ಕಾರವಾರ:ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ ಕಾರವಾರ-ಅಂಕೋಲಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ವಿವಿಧ ಭಾಗದಲ್ಲಿ ಪ್ರಚಾರ ನಡೆಸಿದರು.
ಕಾರವಾರ ನಗರದ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪೂಜಾ ಗಾಂಧಿ, ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ನೋಡಿರುವ ನಾವು ಈ ಭಾರಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನ್ನು ಬೆಂಬಲಿಸಬೇಕಿದೆ ಎಂದರು.

RELATED ARTICLES  ಉತ್ತರ ಕನ್ನಡ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಆರ್.ಜೆ. ಜೋಷಿ

ರಾಜ್ಯದ ಹಾಗೂ ಈ ಭಾಗದ ಕ್ಷೇತ್ರದ ಅಭಿವೃದ್ಧಿಗೆ ಈ ಭಾರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು. ಕ್ಷೇತ್ರದಲ್ಲಿನ ನಿರುದ್ಯೋಗ ಸಮಸ್ಯೆ, ಪ್ರವಾಸೋದ್ಯಮ ಬೆಳವಣಿಗೆ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಅವರನ್ನು ಬೆಂಬಲಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಮಾತನಾಡಿದ ಆನಂದ್ ಅಸ್ನೋಟಿಕರ್, ಗೋವಾ ಗಡಿಭಾಗವಾದ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ನಟಿ ಪೂಜಾಗಾಂಧಿ ಜೆಡಿಎಸ್ ಪರ ಪ್ರಚಾರ ನಡೆಸುತ್ತಿರುವುದಕ್ಕೆ ಜನರು ಖುಷಿಯಾಗಿದ್ದಾರೆ. ಎರಡು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಜನರು ಈ ಭಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಭರವಸೆ ಇದೆ ಎಂದು ಹೇಳಿದರು. ಬಳಿಕ ಪೂಜಾ ಗಾಂಧಿ ಜನರ ಒತ್ತಾಯದಂತೆ ಮುಂಗಾರು ಮಳೆಯ ಹಾಡೊಂದನ್ನು ಹಾಡಿ ಜನರನ್ನು ರಂಜಿಸಲು ಯತ್ನಿಸಿದರು.

RELATED ARTICLES  ಹಿಂದೂಗಳ ಮೇಲೆ ಹಾಡು ಹಗಲೇ ಕೇರಳ ಸರ್ಕಾರವು ಅತ್ಯಾಚಾರ ನಡೆಸಿದೆ: ಅನಂತ್ ಕುಮಾರ್ ಹೆಗಡೆ