ಶಿರಸಿ :ತಾಲೂಕಿನ ಸಾಲ್ಕಣಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನ ೨೦ ಕ್ಕು ಹೆಚ್ಚು ಕಾರ್ಯಕರ್ತರನ್ನು ಡಾ. ಶಶಿಭೂಷಣ ಹೆಗಡೆಯವರು ಪಕ್ಷದ ಶಾಲನ್ನು ಹೊದೆಸಿ ಜೆಡಿಎಸ್ ಗೆ ಬರಮಾಡಿಕೊಂಡರು, ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಮಕೃಷ್ಣ ಹೆಗಡೆಯವರ ಆಡಳಿತ ವೈಖರಿ ನಮಗೆಲ್ಲ ಒಂದು ಆದರ್ಶ ಅವರು ಹಾಕಿಕೊಟ್ಟ ರಾಜಕೀಯ ಮಾರ್ಗದಲ್ಲಿ ನಡೆದರೆ ಜನಮೆಚ್ಚುವ ಆಡಳಿತವನ್ನು ನೀಡಬಹುದು, ಜನತೆಯು ಆಸೆ ಆಮಿಷ ಗಳಿಗೆ ಒಳಗಾಗದೆ ಚುನಾವಣೆಯಲ್ಲಿ ‌ಮತಚಲಾಯುಸುವಂತೆ‌ ನೋಡಿಕೊಳ್ಳುವ ಜವಾಬ್ದಾರಿ ಕಾರ್ಯಕರ್ತರು ಮೇಲಿದೆ ಎಂದರು.

RELATED ARTICLES  ಕುಮಟಾದ ಮಿರ್ಜಾನ್ ಸಮೀಪ ಬ್ರಹತ್ ಕಾಳಿಂಗ ಸರ್ಪ ಪ್ರತ್ಯಕ್ಷ.

ಈಗಾಗಲೇ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ,
ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ , ಹಾಗೂ ರೈತರ ಸಾಲಮನ್ನಾ, ವಿಧವೆಯರಿಗೆ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ನಮ್ಮ ಪಕ್ಷದ ಸರಕಾರವು ಬಂದ‌‌ ನಂತರ ಕೊಡಮಾಡಿದ ಗೌರವ ಧನದ ಬಗ್ಗೆ ಪ್ರತಿಯೊಬ್ಬರಿಗೂ ತಲುಪುವಂತೆ ಪ್ರಚಾರ‌ ನಡೆಸಬೇಕು ‌ಎಂದರು,
ಇದಕ್ಕೂ ಮೊದಲು ಅವರು ಸಾಲ್ಕಣಿ ಸಮೀಪದ ಅಂಗಡಿಗಳಿಗೆ, ಕಡಬಾಳ ಹಾಲಿನ ಡೈರಿ ಹಾಗು ಪ್ರಮುಖರ ಮನೆಗೆ ಹೋಗಿ ಪ್ರಚಾರ ನಡೆಸಿದರು, ಬೆಳಿಗ್ಗೆ ಇಂದ ರಾತ್ರಿ ವರೆಗೆ ನಡೆದ ಹಳ್ಳಿ ಭೇಟಿಯ ಸಂಧರ್ಭದಲ್ಲಿ ಶಿರಸಗಾಂವ್, ಧೋರಣಗೆರಿ, ಮುಷ್ಕಿ, ಶಿರಗುಣಿ,ಕಕ್ಕಳ್ಲಿ, ಮಂಡೆಮನೆ, ಹಾಗೂ ಕೆಳಾಸೆ, ಗೋಣ್ಸರ, ಶೀಗೆಹಳ್ಳಿ, ಕಡಬಾಳ, ಕೊಟ್ಟಿಗೆಹಳ್ಳಿ ಕುದರಗೋಡು ಹಳ್ಳಿಗಳಿಗೆ ಭೇಟಿ ನೀಡಿದರು,
ಈ ಸಂದರ್ಭದಲ್ಲಿ ಎನ್, ಎಸ್ ಭಟ್ ಮಣದೂರು, ಪುರಷೋತ್ತಮ ಹೆಗಡೆ, ಪ್ರಮೋದ್ ಹೆಗಡೆ, ಸುಧೀಂದ್ರ ಹೆಗಡೆ, ಗುರು ಭಟ್ ಮುಷ್ಕಿ, ದಿವಾಕರ ಗೌಡ, ಕಿರಣ ನಾಯ್ಕ, ಶಂಕರ್ ಭಟ್ ಬಾರಗದ್ದೆ, ಮಂಜುನಾಥ ಭಟ್ ಧೋರಣಗಿರಿ, ರಾಜು ಭಟ್ಟ ಮಣದೂರು, ನರಸಿಂಹ ಅಬ್ರಿ, ಅವರುಗಳು ಜೊತೆಯಲ್ಲಿ ಇದ್ದರು.

RELATED ARTICLES  ಬೇಕು ಬೇಡಗಳ ನಡುವೆ ಟಿಪ್ಪು ಜಯಂತಿ ಆಚರಣೆಗೆ ತಯಾರು.