ಕುಮಟಾ: ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಪರವಾಗಿ ಉದ್ಯಮಿ ಸುಬ್ರಹ್ಮಣ್ಯ ಶಾಸ್ತ್ರಿಯವರು ಚುರುಕಿನ ಪ್ರಚಾರ ನಡೆಸುತ್ತಿದ್ದಾರೆ. ದಿನಕರ ಶೆಟ್ಟಿಯವರ ಆಪ್ತ ವಲಯದಲ್ಲಿ ಗುರ್ತಿಸಿಕೊಂಡಿರುವ ಅವರು ಶತಾಯ ಗತಾಯ ಪ್ರಯತ್ನ‌ಮಾಡಿ ಬಿಜೆಪಿ ಗೆಲ್ಲಿಸಬೇಕೆಂಬ ಪಣ ತೊಟ್ಟಂತೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

RELATED ARTICLES  ಮನೆಗೆ ಬಂದ ಕಬ್ಬೆಕ್ಕಿನ ರಕ್ಷಣೆ : ಗೋಕರ್ಣದಲ್ಲಿ ಘಟನೆ

ಹಳದೀಪುರದ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡ ಸುಬ್ರಹ್ಮಣ್ಯ ಶಾಸ್ತ್ರಿಯವರು ಗುಜರಾತ್ ಎಂ.ಪಿ ದೇವಸಿನ್ಹ ಜೀತೋಭಾಯ್ , ಉತ್ತರ ಪ್ರದೇಶದ ಶಾಸಕ ಹರೇಂದ್ರ ಸಿಂಗ್ ಜೊತೆಗೆ ಕಾಣಿಸಿಕೊಂಡರು. ಎಬಿವಿಪಿ ರಾಜ್ಯ ಪ್ರಮುಖರಾದ ಸತೀಶ ಸಿಂಗ್ ಕೂಡಾ ಜೊತೆಗಿದ್ದರು.

RELATED ARTICLES  ಲಾಕ್ ಡೌನ್ ಇದ್ದರೂ ಗೋಕರ್ಣದಲ್ಲಿ ಪಿತೃಕಾರ್ಯ : ಎರಡೂ ಕುಟುಂಬಕ್ಕೂ ಹೋಂ ಕ್ವಾರಂಟೈನ್…!

ಇವರೆಲ್ಲರೂ ಚುನಾವಣಾ ಕಾರ್ಯತಂತ್ರ ಹಾಗೂ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡರು ಎನ್ನಲಾಗಿದೆ. ಒಟ್ಟಿನಲ್ಲಿ ಚುನಾವಣಾ ಕಣ ಚುರುಕಾಗಿದ್ದು ಎಲ್ಲೆಡೆ ಪ್ರಚಾರದ ಭರಾಟೆ ಜೋರಾಗಿದೆ.ಸುಬ್ರಹ್ಮಣ್ಯ ಶಾಸ್ತ್ರಿಯವರ ಪ್ರಯತ್ನ ಬಿಜೆಪಿಗೆ ಬಲ‌ನೀಡಿದೆ ಎಂದೇ ವಿಶ್ಲೇಷಣೆ ನಡೆದಿದೆ.