ವಿಜ್ಞಾನ ವಿಭಾಗದಲ್ಲಿ 99%, ದಾಖಲೆ ಫಲಿತಾಂಶ

ಕುಮಟಾ : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ 99% ಫಲಿತಾಂಶ ದಾಖಲಾಗಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಪರೀಕ್ಷೆ ಎದುರಿಸಿದ 76 ವಿದ್ಯಾರ್ಥಿಗಳಲ್ಲಿ 41 ವಿದ್ಯಾರ್ಥಿಗಳು ಶೇಕಡಾ 85ಕ್ಕಿಂತ ಅಧಿಕ ಅಂಕಗಳಿಸಿದರೆ 34 ವಿದ್ಯಾರ್ಥಿಗಳು ಪ್ರಥಮ ಶ್ರೇಣ ಯಲ್ಲಿ ಪಾಸಾಗಿರುತ್ತಾರೆ.
2. Niranjan Bhandarkar
ಕುಮಾರ ಮುಕುಂದ ನಾಯಕ ಶೇ 97.66 ಅಂಕ ಗಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ, ನಿರಂಜನ ಭಂಡಾರಕರ ಶೇ 97.5 ಅಂಕ, ಭೂಮಿಕಾ ಭಟ್ ಶೇ 96.66 ಅಂಕ ಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಅಲ್ಲದೇ ರಸಾಯನ ಶಾಸ್ತ್ರದಲ್ಲಿ ಇಬ್ಬರು, ಗಣಕ ವಿಜ್ಞಾನದಲ್ಲಿ ನಾಲ್ಕು, ಗಣ ತದಲ್ಲಿ ಇಬ್ಬರು ಮತ್ತು ಭೌತಶಾಸ್ತ್ರದಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಗಳಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

RELATED ARTICLES  ಕಾರವಾರ ಜಿಲ್ಲಾಡಳಿತದಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ

3. Bhoomika Bhat

ಇದು ಕಾಲೇಜಿನ ಉತ್ತಮ ಫಲಿತಾಂಶ ವಾಗಿದ್ದು. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು, ಮಾನ್ಯ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಉತ್ತರಕನ್ನಡ ಮತ್ತು ಸಂಸ್ಥೆಯ ಅಧ್ಯಕ್ಷರು ಮತ್ತು ವಿಶ್ವಸ್ಥರು ಅಭಿನಂದನೆ ಸಲ್ಲಿಸಿರುತ್ತಾರೆ.

RELATED ARTICLES  ರಸ್ತೆಯಂಚಿನ ಕಾಲುವೆಗೆ ಬಿದ್ದ ಕಾರು : ಪುಟ್ಟ ಮಗು ಸೇರಿ ಐವರಿಗೆ ಪೆಟ್ಟು.