ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮಾಡೆಲ್ ರೆಬೆಕಾ ಝೆನಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷತೆಯಿಂದಾಗಿ ಸ್ಯಾಬಿಸ್ ಎಂಬ ವಿಚಿತ್ರ ಕ್ರಿಮಿಗಳಿಂದ ಕಚ್ಚಲ್ಪಟ್ಟು ದಾರುಣವಾಗಿ ಸಾವಿಗೀಡಾದ ಘಟನೆ ಜಾರ್ಜಿಯಾದಿಂದ ವರದಿಯಾಗಿದೆ.

ಮರಣೋತ್ತರ ಪರೀಕ್ಷೆ ನಂತರ ಈ ಆತಂಕಕಾರಿ ಸುದ್ದಿ ಹೊರಬಿದ್ದಿದ್ದು, ವಿಷಪೂರಿತ ಸ್ಯಾಬಿಸ್ ಕ್ರಿಮಿಗಳ ಕಡಿತದಿಂದಾಗಿ ಝೆನಿ ಮೃತಪಟ್ಟಿರುವುದಾಗಿ ಖಚಿತವಾಗಿದೆ. ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ಝೆನಿಯನ್ನು ಅವರ ಮಗಳೇ 2010ರಲ್ಲಿ ಆಸ್ಪತ್ರಗೆ ದಾಖಲಿಸಿದ್ದಳು. ಆಸ್ಪತ್ರೆಯ ಈ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡಿರುವ ಝೆನಿ ಕುಟುಂಬ ಆಸ್ಪತ್ರೆ ವಿರುದ್ಧ ದೂರು ದಾಖಲಿಸಲು ಮುಂದಾಗಿದೆ.

RELATED ARTICLES  ಬಂದ್ ಆಗಲ್ಲ ಶಿರಸಿ ಕುಮಟಾ ರಸ್ತೆ : ಖಡಕ್ ವಾರ್ನ ನೀಡಿದ ಮಂಕಾಳ ವೈದ್ಯ.

ನಿರ್ಲಕ್ಷ್ಯದಿಂದ ಉಂಟಾಗಿರುವ ನರಮೇಧ
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ಹೇಳಿರುವಂತೆ ಅವರ ಜೀವನದಲ್ಲೇ ಇಂಥ ಒಂದು ದೇಹವನ್ನು ಅವರು ಪರೀಕ್ಷೆ ನಡೆಸಿಲ್ಲ. ಮೃತ ಪರೀಕ್ಷೆ ವೇಳೆ ಮಿಲಿಯನ್​ಗಟ್ಟಲೆ ಕ್ರಿಮಿಗಳು ಝೆನಿ ದೇಹ ಪ್ರವೇಶಿಸಿರುವುದು ಕಂಡುಬಂದಿದ್ದು, ಆಸ್ಪತ್ರೆ ನಿರ್ಲಕ್ಷ್ಯದಿಂದ ಉಂಟಾಗಿರುವ ಸಾವಿದು ಎಂದು ವೈದ್ಯರು ದೃಢಪಡಿಸಿದ್ದಾರೆ.

RELATED ARTICLES  ಆಯ ತಪ್ಪಿ ಬಾವಿಗೆ ಬಿದ್ದ ಮಗು ಸಾವು ; ಕುಟುಂಬದವರ ಆಕ್ರಂದನ