ಕುಮಟಾದ ಬಿಜೆಪಿ ಪಾಳೆಯದಲ್ಲಿ ನಿನ್ನೆ ಸಂಭ್ರಮದ ವಾತಾವರಣ.ಒಂದುಕಡೆ ಬಹುಕಾಲದ ತನಕ ತಟಸ್ಥರಾಗಿದ್ದ ಹಳೆಯ ಬಿಜೆಪಿಗರು ಶಾಲುಕೊಡವಿ ಪ್ರಚಾರಕ್ಕೆ ಹೊರಡಲು ಸಿದ್ದವಾಗಿದ್ದರೆ.ದಿನಕರ ಶೆಟ್ಟರ ಬಹುಕಾಲದ ಸ್ನೇಹಿತರು ಅಭಿಮಾನಿಗಳು ಈ ಬಾರಿ ಶತಾಯಗತಾಯ ಗೆಲ್ಲಲೇ ಬೇಕೆಂಬ ಛಲದಲ್ಲಿದ್ದಾರೆ.

ಉತ್ತರದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯ ವಿಜಯದ ಪತಾಕೆ ಹಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಉಪಾಧ್ಯಕ್ಷರಾದ ಓಂಪ್ರಕಾಶ್ ಮಾಥೂರ್ ಅವರನ್ನು ಕರಾವಳಿ ಪ್ರಾಂತಕ್ಕೆ ನೇಮಿಸಿರುವುದು
ಪ್ರತೀ ಹಂತದಲ್ಲೂ ಚಾಣಾಕ್ಷ ತಂತ್ರ ರಚಿತವಾಗುತ್ತಿರುವುದು ಹಿಂದೆಂದೂ ಕಾಣದ ವಾತಾವರಣ ನಿರ್ಮಾಣವಾಗಿದೆ.

RELATED ARTICLES  20ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥ: ಕಲುಷಿತ ನೀರು ಸೇವನೆ.

ಇದರಜೊತೆಗೆ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜಿಪಿಯ ನೇರ ಎದುರಾಳಿಯಾದರೂ ಜೆಡಿಎಸ್ ಹಾಗೂ ಪಕ್ಷೇತರರು ಪ್ರಭಾವ ಹೊಂದಿರುವುದು ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆಯೇರ್ಪಡುವ ಎಲ್ಲ ಸಂಭವಗಳು ಕಾಣಿಸುತ್ತಿದೆ.
ಬಿಜೆಪಿಯ ಪರಂಪರಾಗತ ಮತಗಳ ಜೊತೆಗೆ ಆಡಳಿತ ವಿರೋಧಿಮತಗಳು ಹಾಗೂ ದಿನಕರ ಶೆಟ್ಟಿಯವರ ವೈಯಕ್ತಿಕ ಮತಗಳು ಕ್ರೂಡೀಕರಣ ಆಗುವುದರಿಂದ ಈ ಬಾರಿ ಗೆಲುವು ಸುಲಭ ಎಂಬ ಉತ್ಸಾಹದಿಂದ ಬಿಜೆಪಿಗರು ಬೀಗುತ್ತಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಸ್ವಂತ ಉದ್ಯೋಗ ಹುಡುಕುವವರಿಗೆ ಶುಭ ಸುದ್ದಿ.

ಜೊತೆಗೆ ಹೆಚ್ಚಿನ ಜಿಲ್ಲಾ ಪಂಚಾಯತ ಸದಸ್ಯರು ದಿನಕರ ಶೆಟ್ಟರ ಪರವಾಗಿದ್ದಾರೆ.ಪಟ್ಟಣ ಪ್ರದೇಶಗಳಲ್ಲಿ ಅತೀ ಹೆಚ್ಚು ಪ್ರಮಾಣದ ಮತಗಳನ್ನು ಬಿಜೆಪಿ ಬಾಚಲಿದೆ ಎಂಬುದು ಪಕ್ಷದ ಲೆಕ್ಕಾಚಾರ