ಕುಮಟಾ:ಇಂದು ಬಿಜೆಪಿ ಅಭ್ಯರ್ಥಿ ಶ್ರೀ ದಿನಕರ ಶೆಟ್ಟಿ ಯವರು ಬಂಗಣೆ ಶಕ್ತಿ ಕೇಂದ್ರದಲ್ಲಿ ಬಿರುಸಿನ ಪ್ರಚಾರ ಮಾಡಿದರು. ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪ ರವರು ಇರುವಾಗ ತಮ್ಮ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಯ೯ಗಳನ್ನು ಮಾಡಿದ್ದೇನೆ ಈ ಭಾಗದಲ್ಲಿ ಈಗಲೂ ಅಭಿವೃದ್ಧಿ ಮಾಡಲು ಬಿಜೆಪಿಗೆ ಮತ ನೀಡಿ ಎಂದರು. ಮೋದಿ ಯವರ ಹಲವಾರು ಯೋಜನೆಗಳ ಕುರಿತು ತಿಳಿಸಿದರು. ವಿದ್ಯುತ್ ಸಂಪರ್ಕ ಇಲ್ಲದ ಬಂಗಣೆ ಸುತ್ತಲಿನ ಪ್ರದೇಶದಲ್ಲಿ ಮೋದಿ ಯವರ ಯೋಜನೆ ಉಪಕಾರಿ ಯಾಗಿದೆ. ಈ ಯೋಜನೆ ಗುಡ್ಡಗಾಡು ಜನರಿಗೆ ವರದಾನವಾಗಿದೆ ಎಂದರು.
ಎಲ್ಲೆಲ್ಲಿ ಪ್ರಚಾರ
ಬಾಸಳ್ಳಿಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಯವರು ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಕೇಳಿಕೊಂಡರು.ಬಿಜೆಪಿ ಪ್ರಧಾನಿ ಮೋದಿ ಯವರ ಸಾಧನೆ ಕುರಿತು ವಿವರಿಸಿದರು.ಕಪ್ಪು ಹಣದ ಕುರಿತು ಮೋದಿಯವರ ದಿಟ್ಟ ನಿಧಾ೯ರ ಕುರಿತು ಚಚಿ೯ಸಿದರು. ಸಿದ್ದರಾಮಯ್ಯ ನಿದ್ದೆ ರಾಮಯ್ಯ ಯಾವುದೇ ಅಭಿವೃದ್ಧಿ ಮಾಡದೇ ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿ ಕರಿತು ಬೋಗಳೆ ಬಿಡುವ ಸರ್ಕಾರ ಎಂದು ಹೇಳಿದರು.ಈ ಸಂದರ್ಭದಲ್ಲಿ ಸುರೇಶ ನಾಯ್ಕ, ರಾಮಚಂದ್ರ ನಾಯ್ಕ, ನಾಗೇಶ ನಾಯ್ಕ, ದಿಲೀಪ ನಾಯ್ಕ, ಗೋಪಾಲ ಗೌಡಾ ಹಾಗೂ ನೂರಾರು ಬೆಂಬಲಿಗರು ಹಾಜರಿದ್ದರು.
ಅದೇ ರೀತಿ ಪೈರಗದ್ದೆಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಯವರು ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಕೇಳಿಕೋಂಡರು.ಪ್ರಧಾನಿ ಮೋದಿ ಯವರ ಸಾಧನೆ ಕುರಿತು ವಿವರಿಸಿದರು.ಕಪ್ಪು ಹಣದ ಕುರಿತು ಮೋದಿಯವರ ದಿಟ್ಟ ನಿಧಾ೯ರ ಕುರಿತು ಚಚಿ೯ಸಿದರು. ಸಿದ್ದರಾಮಯ್ಯ ನಿದ್ದೆ ರಾಮಯ್ಯ ಯಾವುದೇ ಅಭಿವೃದ್ಧಿ ಮಾಡದೇ ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿ ಕುರಿತು ಬೊಗಳೆ ಬಿಡುವ ಶಾಸಕರು ಹಾಗೂ % ಸರ್ಕಾರ ಎಂದು ಹೇಳಿದರು.ಪರೇಶ್ ಮೆಸ್ತಾ ಸಾವನ್ನು ಒಮ್ಮೆ ಊಹಿಸಿ ನೋಡಿ. ನಮ್ಮ ಮಕ್ಕಳಿಗೆ ನಡು ರಸ್ತೆಯಲ್ಲಿ ಕೊಚ್ಚಿ ನೀರಿನಲ್ಲಿ ಹಾಕುವ ಕೊಲೆಗಡುಕರ ಸರ್ಕಾರ ಕಿತ್ತು ಮೋದಿಯವರ ಕನಸಿನ ಭಾರತದ ನಿಮಾ೯ಣಕ್ಕಾಗಿ ಕೈ ಜೊಡಿಸಿ ಎಂದರು.
