ಹೊನ್ನಾವರ : ಬಿಜೆಪಿ ಟಿಕೆಟ್ ಪಡೆದ ದಿನಕರ ಶೆಟ್ಟಿಯವರ ಪ್ರಚಾರದ ಭರಾಟೆ ಜೋರಾಗಿದೆ. ದಿನದಿಂದ ದಿನಕ್ಕೆ‌ಅವರ ಬೆಂಬಲಿಗರ ಸಂಖ್ಯೆಯೂ ಏರುತ್ತಿದೆ. ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಅವರ ಪ್ರಚಾರದ ಭರಾಟಿಯೂ ಜೋರಾಗಿಯೇ ಸಾಗಿದೆ.

ಅವರ ಜೊತೆಗೆ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅವರಿಗೆ ಬೆಂಬಲ ನೀಡುತ್ತಿರುವವರು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಕಲಾ ಶಾಸ್ರಿ ಮತ್ತು ಅವರ ಪತಿ ಉದ್ಯಮಿ ಸುಬ್ರಹ್ಮಣ್ಯ ಶಾಸ್ತ್ರಿ. ದಿನಕರ ಶೆಟ್ಟಿ ಟಿಕೆಟ್ ಪಡೆಯುವಾಗ ಸಂದರ್ಭದಿಂದಲೇ ಅವರ ಜೊತೆಗಿದ್ದು ಬೆಂಬಲ‌ ಸೂಚಿಸಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ದಿನಕರ ಶೆಟ್ಟಿಯವರು ಬಿ.ಫಾರಂ ಪಡೆಯುವಾಗಲೂ ಜೊತೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

RELATED ARTICLES  ವಾಜಪೇಯಿಯವರ ಹುಟ್ಟುಹಬ್ಬದ ನಿಮಿತ್ತ ಭಟ್ಕಳ ತಾಲೂಕಾ ಬಿಜೆಪಿ ಘಟಕದ ವತಿಯಿಂದ ಹಣ್ಣು ಹಂಪಲು ವಿತರಣೆ

ಈಗ ತಮ್ಮ ಕ್ಷೇತ್ರದಲ್ಲಿ ದಿನಕರ ಶೆಟ್ಟಿಯವರ ಪರವಾಗಿ ಶ್ರೀಕಲಾ ಶಾಸ್ತ್ರಿಯವರು ಪ್ರಚಾರ ಪ್ರಾರಂಭಿಸಿದ್ದಾರೆ. ಉಷಾ ದಿನಕರ ಶೆಟ್ಟಿಯವರ ಜೊತೆ ಮುಗ್ವಾ ಹಾಗೂ ಹೊಸಾಕುಳಿ ಭಾಗದಲ್ಲಿ ಪ್ರಚಾರ ಕಾರ್ಯದಲ್ಲಿ ಇವರು ತೊಡಗಿಸಿಕೊಂಡಿದ್ದಾರೆ.
ಬಿಜೆಪಿ ಪಕ್ಷದ ಜನಪರ ಯೋಜನೆ ಹಾಗೂ ಮೋದಿಯವರ ಆಡಳಿತದ ಬಗ್ಗೆ ಜನ ಮಾನಸಕ್ಕೆ ವಿಷಯ ತಲುಪಿಸುವ ಕಾರ್ಯದಲ್ಲಿ ಅವರು ನಿರತರಾಗಿದ್ದಾರೆ ಎನ್ನಲಾಗಿದೆ.

RELATED ARTICLES  ಕುಮಟಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ.

ಬಿಜೆಪಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ಜನತೆಯ ಜೊತೆ ಸದಾ ಸಾಮಾಜಿಕ‌ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶ್ರೀಕಲಾ ಶಾಸ್ತ್ರಿಯವರು ದಿನಕರ ಶೆಟ್ಟಿಯವರ ಪ್ರಚಾರ ಕಾರ್ಯದಲ್ಲಿ ತೊಡಗಿ ಬಿಜೆಪಿಯ ಬಲ ಹೆಚ್ಚಿಸಲಿದ್ದಾರೆ ಎಂಬುದಾಗಿ ಬಿಜೆಪಿ ವಲಯದಲ್ಲಿ ಹೇಳಿಕೆಗಳು ಬರುತ್ತಿವೆ.