ಹೊನ್ನಾವರ : ಕೆಕ್ಕಾರಿನ ಶ್ರೀ ರಘೂತ್ತಮ ಮಠದ ಆವಾರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಪ್ರತಿಷ್ಠಾಮಹೋತ್ಸವ ದಿನಾಂಕ 30/4/2018 ಹಾಗೂ 1/5/2018 ರಂದು ನಡೆಯಲಿದೆ.
ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮ ದಲ್ಲಿ 30 ರ ಬೆಳಿಗ್ಗೆ 2.50 ಕ್ಕೆ ಸರಸ್ವತೀ ಯಾಮದಲ್ಲಿ ಶ್ರೀ ರಾಜರಾಜೇಶ್ವರೀ ದೇವಿಯ ಪ್ರತಿಷ್ಠೆ ನಡೆಯಲಿದ್ದು ಮೇ 1 ರಂದು ಬ್ರಹ್ಮಕಲಶಾಭಿಷೇಕ,ಚಂಡೀಹವನದ ಪೂರ್ಣಾಹುತಿ, ಧರ್ಮಸಭೆ ನಡೆಯಲಿದೆ.
ಈ ಪುಣ್ಯಕಾರ್ಯದಲ್ಲಿ ಸರ್ವರೂ ಭಾಗವಹಿಸಿ ಜಗನ್ಮಾತೆಯ ಹಾಗೂ ಜಗದ್ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ರಾಜರಾಜೇಶ್ವರೀ ಪ್ರತಿಷ್ಟಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.