ನಾನು ಕಳೆದ ಚುನಾವಣೆ ಸಂದರ್ಭದಲ್ಲಿ 420 ಮತಗಳಿಂದ ಸೋತಿದ್ದೇನೆ. ನನ್ನ ಜೊತೆ ಟಿಕೆಟ್ ರೇಸ್ ನಲ್ಲಿ ಡಾ.ಜಿ.ಜಿ.ಹೆಗಡೆ, ನಾಗರಾಜ್ ನಾಯ್ಕ, ಸುಬ್ರಾಯ ವಾಳ್ಕೆ, ವೆಂಕಟ್ರಮಣ ಹೆಗಡೆ, ಹಾಗೂ ಹಲವಾರು ಆಕಾಕ್ಷಿಗಳಿದ್ದರು ಆದರೆ ನನ್ನ ಬಗ್ಗೆ ಜನಾಭಿಪ್ರಾಯ ಇರುವ ಕಾರಣ ಪಕ್ಷ ನನಗೆ ಟಿಕೆಟ್ ನೀಡಿದೆ. ನನ್ನ ಜೋತೆ ಎಲ್ಲಾ ಟಿಕೆಟ ಆಕಾಂಕ್ಷಿಗಳು ಒಳ್ಳೆಯ ಮನಸ್ಸಿನಿಂದ ಪಕ್ಷದ ಜೋತೆ ಇದಾರೆ. ಆದರೆ ಒಂದೆರಡು ಜನಾ ಮಾತ್ರ ಪಕ್ಷದ ಸಿದ್ಧಾಂತ ವಿರೋಧ ಹೋಗಿದ್ದಾರೆ… ಪರೇಶ ಮೆಸ್ತಾ ಕೇಸ್ ಅಲ್ಲಿ ನಾನು ಜನಸಾಮಾನ್ಯರ ರಕ್ಷಣೆ ಗೆ ನಿಂತಿದ್ದೇನೆ ನಾನು ಕೂಡಾ ಹಿಂದೂ ಪರವಾಗಿ ಹೋರಾಟ ಮಾಡಿದ್ದೇನೆ ಹಾಗಂತ ಯಾವುದೇ ಕಾರಣಕ್ಕೂ ಟಿವಿ ಚಾನೆಲ್ ಗಳಲ್ಲಿ ನಾನು ಯಾವುದೇ ಬಾಯ್ಟ್ಸ ಕೊಡಲಿಲ್ಲಾ ಆದರೆ ಕೆಲವು ಪ್ರಚಾರ ಪ್ರಿಯರು ಟಿ.ವಿ ಯಲ್ಲಿ ಬಾಯ್ಟ್ಸ ಕೊಟ್ಟು ಹೆಸರು ಗಿಟ್ಟಿಸಿಕೊಂಡಿದ್ದಾರೆ.ನಾನು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈ ಬಾರಿ ನನಗೆ ಶಿಕ್ಷೆ ಕೊಡಬೇಡಿ ಈ ಬಾರಿ ನನಗೆ ಓಟು ಕೊಟ್ಟು ಗೆಲ್ಲಿಸಿ ಎಂದು ಮೂರೂರಿನ ಶಕ್ತಿ ಕೇಂದ್ರದಲ್ಲಿ ತಿಳಿಸಿದರು.