ಪ್ರಯಾಣ ಮಾಡುವುದು ಎಲ್ಲರಿಗೂ ಇಷ್ಟ. ಸಾಮಾನ್ಯವಾಗಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಬಿಸ್ಕೆಟ್, ಚಿಪ್ಸ್ ನಾನಾ ರೀತಿಯ ಅನಾರೋಗ್ಯ ಉಂಟು ಮಾಡುವ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವುದೇ ಹೆಚ್ಚು.
ಪ್ರಯಾಣ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಈ ಸಂದರ್ಭದಲ್ಲಿಯೇ ಹೆಚ್ಚು ಆರೋಗ್ಯಕರವಾದ ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ. ಆದರೆ, ಇದನ್ನು ಎಷ್ಟೋ ಮಂದಿ ಪಾಲನೆ ಮಾಡದೇ, ಪ್ರಯಾಣ ಅಂತ್ಯಗೊಳ್ಳುವಷ್ಟರಲ್ಲಿ ಅನಾರೋಗ್ಯಕ್ಕೀಡಾಗುತ್ತಾರೆ.
ಹಾಗಾದರೆ, ಪ್ರಯಾಣ ಸಂದರ್ಭದಲ್ಲಿ ಯಾವ ಆಹಾರವನ್ನು ಸೇವನೆ ಮಾಡಬೇಕು…? ಈ ಪ್ರಶ್ನೆಗೆ ಕೆಲ ಉತ್ತರ ಹಾಗೂ ಸಲಹೆಗಳು ಈ ಕೆಳಕಂಡಂತಿವೆ…
ಪ್ರಯಾಣದ ಸಂದರ್ಭದಲ್ಲಿ ಗಟ್ಟಿ ಪದಾರ್ಥಗಳನ್ನು
ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
ದ್ರಾಕ್ಷಿ, ಗೋಡಂಬಿ, ಬಾದಾಮಿ ಸೇರಿದಂತೆ ಒಣಗಿದ ಹಣ್ಣುಗಳನ್ನು ಸೇವನೆ ಮಾಡಬೇಕು.
ನೀರಿಗಾಗಿ ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಸ್ಟೀಲ್ ಬಾಟಲ್ ಗಳನ್ನು ಬಳಸುವುದು ಉತ್ತಮವಾಗಿರುತ್ತದೆ. ವಿಮಾನ ಪ್ರಯಾಣ ಸಂದರ್ಭದಲ್ಲಿ ಹಲವು ಬಾರಿ ಹಸಿವು ಹಾಗೂ ಬಾಯಾರಿಕೆ ನಡುವಿನ ವ್ಯತ್ಯಾಸಗಳು ತಿಳಿಯುವುದೇ ಇಲ್ಲ. ವಿಮಾನ ಪ್ರಯಾಣದ ವೇಳೆ ಹೆಚ್ಚಾಗಿ ನೀರು ಕುಡಿಯಬೇಕು.
ಟೀ ಹಾಗೂ ಕಾಫಿಗಳಿಂದ ದೂರವಿದ್ದು, ಕನಿಷ್ಟ ಎಂದರೂ 2 ಲೀಟರ್ ನೀರನ್ನು ಕುಡಿಯಬೇಕು.
ಪ್ರಯಾಣದ ವೇಳೆ ಹರ್ಬಲ್ ಟೀ ಬ್ಯಾಗ್ ಗಳನ್ನು ಇಟ್ಟುಕೊಂಡಿರಬೇಕು. ಪ್ರಯಾಣದ ವೇಳೆ ಬಿಸಿನೀರು ಸಿಕ್ಕಾಗ ಈ ಟೀ ಬ್ಯಾಗ್ ಬಳಸಿಕೊಂಡು ಹರ್ಬಲ್ ಟೀ ಗಳನ್ನು ಕುಡಿಯುತ್ತಿರಬೇಕು.
ಕ್ಯಾರೆಟ್, ಸೌತೇಕಾಯಿ, ಸಿಹಿ ಇಲ್ಲದ ಬಾದಾಮಿ ಹಾಲನ್ನು ಕುಡಿದರೆ ಪ್ರಯಾಣದ ಸಂದರ್ಭದಲ್ಲಿ ಯಾವ ಸಮಸ್ಯೆಗಳು ಎದುರಾಗುವುದಿಲ್ಲ.
ಚಾಕಲೇಟ್ ಪ್ರಿಯರಾದರೆ, ಶೇ.70-58 ರಷ್ಟು ಡಾರ್ಕ್ ಚಾಕಲೇಟ್ ಗಳನ್ನು ತಿನ್ನಬಹುದು.
ಪ್ರಯಾಣದ ಸಂದರ್ಭದಲ್ಲಿ ಮದ್ಯಪಾನದಿಂದ ದೂರವಿದ್ದಷ್ಟು ಬಹಳ ಒಳ್ಳೆಯದು.
ಶುಂಠಿ ಹಾಗೂ ಪುದೀನಾದಲ್ಲಿ ಮಾಡಿದ್ದ ಟೀ ಸೇವನೆ ಮಾಡುವುದಿರಂದ ಇದು ಜೀರ್ಣಕ್ರಿಯೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೂಕ್ತ ಸಮಯಕ್ಕೆ ತಕ್ಕಂತೆ ಆರೋಗ್ಯಕರ ಸ್ನ್ಯಾಕ್ಸ್ ಗಳ ಸೇವನೆ ಕೂಡ ಅಗತ್ಯ. ವೈಟ್ ರೈಸ್ ಬದಲಿಗೆ ಬ್ರೌನ್ ರೈಸ್ ತಿನ್ನುವುದು ಅತ್ಯುತ್ತಮ. ಒಂದು ವೇಳೆ ಇದು ಸಾಧ್ಯವಾಗದೆ ಹೋದರೆ ಓಟ್ಸ್ ತಿನ್ನಬಹುದು. ಆಗಾಗ ಫ್ರೆಷ್ ಜ್ಯೂಸ್ ಗಳ ಕುಡಿಯುವುದು ಕೂಡ ಅತ್ಯುತ್ತಮ.