ಕಾರವಾರ:ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪ್ರತಗಳನು ಸಲ್ಲಿಸಿದ ಅಭ್ಯರ್ಥಿಗಳಿಗೆ ನಾಮಪತ್ರಗಳನ್ನು ಹಿಂದೆ ಪಡೆಯಲು ಏಪ್ರೀಲ್ 27 ಶುಕ್ರವಾರ ಕೊನೆಯ ದಿನವಾಗಿತ್ತು. ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ 10 ಜನ ಅಭ್ಯರ್ಥಿಗಳು ಶುಕ್ರವಾರ ತಮ್ಮ ಉಮೇದುವಾರಿಕೆಯನ್ನು ಹಿಂದೆ ಪಡೆದಿದ್ದು 46 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಕೊನೆಯ ದಿನದಂದು ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ನಾರಾಯಣ ಗಣಪತಿ ನಾಯ್ಕ ಮತ್ತು ರಾಜು ತಾಂಡೇಲ ಸೇರಿ ಒಟ್ಟು 2 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂದೆ ಪಡೆದಿದ್ದಾರೆ. ಭಟ್ಕಳ ಕ್ಷೇತ್ರದಲ್ಲಿ ಜಯಂತ ನಾಯ್ಕ, ಸಯ್ಯದ್ ಮಹಮ್ಮದ ಅಮಜದ, ಮತ್ತು ಮಹಮ್ಮದ ಝಬರೂದ ಖತೀಬ ಸೇರಿ 3 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದೆ ಪಡೆದಿದ್ದಾರೆ. ಶಿರಸಿ ಕ್ಷೇತ್ರದಲ್ಲಿ ಫಯಾಜ್ ಮದರ ಸಾಬ ಚವಟಿ ಮತ್ತು ಕುಬೇರ ಬಿ.ಜಿ ಸೇರಿ 2 ಜನ ತಮ್ಮ ನಾಮಪತ್ರ ಹಿಂದೆ ಪಡೆದಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಲಕ್ಷಣ ಬಿನ್ ಬಿಮಣ್ಣ ಬನ್ಸೋಡೆ, ಗಡವಾಲೆ ಮಹಮ್ಮದ ಉಮರಕಾಶಿಮ ಸಾಬ ಹಾಗೂ ಸಂತೋಷ ಮಂಜುನಾಥ ರಾಯ್ಕರ ಸೇರಿ 3 ಜನ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಹಳಿಯಾಳ ಮತ್ತು ಕಾರವಾರ ಕ್ಷೇತ್ರದಲ್ಲಿ ಕೊನೆಯ ದಿನದಂದು ಯಾವುದೇ ಅಭ್ಯರ್ಥಿಯು ನಾಮಪತ್ರ ಹಿಂದಕ್ಕೆ ಪಡೆದಿರುವದಿಲ್ಲ.
ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಆರ್.ವಿ ದೇಶಪಾಂಡೆ, ಯಮುನಾ ಗಾಂವ್ಕರ್, ಕೆ.ಆರ್.ರಮೇಶ, ಸುನೀಲ್ ಹೆಗಡೆ, ಬಡೆಸಾಬ ಹುಸೇನಸಾಬ ಕಕ್ಕೇರಿ, ಜಹಾಂಗೀರ ಬಾಬಾ ಖಾನ್, ಶಂಕರ ಬಸವಂತ ಫಾಕರಿ, ಇಲಿಯಾಸ್ ಕಾಟಿ, ಟಿಆರ್.ಚಂದ್ರಶೇಖರ ಸೇರಿ ಒಟ್ಟು 9 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಕಾರವಾರ ಕ್ಷೇತ್ರದಲ್ಲಿ ಆನಂದ ಅಸ್ನೋಟಿಕರ, ಮಾದವ ಬಾಬು ನಾಯಕ, ರೂಪಾಲಿ ಸಂತೋಷ ನಾಯ್ಕ, ಸತೀಶ ಕೃಷ್ಣ ಸೈಲ್, ಕುಂದಾಬಾಯಿ ಪುರಳೇಕರ, ಕಿಶೋರ ಸಾವಂತ ಸೇರಿ 6 ಜನ, ಕುಮಟಾ ಕ್ಷೇತ್ರದಲ್ಲಿ ದಿನಕರ ಕೇಶವ ಶೆಟ್ಟಿ, ಪ್ರದೀಪ ದಯಾನಂದ ನಾಯಕ, ಶಾರದಾ ಮೋಹನ ಶೆಟ್ಟಿ, ನಾಗರಾಜ ಎನ್ ನಾಯ್ಕ, ನಾಗರಾಜ ಶ್ರೀದರ ಶೇಟ್, ಮೋಹನ ಬಾಗ್ಲು ಪಟಗಾರ, ಕೃಷ್ಣ ಜಟ್ಟಿ ಗೌಡ, ಗಣೇಶ ಅಮ್ಯೂಸ್ ಗೌಡ, ಪ್ರಶಾಂತ ಶಂಕರ ನಾಯ್ಕ, ಯಶೋದರ ಜಿ.ನಾಯ್ಕ, ಸುಮನಾ ಹೆಗಡೆ, ಸೂರಜ ನಾಯ್ಕ ಸೋನಿ ಸೇರಿ 12 ಜನ, ಭಟ್ಕಳ ಕ್ಷೇತ್ರದಲ್ಲಿ ಮಂಕಾಳ ವೈದ್ಯ, ಸುನೀಲ್ ನಾಯ್ಕ, ಗಪೂರ ಸಾಬ, ಅಬ್ದೂಲ್ ರಹಿಮಾನ, ಪ್ರಕಾಶ ಪಿಂಟೋ, ರಾಜೇಶ ನಾಯ್ಕ ಸೇರಿ ಒಟ್ಟು 6 ಜನ, ಶಿರಸಿ ಕ್ಷೇತ್ರದಲ್ಲಿ ಬೀಮಣ್ಣ ಟಿ.ನಾಯ್ಕ, ಶಶಿಭೂಷಣ ಹೆಗಡೆ, ವಿಶ್ವೇಶ್ವರ ಹೆಗಡೆ, ಅಣ್ಣಪ್ಪ ಶಿವರಾಮ ಕಡಕೇರಿ, ಅಬ್ದುಲ್ ರಜಾಕ ಶೆಖ, ರಮಾನಂದ ನಾಯ್ಕ ಸೇರಿ ಒಟ್ಟು 6 ಜನ, ಯಲ್ಲಾಪುರ ಕ್ಷೇತ್ರದಲ್ಲಿ ಅರಬೈಲ್ ಶಿವರಾಮ ಹೆಬ್ಬಾರ, ವೀರಭದ್ರಗೌಡ ಶಿವನಗೌಡ ಪಾಟೀಲ ಅಂದಲಗಿ, ಎ ರವೀಂದ್ರ ನಾಯ್ಕ, ನೀಲಪ್ಪ ಲಮಾಣಿ, ಸಚೀನ ಚಿಂತಾಮಣಿ ನಾಯ್ಕ, ನಾಗೇಶ ಬೋವಿವಡ್ಡರ ಮತ್ತು ಮಹಬೂಬ ಅಲಿ ಜಮಖಂಡಿ ಸೇರಿ 7 ಜನ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಸ್ಪರ್ಧಿಸುತ್ತಿದ್ದಾರೆ.