ಹೊನ್ನಾವರ: ಪಾಕಿಸ್ತಾನಿ ಹಿಂದೂಗಳ ಮತಾಂತರವನ್ನು ತಡೆಗಟ್ಟಲು ಪಾಕಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದಿರುವ ಹಿಂದೂಗಳಿಗೆ ಭಾರತದ ನಾಗರಿಕತ್ವವನ್ನು ನೀಡಿರಿ ! – ಹಿಂದೂಗಳ ಒಕ್ಕೊರಲಿನ ಬೇಡಿಕೆ
ಪಾಕಿಸ್ತಾನದ ಹಿಂದೂಗಳ ಮೇಲೆ ನಿರಂತರ ಅಪರಿಮಿತ ಅತ್ಯಾಚಾರವಾಗುತ್ತಿದೆ. ಬಲವಂತದಿಂದ ಮತಾಂತರ, ಹಿಂದೂಗಳ ಮೇಲೆ ಪ್ರಾಣಘಾತಕ ಆಕ್ರಮಣಗಳು, ಹಿಂದೂ ಹುಡುಗಿಯರನ್ನು ಅಪಹರಿಸಿ ಅವರೊಂದಿಗೆ ನಿಕಾಹ, ಹಿಂದೂ ಹುಡುಗಿಯರ-ಮಹಿಳೆಯರ ಮೇಲೆ ಬಲತ್ಕಾರ, ಹಿಂದೂಗಳ ಭೂಮಿಯನ್ನು ಕಬಳಿಸುವುದು, ಹಿಂದೂ ದೇವಸ್ಥಾನಗಳ ಧ್ವಂಸ ಮತ್ತು ಮೂರ್ತಿಗಳ ಭಂಜನ ಇತ್ಯಾದಿ ಅಲ್ಲಿನ ದಿನನಿತ್ಯದ ವಿಷಯಗಳಾಗಿವೆ. ಆದ್ದರಿಂದ ಪಾಕಿಸ್ತಾನದಲ್ಲಿ ಹಿಂದೂಗಳ ಜೀವನದಲ್ಲಿ ಅಸುರಕ್ಷಿತತೆ ನಿರ್ಮಾಣವಾಗಿದೆ. ಅದರ ಪರಿಣಾಮವೆಂದು ಪಾಕಿಸ್ತಾನದಿಂದ ದೊಡ್ಡ ಪ್ರಮಾಣದಲ್ಲಿ ಹಿಂದೂಗಳು ನಿರಾಶ್ರಿತರಾಗಿ ಭಾರತಕ್ಕೆ ಬರುತ್ತಿದ್ದಾರೆ; ಆದರೆ ನಮ್ಮ ಸರಕಾರಿ ಆಡಳಿತದವರು ಅವರನ್ನು ಹೊರದಬ್ಬುವ ಪ್ರಯತ್ನದಲ್ಲಿದ್ದಾರೆ. ಇತ್ತೀಚೆಗಷ್ಟೇ ಇಂತಹ ನಿರಾಶ್ರಿತರಿಗೆ ದೀರ್ಘಕಾಲದ ಪಾಸ್‍ಪೆÇೀರ್ಟ್ ನೀಡದ ಕಾರಣ ಪಾಕಿಸ್ತಾನಕ್ಕೆ ಹಿಂದಿರುಗಿದ 500 ಹಿಂದೂಗಳನ್ನು ಸಿಂಧ ಪ್ರಾಂತದ ಮಾತಲಿ ಜಿಲ್ಲೆಯಲ್ಲಿ ಬಲವಂತದಿಂದ ಮತಾಂತರಗೊಳಿಸಲಾಯಿತು. ಈ ಘಟನೆಯು ಅತ್ಯಂತ ದುರ್ದೈವದ ವಿಷಯವಾಗಿದೆ. ಒಂದೆಡೆ ಪಾಕಿಸ್ತಾನಿ, ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾ ಮುಸಲ್ಮಾನರು ಭಾರತದಲ್ಲಿ ಬಂದು ನೆಲೆಸಿರುವಾಗ ನಿರಾಶ್ರಿತ ಹಿಂದೂಗಳಿಗೆ ಮಾತ್ರ ಕಾನೂನಿನ ದೊಣ್ಣೆಯನ್ನು ಏಕೆ ತೋರಿಸಲಾಗುತ್ತಿದೆ ? ಆದ್ದರಿಂದ ಭಾರತ ಸರಕಾರ ನಿರಾಶ್ರಿತ ಹಿಂದೂಗಳಿಗೆ ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸೌಲಭ್ಯಗಳನ್ನು ಒದಗಿಸಬೇಕು, ಅವರಿಗೆ ಭಾರತದ ನಾಗರಿಕತ್ವವನ್ನು ಪಡೆದುಕೊಳ್ಳಲು ಸಹಾಯ ಮಾಡಬೇಕು, ನಿರಾಶ್ರಿತ ಹಿಂದೂಗಳಿಗೆ ಅವರ ಪಾಸ್‍ಪೆÇೀರ್ಟ್ ಮುಗಿದಾಗ ಅಥವಾ ಇತರ ಕಾರಣಗಳಿಂದ ಬಲವಂತದಿಂದ ಪಾಕಿಸ್ತಾನಕ್ಕೆ ಕಳುಹಿಸಬಾರದು, ಎಂದು ಹಿಂದೂ ಜನಜಾಗೃತಿ ಸಮಿತಿಯ ಸೌ.ವಾಸತಿ ಮುರ್ಡೇಶ್ವರ ಇವರು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ವಿಷಯದಲ್ಲಿ ಸಂಪೂರ್ಣ ಭಾರತದಲ್ಲಿ ಕಾನೂನು ಮಾರ್ಗದಲ್ಲಿ ನಡೆಸಿದ “ರಾಷ್ಟ್ರೀಯ ಹಿಂದೂ ಆಂದೋಲನ”ದಲ್ಲಿ ಅವರು ಮಾತನಾಡುತಿದ್ದರು. ಈ ಮನವಿಯನ್ನು ಹೊನ್ನಾವರದಲ್ಲಿ ತಹಶೀಲದಾರರಿಗೆ ನೀಡಲಾಯಿತು.
