ಗೋಕರ್ಣ: ಗೋಕರ್ಣ ಸುತ್ತಮುತ್ತಲಿನ ಭಾಗಗಳಲ್ಲಿ ಬಿಡಾಡಿ ದನಗಳು ಕಳ್ಳರ ಪಾಲಾಗುತ್ತಿರುವ ಬಗ್ಗೆ ನಾಗರಿಕರಿಂದ ಆರೋಪ ಕೇಳಿ ಬಂದಿತ್ತು ಪೋಲೀಸ್ ಇಲಾಖೆ ಗಮನಕ್ಕೆ ಸಹ ತರಲಾಗಿತ್ತು, ಆದರೂ ಎಚ್ಚಿತ್ತಿಕೊಳ್ಳದ ಇಲಾಖೆ , ಈಗಾಲೇ ಹಲವಾರು ದನಗಳು ನಾಪತ್ತೆಯಾಗುತ್ತಿದ್ದು, ಮೊನ್ನೆ ಮತ್ತೆ ದನಗಳ ಅಪರಣಕ್ಕೆ ಪ್ರಯತ್ನ ನಡೆಸಿದ್ದಾರೆ.

ಈ ವೇಳೆ ತಪ್ಪಸಿಕೊಂಡ ಓಡಿ ಬಂದ ಎತ್ತೊಂದಕ್ಕೆ ಕೊಡಲಿಯಿಂದ ಗಾಯಗೊಳಿಸಲಾಗಿದೆ. ತೀರ ನಿಸ್ತೇಜವಾಗಿ ತಿರುಗಾಡುತ್ತಿದ್ದ ದನವನ್ನು ಇಲ್ಲಿನ ಮಹಾಬಲೇಶ್ವರ ದೇವಾಲಯದ ಅಮೃತಾನ್ನ ವಿಭಾಗದ ಗೋಶಾಲೆಯಲ್ಲಿ ತಕ್ಷಣ ಚಿಕಿತ್ಸೆ ಕೊಡಿಸಲಾಗಿದೆ.

RELATED ARTICLES  ಸಾಧಕರನ್ನು ಸನ್ಮಾನಿಸಿ ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ:ನಾಗರಾಜ ನಾಯಕ ತೊರ್ಕೆ

ಗ್ರಾಂ. ಪಂ. ಜಾಗದಲ್ಲೆ ಬಿಡಾಡಿ ದನಗಳಿಗಾಗಿ ಕೊಂಡವಾಡವಿದೆ ಇಲ್ಲಿ ಬಿಡಾಡಿದನಗಳನ್ನು ಕಟ್ಟಿ , ದನಗಳ ವಾರಸುದಾರರು ಬರುಂತೆ ಪ್ರಕಟಣೆ ಹೊರಡಿಸಿ , ಯಾರು ಬರದಿದ್ದರೆ ಗೋಶಾಲೆಗೆ ಬಿಡುವ ಕ್ರಮ ಕೈಗೊಳ್ಳ ಬೇಕಾಗಿರುವುದು ತುರ್ತು ಅವಶ್ಯವಿದೆ. ಆದರೆ ಇಂತಹ ಯಾವುದೇ ಕ್ರಮ ತೆಗೆದು ಕೊಳ್ಳದೆ ಗ್ರಾಮ ಪಂಚಾಯತ ಆಡಳಿತ ಕೈಕಟ್ಟಿ ಕುಳಿತಿದೆ. ಇದರಂತೆ ಪೊಲೀಸರು ಸಹ ಸಿಬ್ಬಂದಿ ಕೊರತೆ, ಯಾರು ದೂರು ದಾಖಲಿಸಿಲ್ಲ ಎಂಬ ನೆಪ ಮಾಡಿ ಮೌನಕ್ಕೆ ಶರಣಾಗಿದೆ.

RELATED ARTICLES  ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವ ನಾಳೆ.

ಗೋವುಗಳನ್ನು ಕಳ್ಳರನ್ನ ಹಿಡಿಯುವ ಪ್ರಯತ್ನ ಮಾಡಲು ಜನರು ಹೋದರೆ ಅವರ ಮೇಲೆ ದೂರು ದಾಖಲಾಗುತ್ತದೆ ಎಂದು ಹೆದರೆ ದೂರ ಉಳಿದಿದ್ದಾರೆ. ಒಟ್ಟಿನಲ್ಲಿ ಮೂಕ ಪ್ರಾಣಿಯ ವೇದನೆಗೆ ಸ್ಪಂದಿಸುವರು ಯಾರು ಇಲ್ಲದಿರುವುದು ದುರಂತವಾಗಿದೆ.