ಕುಮಟಾ :ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನಿವಾಸಿ ಸುದರ್ಶನ್ ಪಿ.ಭಟ್ , ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೪೩೪ನೇ ರ‍್ಯಾಂಕ್ ಗಳಿಸಿದ್ದಾರೆ. ಎಂಜಿನಿಯರಿಂಗ್ ಕ್ಷೇತ್ರದ ಪದವೀಧರರಾಗಿರುವ ಸುದರ್ಶನ್ ಟಿ.ಭಟ್, ೧೦ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಓದಿದವರಾಗಿದ್ದಾರೆ.

ಅಮೆರಿಕ ಮೂಲದ ಅಕಮೈ ಟೆಕ್ನಾಲಜೀಸ್‌ನಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ೪ ವರ್ಷಗಳಿಂದ ಬೆಂಗಳೂರಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಕ್ಯಾಂಪಸ್ ಆಯ್ಕೆಯಾಗಿದ್ದರು.

‘ನನ್ನ ತಂದೆ ಪ್ರೊ. ಟಿ. ಜಿ. ಭಟ್ ಹಾಸಣಗಿ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕತೆ, ಕವನ ಬರಹಗಳಲ್ಲಿ ತೊಡಗಿಸಿಕೊಂಡವರು. ಸಮಾಜದ ಬಗ್ಗೆ ಮನೆಯಲ್ಲಿ ನಡೆಯುವ ಮಾತುಕತೆಗಳು ನನಗೆ ಪ್ರೇರೇಪಣೆ ಆಗಿದ್ದವು. ನೆಮ್ಮದಿಯಿಂದ ಬಾಳುವಂತಹ ಕೆಲಸ ದೊರೆತರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ನನ್ನ ಅಭಿಲಾಷೆಯಾಗಿತ್ತು.ನನ್ನ ತಾಯಿ ಮುಕ್ತಾ ಟಿ.ಭಟ್ ನನ್ನ ಕನಸಿಗೆ ನೀರೆರೆದವರು’ ಎಂದು ಸುದರ್ಶನ ಭಟ್ ಹೇಳುತ್ತಾರೆ.

RELATED ARTICLES  ನಾಗರಾಜ ನಾಯಕ ತೊರ್ಕೆ ನೇತ್ರತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ವೃಕ್ಷಾರೋಪಣ

‘ತಂತ್ರಜ್ಞಾನದಲ್ಲಿ ನನಗಿರುವ ಅನುಭವ ಹಾಗೂ ಕೌಶಲವನ್ನು ಆಡಳಿತ ವ್ಯವಸ್ಥೆಯಲ್ಲಿ ಉಪಯೋಗಿಸಿ ಧನಾತ್ಮಕ ಬದಲಾವಣೆ ತರುವುದು ನನ್ನ ಗುರಿ’ ಎಂದು ಅವರು ಹೇಳುತ್ತಾರೆ. ಸುದರ್ಶನ್‌ಗೆ ೧೧ ಭಾಷೆ ಮತ್ತು ಲಿಪಿ ಗೊತ್ತಿದೆ. ಲಿಪಿ ಕಲಿಯುವುದು ಅವರ ಹವ್ಯಾಸಗಳಲ್ಲಿ ಒಂದು. ಹಿಂದುಸ್ಥಾನೀ ಗಾಯಕರಾಗಿಯೂ ಗುರುತಿಸಿಕೊಂಡವರು. ಯೋಗ ಪಟು ಕೂಡ ಹೌದು. ಯುಪಿಎಸ್‌ಸಿ ಫಸ್ಟ್ ಮೇನ್ ಪರೀಕ್ಷೆಯನ್ನು ಎರಡನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು