ಬೆಂಗಳೂರು: ಆರನೇ ವೇತನ ಆಯೋಗವು ತನ್ನ 2ನೇ ಶಿಫಾರಸ್ಸನ್ನು ರಾಜ್ಯ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಹಸ್ತಾಂತರಿಸಿದೆ. ನೀತಿ ಸಂಹಿತೆ ಮುಗಿದ ನಂತರ ಶಿಫಾರಸ್ಸುಗಳನ್ನು ಪರಿಶೀಲಿಸಲಾಗುವುದು ಎಂದು ರತ್ನಪ್ರಭಾ ಅವರು ಹೇಳಿದ್ದಾರೆ.
ಎಂ.ಆರ್.ಶ್ರೀನಿವಾಸ್ ಅಧ್ಯಕ್ಷತೆಯ ಆರನೇ ವೇತನ ಆಯೋಗವು ತನ್ನ ಮೊದಲ ಶಿಫಾರಸ್ಸನ್ನು ಇದೇ ವರ್ಷದ ಜನವರಿ 31ರಂದು ಸಲ್ಲಿಸಿತ್ತು. ವೇತನ ಹೆಚ್ಚಳ ಸಂಬಂಧಿಸಿದ ಮೊದಲ ಶಿಫಾರಸ್ಸನ್ನು ಸರ್ಕಾರ ಈಗಾಗಲೇ ಅನುಷ್ಠಾನಕ್ಕೆ ತಂದಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ನಿರೀಕ್ಷೆಗಿಂತ ಹೆಚ್ಚಿನ ವೇತನ! 500 ಪುಟಗಳ ಎರಡನೇ ವರದಿಯಲ್ಲಿ ಮುಖ್ಯವಾದ ಕೆಲವು ಶಿಫಾರಸ್ಸುಗಳನ್ನು ಮಾಡಿದ್ದು, ನೌಕರರಿಗೆ ಎರಡನೇ ಶನಿವಾರದ ರಜೆಯ ಜೊತೆಗೆ ನಾಲ್ಕನೇ ಶನಿವಾರವೂ ರಜೆ ನೀಡುವಂತೆ ಶಿಫಾರಸ್ಸು ಮಾಡಿರುವುದು ಪ್ರಮುಖವಾಗಿದೆ.