ಕಾರವಾರ : ಕಳೆದ ೫ ವರ್ಷಗಳಿಂದ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಫಿ ಸಾದುದ್ದಿನ್ ಅವರು‌ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರಿಗೆ ಇಂದು ವಾರ್ತಾಇಲಾಖೆಯಲ್ಲಿ ಇಲಾಖಾ ಸಿಬ್ಬಂದಿಗಳು ಹಾಗೂ ಕಲಾವಿದರಿಂದ ಬಿಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕ.ಸಾ.ಪ ತಾಲುಕಾಧ್ಯಕ್ಷ ನಾಗರಾಜ ಹರಪನಹಳ್ಳಿ ಮಾತನಾಡಿ “ಕಳೆದ ಐದು ವರ್ಷದ ಸುದೀರ್ಘ ಅವಧಿಯಲ್ಲಿ ಶಫಿ ಅವರು ಅಧಿಕಾರಿಗಳು ಹಾಗೂ ಪತ್ರಕರ್ತರ ಕೊಂಡಿಯಾಗಿ ಅತ್ಯತ್ತಮ ಕಾರ್ಯನಿವಹಿಸಿದ್ದಾರೆ ಎಂದರು”.

RELATED ARTICLES  ಹೆಬಳೆ ಗೊರಟೆಕೇರಿ ಶಾಲೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ:

ಇಲಾಖಾ ಸಿಬ್ಬಂದಿ ಕಸ್ತೂರಿ ಪಾಟಿಲ್ ಮಾತನಾಡಿ
” ಶಿಫಿ ಅವರು ಒಬ್ಬ ಅಧಿಕಾರಿಯಾಗಿ ದರ್ಪ ತೋರದೆ ಗೌರವದಿಂದಲೇ ಸಿಬ್ಬಂದಿಗಳಿಂದ ಕೆಲಸಮಾಡಿಸುತಿದ್ದರು. ಅವರು ವರ್ಗವಾಗಿ ಹೋಗುತ್ತಿರುವದು ಬೇಸರದ ಸಂಗತಿಯಾದರೂ ಅನಿವಾರ್ಯ, ಆದ್ದರಿಂದ ಅವರು ಮುಂದಿನ ಜೀವನ ಸುಖಕರ ವಾಗಿರಲಿ” ಎಂದು ಹಾರೈಸಿದರು.

RELATED ARTICLES  ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹ.

ಈ‌ ಸಂದರ್ಭದಲ್ಲಿ ಪತ್ರಕರ್ತರಾದ ಕಡತೋಕಾ ಮಂಜು, ಉದಯ್ ಬರ್ಗಿ, ದರ್ಶನ್ ನಾಯ್ಕ್ , ದೀಪಕ್ ಗೋಕರ್ಣ , ಗಿರೀಶ್ ನಾಯ್ಕ್‌‌ ಹಾಗೂ ವಾರ್ತಾಇಲಾಖೆ ಸಿಬ್ಬಂದಿಗಳು, ಮತ್ತು ಕಲಾವಿದರು ಉಪಸ್ಥಿತರಿದ್ದರು.