ಈ ಆಂದೋಲನದಲ್ಲಿ ಇತ್ತೀಚೆಗೆ ಕರ್ನಾಟಕದ ಕಾಂಗ್ರೆಸ್ ಸರಕಾರವು ರಾಜ್ಯದ ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನವನ್ನು ನೀಡುವ ನಿರ್ಣಯ ತೆಗೆದುಕೊಂಡಿರುವುದನ್ನು ಸಹ ಪ್ರತಿಭಟಿಸಲಾಯಿತು. ವಾಸ್ತವಿಕತೆಯಲ್ಲಿ ಶೈವ ಮತ್ತು ವೈಷ್ಣವ ಹಿಂದೂ ಧರ್ಮದ ಮೂಲಭೂತ ಅಂಗಗಳಾಗಿವೆ ಹಾಗೂ ಶೈವ ಉಪಾಸಕರಾದ ಲಿಂಗಾಯತ ಸಮಾಜವು ಹಿಂದೂ ಧರ್ಮದ ಒಂದು ಅಭಿನ್ನವಾದ ಭಾಗವಾಗಿದೆ. ಹೊಸ ಧರ್ಮಕ್ಕೆ ಮನ್ನಣೆ ನೀಡುವ ಅಧಿಕಾರ ಮೂಲತಃ ರಾಜಕಾರಣ ಗಳಿಗಿಲ್ಲ. ಒಬ್ಬನೇ ಭಗವಾನ ಶಿವನ ಉಪಾಸನೆಯ ಪದ್ಧತಿಯು ಎರಡು ಬೇರೆ ಬೇರೆ ಧರ್ಮಗಳಲ್ಲಿ ಸಮಾನವಾಗಿರಲು ಹೇಗೆ ಸಾಧ್ಯ ? ಒಂದು ಉಪಾಸ್ಯ ದೇವತೆ, ಒಂದು ಶ್ರದ್ಧಾಸ್ಥಾನ, ಒಂದು ಪೂಜಾವಿಧಿ, ಒಂದು ಪರಂಪರೆ ಇರುವಾಗ ಧರ್ಮ ಭಿನ್ನವಾಗಲು ಹೇಗೆ ಸಾಧ್ಯ ? ದೇವರು ಭಕ್ತರಲ್ಲಿ ಭೇದಭಾವವನ್ನು ಮಾಡುವುದಿಲ್ಲ, ಹೀಗಿರುವಾಗ ರಾಜಕಾರಣ ಗಳು ಒಂದೇ ದೇವತೆಯ ಇಬ್ಬರು ಭಕ್ತರಲ್ಲಿ ಧಾರ್ಮಿಕ ಭೇದಭಾವವನ್ನು ಏಕೆ ಮಾಡುತ್ತಿದ್ದಾರೆ ? ಎಂದು ಆಂದೋಲನದ ಮೂಲಕ ಪ್ರಶ್ನಿಸಲಾಗಿದೆ. ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂಗಳಲ್ಲಿ ಒಡಕ್ಕನ್ನುಂಟು ಮಾಡಲು ಅಧಿಕಾರಾರೂಢ ಕಾಂಗ್ರೆಸ್ ಪಕ್ಷ ಇಂತಹ ನೀಚತನದ ರಾಜಕಾರಣ ಮಾಡುತ್ತಿದೆ ಹಾಗೂ “ಒಡೆದು ಆಳು”ವ ಆಂಗ್ಲರ ನೀತಿಯನ್ನು ಉಪಯೋಗಿಸಿ ಹಿಂದೂ ಸಮಾಜದಲ್ಲಿ ಬಿರುಕನ್ನುಂಟು ಮಾಡುವ ಕಾರಸ್ಥಾನವನ್ನು ರಚಿಸುತ್ತಿದೆ, ಎಂದು ತೀಕ್ಷ್ಣ ಆರೋಪವನ್ನು ಮಾಡುತ್ತಾ “ಲಿಂಗಾಯತ” ಸಮಾಜಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನವನ್ನು ನೀಡುವುದಾಗಿ ತೆಗೆದುಕೊಂಡ ನಿರ್ಣಯವನ್ನು ತಕ್ಷಣ ರದ್ದುಪಡಿಸಬೇಕು, ಎಂದು ಇವರು ಬೇಡಿಕೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಸೌ. ಅಪರ್ಣಾ ಭಟ್, ಸೌ. ಪಾರ್ವತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.