ಕುಮಟಾ: ಚುನಾವಣಾ ಕಾವು ಜೋರಾದಂತೆ ಪಕ್ಷ ಸೇರ್ಪಡೆ ಕಾರ್ಯವೂ ಬಿರುಸಾಗುತ್ತಿದೆ. ಪ್ರದೀಪ ನಾಯಕರ ನಾಯಕತ್ವ ಮೆಚ್ಚಿ ಜನತೆ ಜೆಡಿಎಸ್ ಗೆ ಬೆಂಬಲವಾಗಿ ಬರುತ್ತಿರುವುದು ಪಕ್ಷಕ್ಕೆ ಹಾಗೂ ಪ್ರದೀಪ ನಾಯಕರಿಗೆ ಇನ್ನಷ್ಟು ಬಲನೀಡಿದೆ.
ಪ್ರದೀಪ ನಾಯಕ ದೇವರಬಾವಿ ನೇತ್ರತ್ವದಲ್ಲಿ ಜೆಡಿಸ್ ಪಕ್ಷ ಸೇರ್ಪಡೆ ಜೋರಾಗಿಯೇ ನಡೆಯುತ್ತಿದೆ. ವಾಲಗಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಾಗೂ ಕ್ಷೇತ್ರದ ಬೇರೆ ಬೇರೆ ಭಾಗಗಳಿಂದ ಬೇರೆ ಬೇರೆ ಪಕ್ಷಗಳಿಂದ ಜೆಡಿಎಸ್ ಸೇರ್ಪಡೆ ಯಾಗುತ್ತಿದ್ದಾರೆ. ನಾರಾಯಣ ಗಾಂಗಾಧರ ಮಡಿವಾಳ ವಾಲಗಳ್ಳಿ, ಜಯಾ ನಾರಾಯಣ ಮಡಿವಾಳ ವಾಲಗಳ್ಳಿ ,ಕುಪ್ಪು ನಾಗೂ ಗೌಡಾ ಶೋಕನ ಮಕ್ಕಿ,ಶ್ರೀಧರ ರಾಮಕೃಷ್ಣ ಭಟ್ಟ,ಉದಯ ಎಚ್ ಗೌಡ ಕರ್ಕಿ ಜೆಡಿಸ್ ಬತ್ತಳಿಕೆ ಸೇರಿದ್ದಾರೆ.
ಬಂಗಣೆ ಜನತೆಯಿಂದ ಜೆಡಿಎಸ್ ಗೆ ಬಲ
ಅದೇ ರೀತಿ ಕುಮಟಾ ಸಿದ್ದಾಪುರ ತಾಲೂಕಿನ ಗಡಿ ಪ್ರದೇಶವಾದ ಬಂಗಣೆ ದಟ್ಟ ಕಾನನದ ನಡುವೆ ಇರುವಂತಹ ಪುಟ್ಟ ಗ್ರಾಮವಾಗಿದೆ. ಕೃಷಿ ಚಟುವಟಿಕೆಗಳನ್ನು ಆಶ್ರಯಿಸಿ ಬದುಕು ಸಾಗಿಸುತ್ತಿರುವ ಜನರೇ ಹಿಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಬಹುತೇಕರು ಆಧುನಿಕ ಮೂಲ ಸೌಕರ್ಯದ ಕೊರತೆಯನ್ನು ಎದುರಿಸುತ್ತಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಪ್ರದೀಪ್ ನಾಯಕ್ ದೇವರಬಾವಿಯವರು ನೀಡಿದ ಭರವಸೆಯನ್ನು ಪುರಸ್ಕರಿಸಿ ಗ್ರಾಮಸ್ಥರು ಪ್ರದೀಪ್ ನಾಯಕ್ ಅವರ ನೇತ್ರತ್ವದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗೊಂಡರು.