ಕುಮಟಾ : ಕುಮಟಾ ಹೊನ್ನಾವರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸೂರಜ್ ನಾಯ್ಕ ಸೋನಿಯವರು ತಮ್ಮ ಮತ ಬೇಟೆ ಪ್ರಾರಂಭಿಸಿದ್ದು ಚುರುಕಿನ ಪ್ರಚಾರ ಕಾರ್ಯ ನಡೆಸಿದ್ದಾರೆ.

ಇಂದು ವಿವಿದೆಡೆ ಪ್ರಚಾರ ನಡೆಸಿದ ಅವರು ತಮ್ಮ ಬೆಂಬಲಿಗರೊಂದಿಗೆ ತಮ್ಮ ಚಿನ್ಹೆಯಾದ ರಿಕ್ಷಾದಲ್ಲಿಯೇ ತೆರಳಿ ಪ್ರಚಾರ ನಡೆಸಿದರು ಎನ್ನಲಾಗಿದೆ.

RELATED ARTICLES  ಇಬ್ಬರು ಶಿರಸಿಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ :ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

ಮಲ್ಲಾಪುರ ಗ್ರಾಮಕ್ಕೆ ಭೇಟಿನೀಡಿ ಗ್ರಾಮಸ್ಥರನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು. ಅದೇ ರೀತಿ ಹೊನ್ನಾವರದ ದರ್ಬೆಜಡ್ಡಿ ಗೆ ಭೇಟಿನೀಡಿ ಜನರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

RELATED ARTICLES  ಬಾಲಚಂದ್ರ ಹೆಬ್ಬಾರರಿಗೆ ಗೌರವ ಫೆಲೋಶಿಪ್

ಅದಷ್ಟೇ ಅಲ್ಲದೇ ಇನ್ನೂ ಅನೇಕ ಕಡೆಗಳಲ್ಲಿ ತಮ್ಮ ಪ್ರಚಾರ ಕಾರ್ಯ ನಡೆಸಿದ್ದು ಗೆಲುವಿನ ನಗೆ ಬೀರಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.