಂಬುದನ್ನು ತೋರಿಸುವ ಪ್ರಮುಖ ಲಕ್ಷಣಗಳಾಗಿವೆ ಎಂದು ಜನರು ಭಾವಿಸುತ್ತಾರೆ.

RELATED ARTICLES  ಸ್ವಾತಂತ್ರ್ಯೋತ್ಸವವು ಭಾರತದ ಭಾಗ್ಯೋದಯದ ಶುಭದಿನ: ಮಾನಾಸುತ ಶಂಭು ಹೆಗಡೆ.

ಫ್ಯೂಚರ್ ಯ ವಕ್ತಾರರು ಹೇಳುವ ಪ್ರಕಾರ, ಮಂಡಿನೋವು ಸಾಮಾನ್ಯವಾಗಿ ದೇಹದ ಅಂಗಾಂಗಗಳಲ್ಲಿ ಹೆಚ್ಚು ನೋವು ಕೊಡುವ ಅಂಗ. ಹೀಗಾಗಿ ನಿಮ್ಮ ವಯಸ್ಸಿಗೆ ಹೊರತುಪಡಿಸಿ ನಿಮ್ಮ ಕಾಳಜಿಯನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ ಎನ್ನುತ್ತಾರೆ.

ಸುಮಾರು ಶೇಕಡಾ 47ರಷ್ಟು ಜನರು ವಯಸ್ಸಾದ ಮೇಲೆ ನೆನಪುಶಕ್ತಿ ಕಳೆದುಕೊಳ್ಳುವ ಬಗ್ಗೆ ಆತಂಕಕ್ಕೀಡಾಗುತ್ತಾರೆ. ಇನ್ನು ಶೇಕಡಾ 29ರಷ್ಟು ಮಂದಿ ತಮ್ಮ ಶರೀರದ ದೃಢತೆ ಮೇಲೆ ಇಳಿವಯಸ್ಸಿನ ಪರಿಣಾಮದ ಬಗ್ಗೆ ಕಾಳಜಿ ಹೊಂದಿರುತ್ತಾರೆ, ಇನ್ನು ಐವರಲ್ಲಿ ಒಬ್ಬರು ತನ್ನ ನೋಟ ಮತ್ತು ಇಳಿವಯಸ್ಸಿನಲ್ಲಿ ದೇಹದ ಸುಕ್ಕಿನ ಬಗ್ಗೆ ಆತಂಕ ಹೊಂದಿರುತ್ತಾರೆ.
ತಮ್ಮ ಡಯಟ್, ತಿನ್ನುವ ಆಹಾರ ಬದಲಾಗಬೇಕೆಂದು ಲಕ್ಷಾಂತರ ಮಂದಿ ಭಾವಿಸುತ್ತಾರೆ. ಕೆಲವು ಸಮಯಗಳು ಕಳೆದ ನಂತರ ಒಂದು ವಯಸ್ಸಿಗೆ ಬಂದ ಮೇಲೆ ಜನರು ಆರೋಗ್ಯಯುತ ಆಹಾರ ಸೇವಿಸಲು ಬಯಸುತ್ತಾರೆ. ಅವುಗಳಲ್ಲಿ ಹಸಿರು ತರಕಾರಿಗಳು ಕೂಡ ಸೇರಬಹುದು ಎನ್ನುತ್ತಾರೆ.

RELATED ARTICLES  ಸದ್ಯದಲ್ಲೇ ಭಾರತ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಿಯಾ ಮೋಟರ್ಸ್